Home News ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಎಂ. ರವಿಚಂದ್ರ ಅವಿರೋಧ ಆಯ್ಕೆ

ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಎಂ. ರವಿಚಂದ್ರ ಅವಿರೋಧ ಆಯ್ಕೆ

0
S.M. Ravichandra garlanded after being elected Sorakayalahalli milk cooperative president

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕಸಬಾ ಹೋಬಳಿಯ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೊರಕಾಯಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಎಂ. ರವಿಚಂದ್ರ ಅವಿರೋಧವಾಗಿ ಆಯ್ಕೆಯಾದರು.

ಅವಿರೋಧ ಆಯ್ಕೆ ಹೇಗೆ ನಡೆಯಿತು?

ಹಿಂದಿನ ಅಧ್ಯಕ್ಷ ಎಂ. ಸುರೇಶ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ನಡೆದ ಚುನಾವಣೆಯಲ್ಲಿ, 11 ನಿರ್ದೇಶಕರಿರುವ ಸಂಘದ ಅಧ್ಯಕ್ಷ ಸ್ಥಾನಕ್ಕೆ ರವಿಚಂದ್ರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ಮಂಜುನಾಥ್ ಕಾರ್ಯನಿರ್ವಹಿಸಿದರು.

“ಎಲ್ಲ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಅಭಿವೃದ್ಧಿಗೆ ಶ್ರಮಿಸುವುದಾಗಿ” ನೂತನ ಅಧ್ಯಕ್ಷ ಎಸ್.ಎಂ. ರವಿಚಂದ್ರ ತಿಳಿಸಿದರು. ಮಾಜಿ ಅಧ್ಯಕ್ಷ ಎಂ. ಸುರೇಶ್ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್. ನಂಜಪ್ಪ ಅವರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಸ್.ಎಂ. ದಾಸ್, ಸಂಘದ ನಿರ್ದೇಶಕರಾದ ಎಸ್.ವಿ. ಕೃಷ್ಣಪ್ಪ, ನರಸಿಂಹಯ್ಯ, ಸುಧಾಕರ್, ಬಲರಾಮ, ಕೃಷ್ಣಪ್ಪ, ರಾಮಕೃಷ್ಣಪ್ಪ, ಸುಗುಣಮ್ಮ, ಪಿಳ್ಳಮ್ಮ, ಕಾರ್ಯದರ್ಶಿ ವಿ. ನಾಗಚಂದ್ರ, ಹಾಲು ಪರೀಕ್ಷಕ ಮುನಿರಾಜು, ಮುಖಂಡರಾದ ದ್ಯಾವಪ್ಪ, ಸಂಜೀವಯ್ಯ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ತಾಲ್ಲೂಕಿನ ಇತರ ಹಾಲು ಉತ್ಪಾದಕರ ಸಂಘಗಳ ಕುರಿತು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ₹4.38 ಲಕ್ಷ ನಿವ್ವಳ ಲಾಭ: ಸದಸ್ಯರಿಗೆ ಲೀಟರ್‌ಗೆ ₹1.80 ಬೋನಸ್ ಹಾಗೂ ಸಹಕಾರ ಸಂಘಗಳಲ್ಲಿ ರಾಜಕೀಯಕ್ಕೆ ಅವಕಾಶ ಬೇಡ: ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ವರದಿಗಳನ್ನೂ ಓದಿ.

In English: S.M. Ravichandra has been elected unopposed as president of the Sorakayalahalli Milk Producers’ Cooperative Society under Tummanahalli Gram Panchayat in Kasaba hobli, Sidlaghatta taluk. The election was held after former president M. Suresh resigned, and Ravichandra was the only candidate to file a nomination for the post in the 11-director society; Manjunath was the returning officer. Ravichandra said he would work for the society’s development by taking all directors into confidence, and former president M. Suresh and former gram panchayat president R. Nanjappa wished the new office-bearers well.

For Daily Updates WhatsApp ‘HI’ to 7406303366

error: Content is protected !!
Exit mobile version