Home News ಸೊರಕಾಯಲಹಳ್ಳಿ ಹಾಲು ಉತ್ಪಾದಕರ ಸಂಘ: ₹1.33 ಲಕ್ಷ ನಿವ್ವಳ ಲಾಭ, ವಾರ್ಷಿಕ ಸಭೆ

ಸೊರಕಾಯಲಹಳ್ಳಿ ಹಾಲು ಉತ್ಪಾದಕರ ಸಂಘ: ₹1.33 ಲಕ್ಷ ನಿವ್ವಳ ಲಾಭ, ವಾರ್ಷಿಕ ಸಭೆ

0
sidlaghatta sorakayalahalli dairy cooperative agm 2025 26

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸೊರಕಾಯಲಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸಂಘದ ಆವರಣದಲ್ಲಿ ಸೋಮವಾರ ನಡೆಯಿತು.

ಸಭೆಯಲ್ಲಿ 2025-26ನೇ ಸಾಲಿನ ಆಡಿಟ್ ವರದಿ ಮಂಡಿಸಿ, ಲಾಭ ಹಂಚಿಕೆ ಕುರಿತು ಚರ್ಚಿಸಲಾಯಿತು. 2026-27ನೇ ಸಾಲಿನ ಬಜೆಟ್ ಮುಂಗಡ ಪತ್ರಕ್ಕೆ ಅನುಮೋದನೆ ನೀಡುವುದರ ಜತೆಗೆ ನೂತನ ಲೆಕ್ಕ ಪರಿಶೋಧಕರ ನೇಮಕ ಹಾಗೂ ಸಂಭಾವನೆ ನಿಗದಿಗೆ ತೀರ್ಮಾನ ಕೈಗೊಳ್ಳಲಾಯಿತು.

ಚಿಮುಲ್ ನಿರ್ದೇಶಕ ಹುಜಗೂರು ರಾಮಣ್ಣ ಮಾತನಾಡಿ, ಆರಂಭದಲ್ಲಿ ಹಲವು ಅಡಚಣೆಗಳನ್ನು ಎದುರಿಸಿದ್ದ ಡೈರಿ, ಆಡಳಿತ ಮಂಡಳಿ, ಕಾರ್ಯದರ್ಶಿ ಹಾಗೂ ರೈತರ ಒಗ್ಗಟ್ಟಿನ ಶ್ರಮದಿಂದ ಇಂದು ಮಾದರಿ ಸಂಸ್ಥೆಯಾಗಿ ಹೊರಹೊಮ್ಮಿದ್ದು, ₹2ರಿಂದ ₹3 ಲಕ್ಷ ಉಳಿತಾಯ ಮಾಡುವ ಹಂತಕ್ಕೆ ತಲುಪಿದೆ ಎಂದರು.

ಚಿಮಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, 1996-97ರಲ್ಲಿ ಸ್ಥಾಪನೆಯಾದ ಸಂಘಕ್ಕೆ ಅನುದಾನ ಕೊಡಿಸಿ ಸ್ವಂತ ಕಟ್ಟಡ ನಿರ್ಮಿಸಲಾಗಿತ್ತು. ಹಿಂದೆ ಸಾಲ ವಸೂಲಿ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಸಂಘವು ಈಗ ಕಾರ್ಯದರ್ಶಿಯ ಕಾರ್ಯನಿರ್ವಹಣೆಯಿಂದ ₹1,33,993.94 ನಿವ್ವಳ ಲಾಭ ಗಳಿಸುತ್ತಿರುವುದು ಶ್ಲಾಘನೀಯ ಎಂದರು.

ಶಿಡ್ಲಘಟ್ಟ ಶಿಬಿರದ ವಿಸ್ತರಣಾಧಿಕಾರಿ ಎನ್. ಸತ್ಯನಾರಾಯಣ ಅವರು ಸಂಘದ ಆರ್ಥಿಕ ಪ್ರಗತಿಯ ಲೆಕ್ಕಪತ್ರ ಮಂಡಿಸಿ, ಹಾಲಿನ ವ್ಯಾಪಾರ, ಫೀಡ್ಸ್ ಮಾರಾಟ, ಸ್ಥಳೀಯ ಮಾರಾಟ ಹಾಗೂ ಸ್ಯಾಂಪಲ್ ಹಾಲಿನ ಆದಾಯ-ವೆಚ್ಚಗಳ ವಿವರ ನೀಡಿದರು. ಎಲ್ಲ ನಿರ್ವಹಣಾ ವೆಚ್ಚಗಳನ್ನು ಕಳೆದ ಬಳಿಕ ಸಂಘವು ₹1,33,993.94 ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಎಂ. ಸುರೇಶ್, ಉಪಾಧ್ಯಕ್ಷ ಮಹಬೂಬ್ ಪಾಷಾ, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಟಿ.ಎಲ್. ಅಂಬರೀಶ್, ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಶಿಡ್ಲಘಟ್ಟ ಶಿಬಿರದ ಉಪ ವ್ಯವಸ್ಥಾಪಕ ಬಿ.ಆರ್. ರವಿಕಿರಣ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್. ನಂಜಪ್ಪ, ಮಾಜಿ ಸದಸ್ಯೆ ಮದ್ದೂರಮ್ಮ ಮುನಿರಾಜು, ಸಂಘದ ನಿರ್ದೇಶಕರಾದ ಎಸ್.ವಿ. ಕೃಷ್ಣಪ್ಪ, ಎಸ್.ಎಂ. ರವಿಚಂದ್ರ, ನರಸಿಂಹಯ್ಯ, ಸುಧಾಕರ್, ಬಲರಾಮ, ಕೃಷ್ಣಪ್ಪ, ರಾಮಕೃಷ್ಣಪ್ಪ, ಸುಗುಣಮ್ಮ ಮತ್ತು ಪಿಳ್ಳಮ್ಮ, ಲೆಕ್ಕ ಪರಿಶೋಧಕ ಎಸ್.ಎಂ. ದಾಸ್, ಮುಖ್ಯ ಕಾರ್ಯನಿರ್ವಾಹಕ ನಾಗಚಂದ್ರ. ವಿ., ಹಾಲು ಪರೀಕ್ಷಕ ಮುನಿರಾಜು, ಮುಖಂಡರಾದ ದ್ಯಾವಪ್ಪ, ಚಂದ್ರಪ್ಪ, ರಾಮಪ್ಪ, ನಾರಾಯಣಸ್ವಾಮಿ, ದೇವರಾಜ್ ಹಾಜರಿದ್ದರು.

ಇದೇ ಸಂಘದಲ್ಲಿ ಈ ಹಿಂದೆ ಆಡಳಿತ ಮಂಡಳಿ ಚುನಾವಣೆ ನಡೆದಿತ್ತು.

In English: The Sorakayalahalli Milk Producers Cooperative Society held its 2025-26 annual general meeting, presenting the audit report, discussing profit distribution, approving the 2026-27 budget, and deciding on auditor appointment. Speakers noted the society, established in 1996-97 and once struggling with loan recovery issues, has grown into a model institution posting a net profit of ₹1,33,993.94 this year, saving ₹2-3 lakh through collective effort by the dairy, management board, secretary and farmers.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version