ಪೂರ್ಣ ಪುಟ · Open full page

ಗ್ರಾಮ ದೇವಾಲಯ ಕಟ್ಟಡ ಅಭಿವೃದ್ಧಿಗೆ ₹50 ಸಾವಿರ ಧನಸಹಾಯ

Sidlaghatta Gangamma Temple Donation 1

Sidlaghatta : ತಾಲ್ಲೂಕಿನ ಸೊರಕಾಯಲಹಳ್ಳಿ ಗ್ರಾಮದ ಶ್ರೀ ಗಂಗಮ್ಮ ದೇವಾಲಯದ ನೂತನ ಕಟ್ಟಡ ಅಭಿವೃದ್ಧಿ ಕಾಮಗಾರಿಗೆ ಸಮಾಜಸೇವಕ ಹಾಗೂ ಕುಷಿ ಡೆವೆಲಪರ್ಸ್ ಮಾಲೀಕ ಬಿಳೆಶಿವಾಲೆ ಆರ್. ರವಿ ಅವರು ₹50 ಸಾವಿರ ಧನಸಹಾಯ ನೀಡಿದ್ದಾರೆ.

ಬುಧವಾರ ದೇವಾಲಯಕ್ಕೆ ಭೇಟಿ ನೀಡಿದ ಅವರು, ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ದೇವಾಲಯದ ಮುಖಂಡರಿಗೆ ಸಹಾಯಧನದ ಮೊತ್ತವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಳೆಶಿವಾಲೆ ಆರ್. ರವಿ, ಗ್ರಾಮ ದೇವತೆ ಶ್ರೀ ಗಂಗಮ್ಮ ದೇವಾಲಯದ ನೂತನ ಕಟ್ಟಡ ನಿರ್ಮಾಣ ಕಾರ್ಯವು ಭಕ್ತರ ಸಹಕಾರದಿಂದ ನಡೆಯುತ್ತಿದೆ. ದೇವಾಲಯದ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಸ್ತುತ ₹50 ಸಾವಿರ ನೆರವು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೆಚ್ಚುವರಿಯಾಗಿ ₹1.50 ಲಕ್ಷ ನೆರವು ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದೊಡ್ಡದಾಸರಹಳ್ಳಿ ಆರ್. ನಂಜಪ್ಪ, ಚಿಕ್ಕದಾಸರಹಳ್ಳಿ ದಾಮೋದರ್, ಸೊರಕಾಯಲಹಳ್ಳಿ ಎಂ. ಸುರೇಶ್, ಎಸ್.ಎಂ. ರವಿಚಂದ್ರ, ಚಂದ್ರಪ್ಪ, ದ್ಯಾವಪ್ಪ, ನಾಗಚಂದ್ರ, ನಾರಾಯಣಸ್ವಾಮಿ, ಸುಧಾಕರ್, ನವೀನ್ ಕುಮಾರ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

Nearby

ಇದನ್ನೂ ಓದಿ

error: Content is protected !!
Exit mobile version