ಪೂರ್ಣ ಪುಟ · Open full page

ನೂರಾರು ಮಕ್ಕಳ ಪ್ರತಿಭೆ ಅನಾವರಣ: ಪ್ರತಿಭಾ ಕಾರಂಜಿಯಲ್ಲಿ ಜಾನಪದ ನೃತ್ಯ, ಚಿತ್ರಕಲೆ, ನಾಟಕ ಸ್ಪರ್ಧೆ

Winning students holding certificates with teachers, CRPs and guests after the cluster-level Pratibha Karanji competitions

Sidlaghatta : ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿರುವ ಕಲೆ ಮತ್ತು ಪ್ರತಿಭೆಯನ್ನು ಹೊರತರಲು ಪ್ರತಿಭಾ ಕಾರಂಜಿ ಸ್ಪರ್ಧೆಗಳು ಸೂಕ್ತ ವೇದಿಕೆಯಾಗಿವೆ. ಗ್ರಾಮೀಣ ಭಾಗದ ಮಕ್ಕಳು ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ ಕರೆ ನೀಡಿದರು.

ತಾಲ್ಲೂಕಿನ ಗಂಜಿಗುಂಟೆ ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ 2026-27ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಗಂಜಿಗುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವೈಭವದಿಂದ ಜರುಗಿದವು.

ನೃತ್ಯ, ಸಂಗೀತ, ಚಿತ್ರಕಲೆ, ನಾಟಕ ಸ್ಪರ್ಧೆಗಳು

ಕ್ಲಸ್ಟರ್ ವ್ಯಾಪ್ತಿಯ ವಿವಿಧ ಶಾಲೆಗಳಿಂದ ಬಂದಿದ್ದ ನೂರಾರು ವಿದ್ಯಾರ್ಥಿಗಳು ಜಾನಪದ ನೃತ್ಯ, ಲಘು ಸಂಗೀತ, ಚಿತ್ರಕಲೆ, ಪ್ರಬಂಧ, ನಾಟಕ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು. ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಿ ಗೌರವಿಸಲಾಯಿತು.

ತೀರ್ಪುಗಾರರಾಗಿ ಡಿ.ಎನ್. ರಾಮಚಂದ್ರಪ್ಪ, ಜಯಕೃಷ್ಣ, ಆಶಾ, ಪ್ರತಿಭಾ, ಸೋಮಶೇಖರ್, ಫಜಿಲ್ ಅಹಮದ್, ಅಂಬರೀಶ್, ರೇಷ್ಮ, ಅನಿತ, ವೆಂಕಟರತ್ನ ಮತ್ತು ನಂಜುಂಡರೆಡ್ಡಿ ಕಾರ್ಯನಿರ್ವಹಿಸಿದರು.

ಈ ಸಂದರ್ಭದಲ್ಲಿ ಬಿ.ಆರ್.ಪಿ ಮಂಜುನಾಥ್, ಬಿ.ಆರ್.ಪಿ ಚಂದ್ರಕಲಾ, ಸಿ.ಆರ್.ಪಿ ಎಸ್.ಸಿ. ಭಾರತಿ, ದಿಬ್ಬೂರಹಳ್ಳಿ ಕ್ಲಸ್ಟರ್ ಸಿ.ಆರ್.ಪಿ ನಾಗರಾಜು, ಶಿಕ್ಷಕರಾದ ಚೌಡರೆಡ್ಡಿ, ಕೆ.ಬಿ. ಭಾಗ್ಯಲಕ್ಷ್ಮೀ, ಪ್ರಕಾಶ್, ನರಸಿಂಹರೆಡ್ಡಿ, ಶಿವಪ್ಪ, ತುಳಸಿ, ವಿವಿಧ ಶಾಲೆಗಳ ಶಿಕ್ಷಕರು, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳ ಅಧ್ಯಕ್ಷರು, ಸದಸ್ಯರು ಹಾಗೂ ಅತಿಥಿ ಶಿಕ್ಷಕರು ಉಪಸ್ಥಿತರಿದ್ದರು.

ಸಂಬಂಧಿತ ಸುದ್ದಿ: ಶಿಡ್ಲಘಟ್ಟ ತಾಲ್ಲೂಕು ಮಟ್ಟದ ‘ಪ್ರತಿಭಾ ಕಾರಂಜಿ’ | ಪ್ರತಿಭೆಯ ಅನಾವರಣಕ್ಕೆ ಪ್ರತಿಭಾಕಾರಂಜಿ

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

Nearby

ಇದನ್ನೂ ಓದಿ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Exit mobile version