ಪೂರ್ಣ ಪುಟ · Open full page

34 ವರ್ಷ ಶಿಕ್ಷಕ, ಅಮೆರಿಕದಲ್ಲೂ ಕನ್ನಡ ಸೇವೆ: ನ.24ರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವೈ.ಎನ್. ದಾಶರಥಿ ಅಧ್ಯಕ್ಷ

Retired teacher and Kannada scholar Y.N. Dasharathi, chosen president of the 11th Taluk Kannada Sahitya Sammelana

Sidlaghatta : ನವೆಂಬರ್ 24ರಂದು ನಡೆಯಲಿರುವ 11ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಕನ್ನಡ ಪಂಡಿತ ಹಾಗೂ ನಿವೃತ್ತ ಶಿಕ್ಷಕ ವೈ.ಎನ್. ದಾಶರಥಿ ಅವರನ್ನು ಆಯ್ಕೆ ಮಾಡಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪರಿಷತ್ತಿನ ಸದಸ್ಯರು ಒಮ್ಮತದಿಂದ ಅವರ ಹೆಸರನ್ನು ಅಂತಿಮಗೊಳಿಸಿದರು. ತಾಲ್ಲೂಕು ಕಸಾಪ ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ ಮಾಹಿತಿ ನೀಡಿ, ಅಧ್ಯಕ್ಷರ ಆಯ್ಕೆಗೆ ಮೂರು ಸಭೆ ನಡೆಸಲಾಗಿತ್ತು; ಕನ್ನಡ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಆರಿಸಲು ತೀರ್ಮಾನಿಸಲಾಗಿತ್ತು ಎಂದರು.

34 ವರ್ಷ ಶಿಕ್ಷಕ, ಅಮೆರಿಕದಲ್ಲೂ ಕನ್ನಡ ಕಾರ್ಯಕ್ರಮ

ದಾಶರಥಿ ಅವರು 34 ವರ್ಷ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ತಾಲ್ಲೂಕು ಕಸಾಪದ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಸುಮಾರು 11 ವರ್ಷ ಅಮೆರಿಕದಲ್ಲಿ ನೆಲೆಸಿದ್ದಾಗ ಅಲ್ಲಿಯೂ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು ಮತ್ತು ವಿವಿಧ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಕಸಾಪ ಮಾಜಿ ತಾಲ್ಲೂಕು ಅಧ್ಯಕ್ಷ ವಿ. ಕೃಷ್ಣ ಮಾತನಾಡಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಸಾಹಿತ್ಯವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ದಾಶರಥಿ ಅವರು ‘ಶಾಲೆಗೊಂದು ಕನ್ನಡ’ ಕಾರ್ಯಕ್ರಮ ಆರಂಭಿಸಿ, ಶಾಲೆಗಳಿಗೆ ಕಿರುಹೊತ್ತಿಗೆಗಳನ್ನು ವಿತರಿಸಿದ್ದರು ಎಂದು ನೆನಪಿಸಿಕೊಂಡರು.

ನ.24ರಂದು ವಾಸವಿ ಕಲ್ಯಾಣ ಮಂಟಪದಲ್ಲಿ ಸಮ್ಮೇಳನ

ಸಮ್ಮೇಳನ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ಸ್ವಾಗತ ಸಮಿತಿ ಅಧ್ಯಕ್ಷರಾದ ಶಾಸಕ ಬಿ.ಎನ್. ರವಿಕುಮಾರ್ ಹಾಗೂ ತಹಶೀಲ್ದಾರ್ ಗಗನಸಿಂಧು ನೇತೃತ್ವದಲ್ಲಿ ಸಿದ್ಧತೆ ನಡೆದಿದೆ. ಧ್ವಜಾರೋಹಣ, ಮೆರವಣಿಗೆ ಮತ್ತು ವಿವಿಧ ಸಾಹಿತ್ಯ ಗೋಷ್ಠಿಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಕಸಾಪ ಸಂಪ್ರದಾಯದಂತೆ ಸಮ್ಮೇಳನಾಧ್ಯಕ್ಷರ ಮನೆಗೆ ತೆರಳಿ ಫಲ, ವೀಳ್ಯದೆಲೆ ನೀಡಿ ಅಧಿಕೃತವಾಗಿ ಆಹ್ವಾನಿಸುವ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಪಡಿಸುವಂತೆ ಶಾಸಕರನ್ನು ಕೋರಲಾಗಿದ್ದು, ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.

ಸಭೆಯಲ್ಲಿ ಕಸಾಪದ ಮುನಿನಾರಾಯಣಪ್ಪ, ಈ ಧರೆ ಪ್ರಕಾಶ್, ಸುಂದರಾಚಾರಿ, ಜಯಂತಿಗ್ರಾಮ ನಾರಾಯಣಸ್ವಾಮಿ, ಮಳಮಾಚನಹಳ್ಳಿ ದೇವರಾಜ್, ಮುನಿರಾಜು, ಸತ್ಯನಾರಾಯಣ, ರಾಮಂಜಿ, ಸುಂದರ್ ಮತ್ತು ನರಸಿಂಹಪ್ಪ ಉಪಸ್ಥಿತರಿದ್ದರು.

ಸಂಬಂಧಿತ ಸುದ್ದಿ: 11ನೇ ಕನ್ನಡ ಸಾಹಿತ್ಯ ಸಮ್ಮೇಳನ: ಅಗತ್ಯ ಸಹಕಾರದ ಭರವಸೆ ನೀಡಿದ ಶಾಸಕ ಬಿ.ಎನ್. ರವಿಕುಮಾರ್ | 11ನೇ ಕನ್ನಡ ಸಾಹಿತ್ಯ ಸಮ್ಮೇಳನ: ಅಧ್ಯಕ್ಷರ ಆಯ್ಕೆಗೆ ಅಭಿಪ್ರಾಯ ಸಂಗ್ರಹ, ಪೂರ್ವಭಾವಿ ಸಭೆ

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

Nearby

ಇದನ್ನೂ ಓದಿ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Exit mobile version