Home News NSS ವಿದ್ಯಾರ್ಥಿಗಳಿಂದ ಕಲ್ಯಾಣಿ ಸ್ವಚ್ಛತೆ

NSS ವಿದ್ಯಾರ್ಥಿಗಳಿಂದ ಕಲ್ಯಾಣಿ ಸ್ವಚ್ಛತೆ

0

S Devaganahalli, Sidlaghatta : ಪುರಾತನ ಕಾಲದ ಜಲ ಮೂಲಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ತಿಳಿಸಿದರು.

ತಾಲ್ಲೂಕಿನ ಎಸ್. ದೇವಗನಹಳ್ಳಿ ಗ್ರಾಮದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗಾಂಧಿ ಭವನ, ಬೆಂಗಳೂರು, ರಾಷ್ಟ್ರೀಯ ಸೇವಾ ಯೋಜನೆ ರಾಜ್ಯ ಕೋಶ, ಯುವ ಸಬಲೀಕರಣ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಯಲಹಂಕ ಉಪನಗರದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕ ಮತ್ತು ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಮ್ಮ ಪೂರ್ವಜರು ಜಲಮೂಲಗಳ ಶೇಖರಣೆಗಾಗಿ ದೇವಸ್ಥಾನಗಳ ಬಳಿ ಸುಮಾರು ವರ್ಷಗಳ ಹಿಂದೆ ಬಾವಿ ಮತ್ತು ಕಲ್ಯಾಣಗಳನ್ನ ನಿರ್ಮಾಣ ಮಾಡಿದ್ದು, ಅಂತಹ ಕಲ್ಯಾಣಿಗಳು ಗಿಡ ಗಂಟೆಗಳನ್ನು ತುಂಬಿಕೊಂಡು ನಾಶವಾಗುತ್ತಿವೆ. ಹಾಗಾಗಿ ಪುರಾತನ ಕಾಲದ ಕಲ್ಯಾಣಿ ಬಾವಿಗಳನ್ನ ಸ್ವಚ್ಛತಾ ಶಿಬಿರಗಳ ಮುಖಾಂತರ ಎನ್.ಎಸ್.ಎಸ್ ಸ್ವಯಂಸೇವಕರ ಸಹಕಾರದಿಂದ ಕಲ್ಯಾಣಿಗಳಿಗೆ ಮರುಜೀವ ನೀಡುವ ಕಾರ್ಯ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ಕೆ.ಎಸ್.ನವೀನ್ ಕುಮಾರ್ ಮಾತನಾಡಿ, ಸುಮಾರು 60 ಸ್ವಯಂಸೇವಕರ ತಂಡದೊಂದಿಗೆ ದೇವಗಾನಹಳ್ಳಿ ಗ್ರಾಮದ ಪಾಳು ಬಿದ್ದಿದ್ದ ಗಂಗಮ್ಮ ಕಲ್ಯಾಣಿಯನ್ನು ಸ್ವಚ್ಛಗೊಳಿಸಿ ಮರುಜೀವ ನೀಡಿದ್ದೇವೆ. ಇದೇ ರೀತಿ ಸಾದಲಿ ಗ್ರಾಮದ ಸಾದಲಮ್ಮ ದೇವಾಲಯದ ಆವರಣದಲ್ಲಿರುವ ಕಲ್ಯಾಣಿಯ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಭವಿಷ್ಯದಲ್ಲಿ ಎದುರಾಗಲಿರುವ ಸಮಸ್ಯೆಗಳು ಅರಿತು, ನಶಿಸಿಹೋಗುತ್ತಿರುವ ಪೂರ್ವಜರು ನಿರ್ಮಿಸಿರುವ ಕಲ್ಯಾಣಿಗಳನ್ನ ಸ್ವಚ್ಛತಾ ಅಭಿಯಾನದ ಮೂಲಕ ಮರು ಜೀವ ನೀಡುವ ಕಾಯಕಕ್ಕೆ ಮುಂದಾಗಿರುವ ನಮ್ಮ ಕಾರ್ಯಕ್ಕೆ ಗ್ರಾಮಸ್ಥರು ಮತ್ತು ಸ್ಥಳೀಯರು ಸಹಕಾರ ನೀಡಿದ್ದಾರೆ ಎಂದರು.

For Daily Updates WhatsApp ‘HI’ to 7406303366

Namma Sidlaghatta WhatsApp Channel

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version