Home News ಶಿಡ್ಲಘಟ್ಟದ ಜಯಸಿಂಹನಿಗೆ ಬ್ಲಾಕ್ ಬೆಲ್ಟ್

ಶಿಡ್ಲಘಟ್ಟದ ಜಯಸಿಂಹನಿಗೆ ಬ್ಲಾಕ್ ಬೆಲ್ಟ್

0
A. Jayasimha, a student of Divya Bharat Karate Do Association from Sidlaghatta city, has achieved a significant milestone in his karate journey by earning the coveted black belt. Despite the challenges posed by the ongoing COVID-19 pandemic, Jayasimha persevered and continued to train hard, which eventually led to the well-deserved recognition.

Sidlaghatta : ಶಿಡ್ಲಘಟ್ಟ ನಗರದ ದಿವ್ಯ ಭಾರತ್ ಕರಾಟೆ ಡೊ ಅಸೋಸಿಯೇಷನ್ ವಿದ್ಯಾರ್ಥಿ ಎ.ಜಯಸಿಂಹ ಬ್ಲಾಕ್ ಬೆಲ್ಟ್ ಪಡೆದುಕೊಂಡಿದ್ದಾನೆ.

ಬೆಂಗಳೂರಿನ ಹುಣಸಮಾರನಹಳ್ಳಿಯಲ್ಲಿ 8ನೇ ಡಾನ್ ಬ್ಲಾಕ್ ಬೆಲ್ಟ್ ಸುನಿಲ್ ಮಾಸ್ಟರ್ ಹಾಗೂ 6ನೇ ಡಾನ್ ಬ್ಲಾಕ್ ಬೆಲ್ಟ್ ನಾಗೇಶ್ ಮಾಸ್ಟರ್ ಅವರು ಕರಾಟೆ ಬ್ಲಾಕ್ ಬೆಲ್ಟ್ ಪ್ರಧಾನ ಮಾಡಿದರು.

ದಿವ್ಯ ಭಾರತ್ ಕರಾಟೆ ಡೊ ಅಸೋಸಿಯೇಷನ್ ಕರಾಟೆ ಪುಟು ಎ. ಜಯಸಿಂಹ ಕಳೆದ 12 ವರ್ಷಗಳಿಂದ ಕರಾಟೆ ಶಿಕ್ಷಕ ಅರುಣ್ ಕುಮಾರ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾನೆ. ಈಗಾಗಲೇ ತಾಲ್ಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಹಲವಾರು ಪದಕಗಳನ್ನು ಪಡೆದಿದ್ದಾನೆ. ನೇಪಾಳ, ಗೋವಾ, ಬೆಂಗಳೂರು ವಿಶ್ವವಿದ್ಯಾಲಯ, ಆಂಧ್ರಪ್ರದೇಶ ಮುಂತಾದೆಡೆ ನಡೆದ ಕರಾಟೆ ಸ್ಪರ್ಧೆಗಳಲ್ಲಿ ಪದಕಗಳನ್ನು ಗಳಿಸಿದ್ದಾನೆ.

ನಗರದ ನಿವಾಸಿ ಪಿ.ವಿ.ಅಶೋಕ ಮತ್ತು ಎಸ್.ಎನ್.ಜಯಶೀಲ ದಂಪತಿಯ ಮಗನಾದ ಎ. ಜಯಸಿಂಹ ಈಗ ಎರಡನೇ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ.

“ಹಲವಾರು ವರ್ಷಗಳಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ನಾನು ಕರಾಟೆ ಕಲಿಸುತ್ತಿದ್ದೇನೆ. ಕೆಲವೇ ಮಕ್ಕಳು ಮಾತ್ರ ನಿರಂತರ ಸಾಧನೆಯಿಂದ ಬ್ಲಾಕ್ ಬೆಲ್ಟ್ ವರೆಗೂ ತಲುಪುವರು. ಜಯಸಿಂಹ ಬ್ಲಾಕ್ ಬೆಲ್ಟ್ ಪಡೆದಿರುವುದಕ್ಕೆ ನನಗೆ ಹೆಮ್ಮೆ ಇದೆ. ಅವನು ಸಣ್ಣವನಿದ್ದಾಗಲೇ ಮುಂಬೈನಲ್ಲಿ ನಟ ಅಕ್ಷಯ್ ಕುಮಾರ್ ಆಯೋಜಿಸಿದ್ದ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕ ಪಡೆದು, ಅಕ್ಷಯ್ ಕುಮಾರ್ ಅವರಿಂದ ಮೆಚ್ಚುಗೆ ಗಳಿಸಿದ್ದ” ಎಂದು ಕರಾಟೆ ಶಿಕ್ಷಕ ಅರುಣ್ ಕುಮಾರ್ ತಿಳಿಸಿದರು.


Shidlaghatta’s A. Jayasimha earns coveted black belt in karate journey

Sidlaghatta : A. Jayasimha, a student of Divya Bharat Karate Do Association from Sidlaghatta city, has achieved a significant milestone in his karate journey by earning the coveted black belt. Jayasimha has been under the tutelage of karate teacher Arun Kumar for the past 12 years and has participated in various karate tournaments at taluk, district, state, national and international levels.

The young karateka has brought home numerous medals from competitions held in Nepal, Goa, Bangalore University, Andhra Pradesh and other places. Notably, he had won a gold medal in an international karate championship organized by renowned actor Akshay Kumar in Mumbai when he was younger, and had earned appreciation from the star himself.

Expressing his delight over Jayasimha’s achievement, karate teacher Arun Kumar said, “I have been teaching karate to many students for many years. Only a few children will reach Black Belt through sustained achievement. I am proud that Jayasimha has got black belt.”

The accomplishment of Jayasimha holds greater significance as he had to overcome several challenges posed by the ongoing COVID-19 pandemic, which had disrupted the regular karate training sessions. Despite the obstacles, Jayasimha persevered and continued to train hard, which eventually led to the well-deserved recognition.

With the black belt achievement, Jayasimha has cemented his place as one of the promising karate athletes in the region. He is currently pursuing his second PUC and aims to continue his karate training while pursuing higher education.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version