Home News ಸಿಟಿಜನ್ ಶಾಲೆಯಲ್ಲಿ ಅಂತರಾಷ್ಟ್ರೀಯ ಶಾಲಾ ಕರಾಟೆ ಸ್ಪರ್ಧೆ

ಸಿಟಿಜನ್ ಶಾಲೆಯಲ್ಲಿ ಅಂತರಾಷ್ಟ್ರೀಯ ಶಾಲಾ ಕರಾಟೆ ಸ್ಪರ್ಧೆ

0
Sidlaghatta Citizen School Karate Championship

Sidlaghatta : ಶಾಲಾ ಕಾಲೇಜು ವಿದ್ಯಾರ್ಥಿಗಳು ಪಾಠ ಪ್ರವಚನ ಜತೆಗೆ ದೈಹಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ಇದರಿಂದ ದೈಹಿಕ ಮತ್ತು ಮಾನಸಿಕ ಸದೃಢತೆ ಹೆಚ್ಚಲಿದ್ದು ಇದು ಕಲಿಯುವ ಜ್ಞಾನ, ಗ್ರಹಿಕೆಯ ಶಕ್ತಿ ಹೆಚ್ಚಲು ನೆರವಾಗಲಿದೆ ಎಂದು ಕರಾಟೆ ಶಿಕ್ಷಕ ಅರುಣ್ ಕುಮಾರ್ ತಿಳಿಸಿದರು.

ನಗರದ ಚಿಂತಾಮಣಿ ರಸ್ತೆಯ ಸಿಟಿಜನ್ ಶಾಲೆ ಆವರಣದಲ್ಲಿ ನಡೆದ ನಗರದ ವ್ಯಾಪ್ತಿಯ ಶಾಲೆಗಳ ಅಂತರ್ ಶಾಲಾ ಕರಾಟೆ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.

ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲ ಎಲ್ಲ ವಯೋಮಾನ, ಎಲ್ಲ ವರ್ಗದವರು ಕೂಡ ಕರಾಟೆ ಕಲಿಯುವುದರಿಂದ ಸ್ವಯಂ ರಕ್ಷಣೆಗೆ ಹೆಚ್ಚು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ನಗರದ ವಿವಿಧ ಎಂಟು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು ನಾನಾ ಹಂತದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅಭಿನಂದನಾ ಪತ್ರ ಮತ್ತು ಬಹುಮಾನ ನೀಡಲಾಯಿತು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version