Home News ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಬೇಸಿಗೆ ಶಿಬಿರ

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಬೇಸಿಗೆ ಶಿಬಿರ

0
Sidlaghatta Citizen School Scouts and Guides Summer Camp

Sidlaghatta : ಶಿಡ್ಲಘಟ್ಟ ನಗರದ S R Citizen ಶಾಲೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಮೂರು ದಿನಗಳ ಬೇಸಿಗೆ ಶಿಬಿರ ಹಾಗೂ ರಾಜ್ಯಪಾಲರ ಪ್ರಶಸ್ತಿ ತಯಾರಿ ಶಿಬಿರ ನಡೆಯಿತು.

ಶಿಬಿರದಲ್ಲಿ ನಾನಾ ವಿಧದ ಜೀವನ ಕೌಶಲ್ಯಗಳ ಬಗ್ಗೆ ತಿಳಿಸಲಾಯಿತು ಮತ್ತು ಮುಂಬರುವ ರಾಜ್ಯಪಾಲರ ಪ್ರಶಸ್ತಿಗೆ ಸಂಬಂಧಿಸಿದ ತಯಾರಿ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಶಾಲೆಯ ಮುಖ್ಯೋಪಾಧ್ಯಾಯ ಸತೀಶ್. ಎನ್ ಮಾತನಾಡಿ, 2023 – 24ರ ಸಾಲಿನಲ್ಲಿ ಮೂರು ವಿದ್ಯಾರ್ಥಿಗಳು ಹಾಗೂ 2024 – 25 ರ ಸಾಲಿನಲ್ಲಿ ಒಂಬತ್ತು ಜನ ವಿದ್ಯಾರ್ಥಿಗಳು ರಾಜ್ಯಪಾಲರ ಪ್ರಶಸ್ತಿ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಈ ವರ್ಷ ಈ ವರ್ಷ ಒಟ್ಟು 27 ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ರಾಜ್ಯ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಶಾಲೆಗೆ ಕೀರ್ತಿ ತನ್ನಿ ಎಂದು ಹಾರೈಸಿದರು.

ದೇಶದ ಭವ್ಯ ನಾಗರಿಕರಾಗಲು ಶಿಬಿರಗಳು ಸಹಕಾರಿಯಾಗಲಿದ್ದು, ಶಿಬಿರದಲ್ಲಿ ನಾನಾ ವಿಧದ ಜೀವನ ಕೌಶಲ್ಯಗಳನ್ನು ಕಲಿತ ವಿದ್ಯಾರ್ಥಿಗಳು ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿದರು.

ಶಿಬಿರದಲ್ಲಿ ಸ್ಕೌಟ್ ನಾಯಕರಾಗಿ ನಾಗರಾಜು. ಆರ್, ಗೈಡ್ ಶಿಕ್ಷಕಿಯಾಗಿ ಸತ್ಯ ಜ್ಯೋತಿ ತರಬೇತಿ ನೀಡಿದರು. ಹರ್ಷಿತ, ಚಂದ್ರಶೇಖರ್, ರೂಪ, ಮಂಜುನಾಥ್ ಸೇರಿದಂತೆ ಶಿಕ್ಷಕರು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version