Home News ಶಿಡ್ಲಘಟ್ಟದ ತಾಲ್ಲೂಕು ಕಚೇರಿಯಲ್ಲಿ ಕೋವಿಡ್ ನಿಯಂತ್ರಣ ಕೊಠಡಿ ಸ್ಥಾಪನೆ

ಶಿಡ್ಲಘಟ್ಟದ ತಾಲ್ಲೂಕು ಕಚೇರಿಯಲ್ಲಿ ಕೋವಿಡ್ ನಿಯಂತ್ರಣ ಕೊಠಡಿ ಸ್ಥಾಪನೆ

0
Sidlaghatta Taluk Covid Helpline

ನಗರದ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ಕೋವಿಡ್ ಸಹಾಯವಾಣಿ ಸ್ಥಾಪನೆ ಮಾಡಿರುವುದಾಗಿ ತಹಶೀಲ್ದಾರ್ ರಾಜೀವ್ ತಿಳಿಸಿದರು.

 ದಿನದ 24 ಗಂಟೆಗಳ ಕಾಲ ಕೋವಿಡ್ ನಿಯಂತ್ರಣ ಕೊಠಡಿ ಕಾರ್ಯ ನಿರ್ವಹಿಸಲಿದ್ದು, ಸೊಂಕಿತರಿಗೆ ಬೇಕಾದ ಎಲ್ಲಾ ಮಾಹಿತಿಯನ್ನು ಒದಗಿಸುತ್ತದೆ. ತುರ್ತು ಅಮ್ಲಜನಕ, ರೆಮ್ ಡೆಸಿವಿರ್ ಮುಂತಾದೌಷಧಿ ಸೇರಿದಂತೆ ಅಗತ್ಯ ಇರುವವರಿಗೆ ಮಾರ್ಗದರ್ಶನ  ನೀಡಲಿದೆ. ರೋಗಿಗಳಿಗೆ ಅವಶ್ಯಕತೆ ಇದ್ದಲ್ಲಿ ಆಸ್ಪತ್ರೆಯಲ್ಲಿನ ಬೆಡ್ ಗಳು ಚಿಕಿತ್ಸೆ ಮುಂತಾದ ಎಲ್ಲಾ ಮಾಹಿತಿಯನ್ನು ನಿಯಂತ್ರಣ ಕೊಠಡಿಯಲ್ಲಿ ಪಡೆಯಬಹುದಾಗಿದೆ .ದೂರವಾಣಿ ಸಂಖ್ಯೆ 08158 256763  ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತದೆ. ಇದರ ಸದುಪಯೋಗವನ್ನು ಪಡೆಯುವಂತೆ ಅವರು ಕೋರಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version