ಮಕ್ಕಳ ದುಡಿಮೆ ಕುಟುಂಬಕ್ಕೆ ನೆರವೇ? ಬಾಲಕಾರ್ಮಿಕ ಪದ್ಧತಿ ತಡೆಗೆ ತಹಶೀಲ್ದಾರ್ ಎಚ್ಚರಿಕೆ

Sidlaghatta : ಬಾಲಕಾರ್ಮಿಕ ಪದ್ಧತಿ ಹಾಗೂ ಕಿಶೋರ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ಕೊನೆಗಾಣಿಸಲು ಎಲ್ಲ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು ಎಂದು ತಹಶೀಲ್ದಾರ್ ಎನ್. ಗಗನಸಿಂಧು ಹೇಳಿದ್ದಾರೆ.
ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ–1986ರ ಅಡಿಯಲ್ಲಿ ರಚಿತವಾದ ತಾಲ್ಲೂಕು ಮಟ್ಟದ ಸಮಿತಿಯ ಸಭೆ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿದರು.
ಬಡತನ, ಅನಕ್ಷರತೆ ಮತ್ತು ಕಾನೂನಿನ ಬಗ್ಗೆ ತಿಳಿವಳಿಕೆ ಇಲ್ಲದಿರುವುದರಿಂದ ಕೆಲವು ಕುಟುಂಬಗಳು ಅಪ್ರಾಪ್ತ ಮಕ್ಕಳನ್ನು ಶಾಲೆಗೆ ಕಳುಹಿಸದೆ ಕೆಲಸಕ್ಕೆ ಕಳುಹಿಸುತ್ತಿವೆ. ಇದರಿಂದ ಕುಟುಂಬಕ್ಕೆ ಸ್ವಲ್ಪ ಕಾಲ ಆರ್ಥಿಕ ಬೆಂಬಲ ಸಿಗಬಹುದು, ಆದರೆ ಮಕ್ಕಳ ಭವಿಷ್ಯಕ್ಕೆ ಇದು ಹಾನಿಕರ ಎಂದು ಅವರು ಎಚ್ಚರಿಸಿದರು.
ಪೋಷಕರು, ಸಾರ್ವಜನಿಕರು ಮತ್ತು ಕಾರ್ಖಾನೆ ಮಾಲೀಕರಲ್ಲಿ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ಶಿಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಕೆಲಸ ಮಾಡುವ ಸಂಘ-ಸಂಸ್ಥೆಗಳು ಈ ಜಾಗೃತಿಯಲ್ಲಿ ಮುಖ್ಯ ಪಾತ್ರ ವಹಿಸಬೇಕು ಎಂದು ತಿಳಿಸಿದರು.
ಕಾನೂನನ್ನು ಸರಿಯಾಗಿ ಜಾರಿಗೊಳಿಸಲು ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.
ಗ್ರೇಡ್–2 ತಹಶೀಲ್ದಾರ್ ಕೆ.ಎನ್. ಮಂಜುನಾಥ್, ಕಾರ್ಮಿಕ ಇಲಾಖೆ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.
ಸಂಬಂಧಿತ ಸುದ್ದಿ: ಬಾಲಕಾರ್ಮಿಕ ನಿರ್ಮೂಲನೆಗೆ ಕಾನೂನು ಜಾಗೃತಿ | ಮಕ್ಕಳನ್ನು ದುಡಿಸಿಕೊಂಡರೆ 6 ತಿಂಗಳಿಂದ 2 ವರ್ಷ ಜೈಲು
For Daily Updates WhatsApp ‘HI’ to 7406303366
Summary in English
Sidlaghatta Tahsildar N. Gagana Sindhu chaired the taluk-level committee meeting under the Child Labour and Adolescent Labour (Prohibition and Regulation) Act, 1986, at the taluk office hall and told officers of all departments to work in coordination to end child and adolescent labour. She said poverty, illiteracy and lack of legal awareness lead some families to send minor children to work instead of school, which may bring short-term income but harms the children’s future. She asked for greater awareness among parents, the public and factory owners, with teachers, anganwadi and ASHA workers and organisations taking a leading role. Grade-2 Tahsildar K.N. Manjunath, Labour and Sericulture department officials and committee members attended.
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news