Home Culture ಆದಿಶಕ್ತಿ ಮಳ್ಳೂರಾಂಭ ದೇವಿಯ ಜಯಂತೋತ್ಸವ ಸಂಭ್ರಮ

ಆದಿಶಕ್ತಿ ಮಳ್ಳೂರಾಂಭ ದೇವಿಯ ಜಯಂತೋತ್ಸವ ಸಂಭ್ರಮ

0
Sidlaghatta Devaramalluru Malluramba Devi Jayanthotsava

Devara Malluru, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದೇವರ ಮಳ್ಳೂರು ಗ್ರಾಮದಲ್ಲಿ ಶ್ರೀ ಆದಿಶಕ್ತಿ ಮಳ್ಳೂರಾಂಭ ದೇವಿಯ ಜಯಂತೋತ್ಸವವನ್ನು ಮಂಗಳವಾರ ಭಕ್ತಿಭಾವದಿಂದ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಜಯಂತೋತ್ಸವದ ಅಂಗವಾಗಿ ಬೆಳಗ್ಗೆಯಿಂದ ದೇವಿಗೆ ಅಭಿಷೇಕ, ದುರ್ಗಾಪೂಜೆ, ಮಂಡಲ ಪೂಜೆ ಹಾಗೂ ವಿಶೇಷ ಕುಂಕುಮಾರ್ಚನೆ ನೆರವೇರಿತು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸುಮಂಗಲಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆದರು.

ದೇವರ ಮಳ್ಳೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತೀರ್ಥಪ್ರಸಾದ ಸ್ವೀಕರಿಸಿದರು. ದಿನವಿಡೀ ಭಜನಾ ಕಾರ್ಯಕ್ರಮಗಳು ನಡೆದವು.

ಉತ್ಸವದ ಅಂಗವಾಗಿ ಶ್ರೀ ಆದಿಶಕ್ತಿ ಮಳ್ಳೂರಾಂಭ ದೇವಿಯ ಉತ್ಸವಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ದೇವಾಲಯವನ್ನು ದೀಪಾಲಂಕಾರದಿಂದ ಅಲಂಕರಿಸಲಾಗಿತ್ತು. ಸಂಜೆ ದೇವಿಯನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಕೂರಿಸಿ ತಮಟೆ ಹಾಗೂ ಮಂಗಳವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಭಕ್ತರು ಜಯಘೋಷ ಮೊಳಗಿಸಿ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಆದಿಶಕ್ತಿ ಮಳ್ಳೂರಾಂಭ ದೇವಿ ಅಭಿವೃದ್ಧಿ ಸಮಿತಿಯ ಮುನಿರಾಜು, ಹಿರಿಯ ವಕೀಲ ಸುಬ್ರಮಣ್ಯಪ್ಪ, ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಪಾಲ್ಗೊಂಡಿದ್ದರು. ಈ ಹಿಂದೆ ದೇವಾಲಯದಲ್ಲಿ ನಡೆದ ಮಳ್ಳೂರಾಂಭ ದೇವಿಯ ಉಯ್ಯಾಲೋತ್ಸವವೂ ಭಕ್ತರ ಗಮನ ಸೆಳೆದಿತ್ತು.

In English: Devotees at Devara Malluru village in Sidlaghatta taluk celebrated the Jayanthotsava of Sri Adishakti Malluramba Devi on Tuesday with abhisheka, Durga puja and mandala puja. A large number of sumangalis and devotees from surrounding villages took part, followed by an evening procession of the deity through the village streets.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

Exit mobile version