Home News ಶಿಡ್ಲಘಟ್ಟದ ಫುಟ್‌ಬಾಲ್ ಪ್ರತಿಭೆ ನವದೀಪ್ ರಾಷ್ಟ್ರಮಟ್ಟಕ್ಕೆ ಆಯ್ಕೆ, ಹುಟ್ಟೂರಿನಲ್ಲಿ ಸನ್ಮಾನ

ಶಿಡ್ಲಘಟ್ಟದ ಫುಟ್‌ಬಾಲ್ ಪ್ರತಿಭೆ ನವದೀಪ್ ರಾಷ್ಟ್ರಮಟ್ಟಕ್ಕೆ ಆಯ್ಕೆ, ಹುಟ್ಟೂರಿನಲ್ಲಿ ಸನ್ಮಾನ

0
Sidlaghatta Navdeep Football Player Nationals Felicitation

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಪ್ರತಿಭಾನ್ವಿತ ಫುಟ್‌ಬಾಲ್ ಕ್ರೀಡಾಪಟು ನವದೀಪ್ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಮೂಲಕ ರಾಜ್ಯ ಮತ್ತು ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಮಧ್ಯಪ್ರದೇಶದ ಉಮಾರಿಯಾದಲ್ಲಿ ನಡೆದ ರಾಷ್ಟ್ರೀಯ ಫುಟ್‌ಬಾಲ್ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಮರಳಿದ ನವದೀಪ್ ಅವರನ್ನು ಶಿಡ್ಲಘಟ್ಟ ತಾಲ್ಲೂಕು ಕದಂಬ ಸೈನ್ಯ ವತಿಯಿಂದ ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.

ನವದೀಪ್ ಅವರು ಗುರುಗಳಾದ ಸ್ಪೋರ್ಟ್ಸ್ ಮುನಿರಾಜು ಅವರ ಮಾರ್ಗರ್ಶನದೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಕ್ರೀಡಾ ಶಾಲೆಯಲ್ಲಿ ಮೂರು ವರ್ಷಗಳ ಕಾಲ ಪಳಗಿದ ನಂತರ ಬೆಂಗಳೂರಿನ ಪ್ರತಿಷ್ಠಿತ ವಿದ್ಯಾನಗರ ಕ್ರೀಡಾ ಶಾಲೆಗೆ ಆಯ್ಕೆಯಾದರು. ಇತ್ತೀಚೆಗೆ ನಡೆದ ರಾಜ್ಯಮಟ್ಟದ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ರಾಷ್ಟ್ರಮಟ್ಟಕ್ಕೆ ಕರ್ನಾಟಕ ತಂಡದ ಆಟಗಾರನಾಗಿ ಆಯ್ಕೆಯಾಗಿದ್ದರು.

ಕದಂಬ ಸೈನ್ಯದ ಅಧ್ಯಕ್ಷ ಕಲಾವಿದ ಸಿ.ಎನ್. ಮುನಿರಾಜ್ ಮತ್ತು ಪದಾಧಿಕಾರಿಗಳು ನವದೀಪ್ ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಕದಂಬ ಸೈನ್ಯ ಉಪಾಧ್ಯಕ್ಷರಾದ ಡಾ: ವಿ ವೆಂಕಟೇಶ್, ಕಾರ್ಯದರ್ಶಿಗಳಾದ ಫೋಟೋ ಎಸ್ ಮಂಜುನಾಥ್, ಖಜಾಂಚಿಗಳಾದ ಕಲಾವಿದ ಸಿ ಮುಖೇಶ್, ಜಿಲ್ಲಾ ಸಮಿತಿಯ ಸದಸ್ಯರಾದ ಶ್ರೀನಿವಾಸ್ ವಿಶ್ವಕರ್ಮ, ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಂಬಾರಿ ಮಂಜುನಾಥ್, ಹಾಲು ಉತ್ಪಾದಕರ ಸಂಘದ ನಿರ್ದೇಶಕರಾದ ಅರಿಕೇರಿ ದೊಡ್ಡ ಮುನಿಯಪ್ಪ, ರಾಷ್ಟ್ರೀಯ ಬ್ಯಾಸ್ಕೆಟ್ಬಾಲ್ ಪ್ಲೇಯರ್ ಮುನಿಕೃಷ್ಣ, ನವದೀಪ್ ಅವರ ಪೋಷಕರು ಮತ್ತು ಸ್ಥಳೀಯ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version