Home News ಶಿಡ್ಲಘಟ್ಟ ಕ್ಷೇತ್ರದ ಜನ ಬಯಸಿದರೆ ಸ್ಪರ್ಧೆ ಮಾಡಲು ಸಿದ್ದ : ಯೂಸುಫ್ ಶರೀಫ್ (ಕೆಜಿಎಫ್‌ ಬಾಬು)...

ಶಿಡ್ಲಘಟ್ಟ ಕ್ಷೇತ್ರದ ಜನ ಬಯಸಿದರೆ ಸ್ಪರ್ಧೆ ಮಾಡಲು ಸಿದ್ದ : ಯೂಸುಫ್ ಶರೀಫ್ (ಕೆಜಿಎಫ್‌ ಬಾಬು) ಘೋಷಣೆ

0
Sidlaghatta Politics Yosuf Sherif KGF Babu

ಶಿಡ್ಲಘಟ್ಟ ನಗರದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಭೇಟಿ ಮಾಡಿ ನಂತರ ಸುಧ್ಧಿಗಾರರೊಂದಿಗೆ ಮಾತನಾಡಿದ ಸಮಾಜ ಸೇವಕ ಯೂಸುಫ್ ಶರೀಫ್(ಕೆಜಿಎಫ್‌ ಬಾಬು), ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡಿ ಅವರು ಶೈಕ್ಷಣಿಕವಾಗಿ ಬೆಳೆಯಲು ಸಹಕಾರ ನೀಡುವುದಾಗಿ ಹೇಳಿದರು.

ಬಡತನದಿಂದ ಕಷ್ಟವನ್ನು ಅನುಭವಿಸಿ ಗುಜರಿ ವ್ಯಾಪಾರದಿಂದ ಪ್ರಾರಂಭವಾಗಿ ಇದೀಗ ನೆಮ್ಮದಿಯಿಂದ ಜೀವನ ನಡೆಸಲು ಸಾಕಾಗುವಷ್ಟು ಆಸ್ತಿಯನ್ನು ಸಂಪಾದಿಸಿದ್ದೇನೆ. ಈಗ ಹಣಗಳಿಕೆ ಮಾಡುವುದನ್ನು ಬಿಟ್ಟು, ಇದ್ದಷ್ಟು ದಿನ ಜನರ ಸೇವೆ ಮಾಡಲು ನಿರ್ಧರಿಸಿದ್ದೇನೆ. ಎಲ್ಲ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ತನ್ನ ಕೈಲಾದಷ್ಟು ಸಹಕಾರ ನೀಡುತ್ತೇನೆ ಎಂದರು.

 ಜಿಲ್ಲೆಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಸಂಗ್ರಹಿಸುತ್ತಿದ್ದೇನೆ. ಅವರೆಲ್ಲರಿಗೂ ವಿದ್ಯಾರ್ಥಿವೇತನವನ್ನು ನೀಡಲು ಯೋಜನೆಯನ್ನು ರೂಪಿಸಿದ್ದೇನೆ. ಮಕ್ಕಳು ವಿದ್ಯಾವಂತರಾದರೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯುತ್ತಾರೆ. ಹೀಗಾಗಿ ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದ್ದೇನೆ.

 ಅವಳಿ ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಸೇವೆ ಮಾಡುವ ಕೆಲಸವನ್ನು ಮಾಡುತ್ತಿದ್ದೇನೆ. ಹಣ ಸಂಪಾದನೆ ಮಾಡಿರುವುದು ಸಾಕು ಎನ್ನಿಸಿದೆ. ಹಾಗಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರ ನೆರವಿಗೆ ಕೈಲಾದಷ್ಟು ಸೇವೆ ಮಾಡಲು ನಿರ್ಧರಿಸಿದ್ದೇನೆ. ಕಷ್ಟವೆಂದು ಬರುವ ಜನರಿಗೆ ನೆರವು ನೀಡಲು ಸಿದ್ದನಿದ್ದೇನೆ. ಕ್ಷೇತ್ರದ ಜನರು ಹೆಚ್ಚಾಗಿ ಪ್ರೀತಿ ತೋರಿಸುತ್ತಿದ್ದಾರೆ. ನನಗೆ ಬಹಳ ಸಂತೋಷವಾಗಿದೆ. ಕ್ಷೇತ್ರದ ಜನ ಬಯಸಿದರೆ ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿಗಿದ್ದೇನೆ ಎಂದು ಘೋಷಿಸಿದರು.

 ಇದೇ ಸಂದರ್ಭದಲ್ಲಿ ನಗರದ ಸಿಟಿಝನ್ ಸಿಲ್ಕ್ ರೀಲರ್ಸ್ ಕೈಗಾರಿಕಾ ಸಹಕಾರ ಸಂಘಕ್ಕೆ ಭೇಟಿ ನೀಡಿ ನಿರ್ದೇಶಕರೊಂದಿಗೆ ಸಮಾಲೋಚನೆ ನಡೆಸಿದರು. ಬಳಿಕ ನಗರದ ಆಶಾಕಿರಣ ಅಂಧಮಕ್ಕಳ ವಸತಿನಿಲಯಕ್ಕೆ ಭೆಟಿ ನೀಡಿ ಮಕ್ಕಳಿಗೆ ಹಣ್ಣುಹಂಪಲು ನೀಡಿ ಆರ್ಥಿಕ ನೆರವು ನೀಡಿದರು.

 ನಗರಸಭೆಯ ಉಪಾಧ್ಯಕ್ಷ ಬಿ.ಅಫ್ಸರ್‌ಪಾಷ, ಸದಸ್ಯ ಸಿ.ಮೌಲಾ, ಸಿಟಿಝನ್ ಸಿಲ್ಕ್ ರೀಲರ್ಸ್ ಕೈಗಾರಿಕಾ ಸಹಕಾರ ಸಂಘದ ಮುರ್ತುಜ್, ಕೋಲಾರದ ಟೈರ್ ಅಫ್ಸರ್ ಖಾನ್, ಸಫೀರ್ ಅಹಮದ್(ದಾಸ್ತಾನ್), ಚಾಂದ್‌ಪಾಷ, ಯುವ ಮುಖಂಡ ಮಕ್ಸೂದ್, ಝಮೀರ್, ಅಮೀರ್ ಜಾನ್, ಸಾಧಿಕ್ ಪಾಷ ಹಾಜರಿದ್ದರು.

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version