Home News ಶಿಡ್ಲಘಟ್ಟದಲ್ಲಿ ಕಟ್ಟಡ ಕಾರ್ಮಿಕರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಶಿಡ್ಲಘಟ್ಟದಲ್ಲಿ ಕಟ್ಟಡ ಕಾರ್ಮಿಕರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ

0

Sidlaghatta : ಶಿಡ್ಲಘಟ್ಟ ನಗರದ ಪ್ಯಾರಾಗಾನ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೊಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಶಿಬಿರವನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಶಿಡ್ಲಘಟ್ಟ ತಾಲ್ಲೂಕು ಮರಗೆಲಸ ಕಾರ್ಮಿಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಯಿತು.

ಶಿಬಿರದಲ್ಲಿ ದೇಹ ಪರೀಕ್ಷೆ, ಲಿವರ್ ಮತ್ತು ಕಿಡ್ನಿ ಪರೀಕ್ಷೆ, ಕಣ್ಣಿನ ತಪಾಸಣೆ, ಸಿಬಿಸಿ, ಥೈರಾಯ್ಡ್, ಮೂತ್ರ ಪರೀಕ್ಷೆ, ಮಲೇರಿಯಾ ತಪಾಸಣೆ, ಹೆಪಟೈಟಿಸ್ ಬಿ ಮತ್ತು ಸಿ, ಎಚ್‌.ಐ.ವಿ, ಶ್ವಾಸಕೋಶದ ಪರೀಕ್ಷೆ, ರಕ್ತದ ಗುಂಪು ಸೇರಿದಂತೆ ವಿವಿಧ ತಜ್ಞ ವೈದ್ಯರೊಂದಿಗೆ ಮುಕ್ತ ಆರೋಗ್ಯ ತಪಾಸಣೆಗಳು ನಡೆಯಿದವು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಶಿಬಿರ ವ್ಯವಸ್ಥಾಪಕ ಮಲ್ಲಿಕಾರ್ಜುನ್ ಪಟ್ಟೆದಾರ್, “ಕಟ್ಟಡ ಕಾರ್ಮಿಕರು ತಮ್ಮ ಆರೋಗ್ಯವನ್ನು ಕಡೆಗಣಿಸುತ್ತಾರೆ. ಇಂತಹ ಶಿಬಿರಗಳು ಅವರ ಆರೋಗ್ಯದ ಕಡೆ ಗಮನ ಸೆಳೆಯುವ ಉದ್ದೇಶದಿಂದಲೇ ನಡೆಯುತ್ತಿವೆ. ಎಲ್ಲರೂ ಇದರ ಸದುಪಯೋಗ ಪಡೆಯಬೇಕು” ಎಂದರು.

ಕಾರ್ಮಿಕ ಸಂಘದ ಅಧ್ಯಕ್ಷ ಪ್ರದೀಪ್ ದೀಪು ಮಾತನಾಡಿ, “ಅಗತ್ಯ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿಯೊಬ್ಬ ಕಾರ್ಮಿಕರೂ ತಮ್ಮ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯ. ಸರ್ಕಾರ ಇದಕ್ಕೆ ಎಲ್ಲಾ ಸಹಾಯ ಮಾಡುತ್ತಿದೆ” ಎಂದರು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಎಂ.ಡಿ. ಮಹಮ್ಮದ್ ಯೂಸುಫ್, ಬಾಬು, ಪ್ರಭಾಕರ್ ಬಾಬು, ಯಾಸೀನ್ ಪಾಷಾ, ವೈದ್ಯರು ಡಾ. ಅಬೂಬಕರ್ ಸಿದ್ದಿಕ್, ಸಿಬ್ಬಂದಿ ಹನುಮೇಶ, ಬಸಲಿಂಗಯ್ಯ, ಕೇಧಾರನಾಥ, ಲಿಂಗರಾಜ್ ಎಸ್.ಕೆ., ಕಾವ್ಯ, ಅನುರಾಧಾ, ದೇವೇಂದ್ರ ಉಪಸ್ಥಿತರಿದ್ದರು.

Namma Sidlaghatta WhatsApp Channel

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version