Home News ಶ್ರೀವಾಗ್ಗೇಯಕಾರರ ಆರಾಧನಾ ಮಹೋತ್ಸವ

ಶ್ರೀವಾಗ್ಗೇಯಕಾರರ ಆರಾಧನಾ ಮಹೋತ್ಸವ

0
Sidlaghatta Sri Vaggeyakarara aradhane

Sidlaghatta : ಶಿಡ್ಲಘಟ್ಟ ನಗರದ ಶ್ರೀಕಾಳಿಕಾಂಬ ಕಮಠೇಶ್ವರ ಸಮುದಾಯ ಭವನದಲ್ಲಿ ಶ್ರೀಪುರಂದರದಾಸರು, ಶ್ರೀಸದ್ಗುರು ತ್ಯಾಗರಾಜ ಸ್ವಾಮಿ, ಶ್ರೀಕನಕ ದಾಸರು, ಶ್ರೀಯೋಗಿ ನಾರೇಯಣ ಯತೀಂದ್ರರು ಹಾಗೂ ಶ್ರೀವಾಗ್ಗೇಯಕಾರರ ಆರಾಧನಾ ಮಹೋತ್ಸವವು ಭಾನುವಾರ ನಡೆಯಿತು.

ಶ್ರೀಕೈವಾರ ಯತೀಂದ್ರರ ಮಠ, ಮಾರುತಿ ಸಂಗೀತ ಅಕಾಡೆಮಿ, ಕಾಳಿಕಾಂಬ ಕಮಠೇಶ್ವರ ಸಮಿತಿಯ ಆಶ್ರಯದಲ್ಲಿ ನಡೆದ ಆರಾಧನಾ ಮಹೋತ್ಸವಕ್ಕೆ ಶ್ರೀಕಾಳಿಕಾಂಬ ಕಮಠೇಶ್ವರಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಪಂಚಾಮೃತಾಭಿಷೇಕ, ವಜ್ರಾಂಗಿ ಅಲಂಕಾರ ಮಾಡಿ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.

ನಾದಸ್ವರ ವಿದ್ವಾನ್ ದೊಡ್ಡದಾಸೇನಹಳ್ಳಿ ಮುನಿನಾರಾಯಣಪ್ಪ ಅವರಿಂದ ನಾದಸ್ವರ ಕಛೇರಿ ನಡೆಯಿತು. ಸಂಗೀತ ವಿದ್ವಾನ್ ಮಂಜುಳ ಜಗದೀಶ್, ವಿದ್ವಾನ್ ಶಾಂತಕೃಷ್ಣಮೂರ್ತಿ, ಸವಿತಸುಬ್ರಮಣ್ಯಂ, ಹೇಮಬಾಲಾಜಿ, ನಳಿನಾಕ್ಷಿ ಯತೀಶ್, ರೇಖವೀರಭದ್ರಾಚಾರಿ, ವಿದ್ವಾನ್ ಉಷಾನಾರಾಯಣಮೂರ್ತಿ, ಪಾರ್ವತಮ್ಮಬಸವರಾಜ್, ಭಾರತಿ ಬ್ರಹ್ಮಚಾರಿ, ವಿದುಷಿ ಸೌಭಾಗ್ಯಲಕ್ಷ್ಮಿ, ವಿದ್ವಾನ್ ಶಾಂತಲ ಅರಸ್, ಕುಮಾರಿ ಸ್ಪಂದನ, ಗೀತ ಹೆಗಡೆ, ಮುನಿಬೈರಪ್ಪ, ಮುನಿಯಪ್ಪ, ನಾರಾಯಣಸ್ವಾಮಿ ಸಂಗೀತ ಕಛೇರಿ ನಡೆಸಿಕೊಟ್ಟರು.

ವಿದ್ವಾನ್ ಆರ್.ಜಗದೀಶ್ ಕುಮಾರ್, ವಿದ್ವಾನ್ ಜಿ.ಎಸ್.ಶಾಮಸುಂದರ್, ವಿದ್ವಾನ್ ಗಾಯಿತ್ರಿ, ವಿಜಯ್ ಕುಮಾರ್, ಶ್ರೀವತ್ಸ, ಜೆ.ನವೀನ್ ಕುಮಾರ್, ರವಿ, ತೇಜಸ್, ಧನಂಜಯ್ ಪಿಟೀಲ್ ನುಡಿಸಿದರು.

ವಿದ್ವಾನ್ ವಿ.ಪಿ.ರಘುನಾಥ್‌ರಾವ್, ರವಿತೇಜ, ಲಕ್ಷ್ಮಿನಾರಾಯಣ್, ಮೋಹನ್ ಕುಮಾರ್, ವಿನಯ್ ಕುಮಾರ್, ನಿತ್ಯಾನಂದ, ವಿ.ರುದ್ರಾಚಾರಿ, ಅಶ್ವತ್ಥನಾರಾಯಣಚಾರ್, ಕಾರ್ತಿಕ್, ತೇಜಸ್, ಚರಣ್ ಅವರ ತಂಡವು ಮೃದಂಗ ನುಡಿಸಿದರು.

ಸಂಗೀತ ವಿದ್ವಾನ್ ಮಂಜುಳಜಗದೀಶ್ ಅವರ ನೇತೃತ್ವದಲ್ಲಿ ಆಹ್ವಾನಿತ ಕಲಾವಿದರಿಂದ ಪಂಚರತ್ನ ಕೀರ್ತನೆಗಳ ಗೋಷ್ಠಿ ಗಾಯನ ನಡೆದರೆ ಡಾ.ಎಂ.ವಿ.ಶ್ರೀನಿವಾಸಮೂರ್ತಿ ಅವರಿಂದ ಸಂಗೀತ ಕಛೇರಿ ಗಾಯನ ನಡೆಯಿತು. ವಿದ್ವಾನ್ ಎಂ.ಎಸ್.ಗೋವಿಂದಸ್ವಾಮಿ ಅವರ ವೈಲಿನ್, ವಿದ್ವಾನ್ ಬೆಟ್ಟ ವೆಂಕಟೇಶ್ ಅವರು ಮೃದಂಗ ನುಡಿಸಿದರು.

ಹಾಗೆಯೆ ಸಂಜೆ ನಾದ ಚಿಂತಾಮಣಿ ಹಾರ್‍ಮೋನಿಯಂ ವಿದ್ವಾನ್ ವಿಶ್ವನಾಥ್ ಅವರಿಂದ ಸೋಲೋವಾದನ ಹಾಗೂ ಆಹ್ವಾನಿತ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು ನಡೆದವು.

ಡಾ.ಎಂ.ವಿ.ಶ್ರೀನಿವಾಸಮೂರ್ತಿ, ಜಿ.ಎನ್.ಶಾಮಸುಂದರ್, ಸಾಯಿನಾರಾಯಣ್, ವಿದ್ವಾನ್ ಬಾಲಕೃಷ್ಣಭಾಗವತರನ್ನು ಸನ್ಮಾನಿಸಿ ಗೌರವಿಸಲಾಯಿತು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

Exit mobile version