Home News ಮನೆಯಿಲ್ಲದ ವೃದ್ಧೆಗೆ ಹೊಸ ಮನೆ

ಮನೆಯಿಲ್ಲದ ವೃದ್ಧೆಗೆ ಹೊಸ ಮನೆ

0
Sidlaghatta SKDRDP House Construction

Chikkadasarahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸರಹಳ್ಳಿ ಗ್ರಾಮದಲ್ಲಿ ಮನೆಯಿಲ್ಲದ ವೃದ್ಧೆ ಬ್ಯಾಟಮ್ಮರವರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯ (SKDRDP) ವತಿಯಿಂದ ವಾತ್ಸಲ್ಯ ಯೋಜನೆಯಡಿ (Vatsalya Yojane) ನಿರ್ಮಿಸಿರುವ ಮನೆಯನ್ನು (House) ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಹಸ್ತಾಂತರಿಸಿದರು.

“ಬ್ಯಾಟಮ್ಮ ಗುಡಿಸಿಲು ಮನೆಯಲ್ಲಿ ವಾಸಿಸುತ್ತಿದ್ದು, ಮಳೆಯಿಂದ ಮನೆ ಹಾನಿಯಾಗಿಯಾಗಿತ್ತು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ವಾತ್ಸಲ್ಯ ಯೋಜನೆಯಡಿ ವೃದ್ದೆಗೆ ಮನೆ ಕಟ್ಟಿಕೊಟ್ಟು ಅವರ ಬದುಕಿಗೆ ಆಸರೆಯನ್ನು ಒದಗಿಸಲಾಗುತ್ತಿದೆ” ಎಂದು ಸಿಇಒ ಅನಿಲ್ ಕುಮಾರ್ ತಿಳಿಸಿದರು.

ಬಿಜೆಪಿ ಮುಖಂಡ ದೇವರಾಜ್, ಶ್ರಿ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಸೀನಪ್ಪ, ಜಿಲ್ಲಾ ನಿರ್ದೇಶಕ ಪ್ರಶಾಂತ್, ಯೋಜನಾಧಿಕಾರಿ ಪ್ರಕಾಶ್ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version