
Sidlaghatta : ನವದೆಹಲಿಯ ಡಾ.ಬಿ.ಆರ್.ಅಂಬೇಡ್ಕರ್ ಇಂಟರ್ ನ್ಯಾಶನಲ್ ಸೆಂಟರ್ ನಲ್ಲಿ ಸೆ.8 ಮತ್ತು 9ರಂದು ನಡೆಯಲಿರುವ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಹಾಗೂ “ಉಲ್ಲಾಸ್ ಮೇಳ”ದಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಮೂವರು ಶಿಕ್ಷಕರು ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
In English: Three educators from Sidlaghatta taluk — district adult education officer Anjaneya, Kundalagurki school teacher L.V. Venkatareddy, and Sugatur school teacher H.S. Rudreshamurthy — will represent Karnataka at the International Literacy Day and Ullas Mela in New Delhi on September 8-9, with Rudreshamurthy becoming the first teacher from the district to present at the international event.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆಂಜನೇಯ, ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎಲ್.ವಿ.ವೆಂಕಟರೆಡ್ಡಿ ಹಾಗೂ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ನಿಯೋಗದಲ್ಲಿದ್ದಾರೆ.
“ಜನರಿಗಾಗಿ, ಭೂಗ್ರಹಕ್ಕಾಗಿ ಮತ್ತು ಸಮೃದ್ಧಿಗಾಗಿ ಸಾಕ್ಷರತೆ” ಎಂಬ ಆಶಯದಡಿ ನಡೆಯುವ ಕಾರ್ಯಕ್ರಮದಲ್ಲಿ ರುದ್ರೇಶಮೂರ್ತಿ ಅವರು ಕರ್ನಾಟಕದ ಸಾಕ್ಷರತಾ ಕಾರ್ಯಕ್ರಮಗಳು ಹಾಗೂ ಯಶೋಗಾಥೆಗಳ ಕುರಿತು ವಿಷಯ ಮಂಡಿಸಲಿದ್ದಾರೆ. ಸಾಕ್ಷರ ಭಾರತ್, ಪಡ್ನ ಲಿಖ್ನ ಅಭಿಯಾನ್, ಜನಜನ್ ಸಾಕ್ಷರ್ ಮತ್ತು ಉಲ್ಲಾಸ್ ಕಾರ್ಯಕ್ರಮಗಳ ಕುರಿತು ಅವರು ಪ್ರಸ್ತುತಪಡಿಸಲಿದ್ದಾರೆ.
ಅಂತರರಾಷ್ಟ್ರೀಯ ಕಾರ್ಯಕ್ರಮದಲ್ಲಿ ವಿಷಯ ಮಂಡನೆಗೆ ಅವಕಾಶ ಪಡೆದ ಜಿಲ್ಲೆಯ ಮೊದಲ ಶಿಕ್ಷಕ ಎಂಬ ಹೆಗ್ಗಳಿಕೆಗೆ ರುದ್ರೇಶಮೂರ್ತಿ ಪಾತ್ರರಾಗಿದ್ದಾರೆ. ಸೆ.9ರಂದು ನಡೆಯುವ “ಉಲ್ಲಾಸ್” ಮೇಳದಲ್ಲಿ ಕರ್ನಾಟಕದ ಶಿಕ್ಷಣ ಪರಂಪರೆ, ಸಾಕ್ಷರತಾ ಕಾರ್ಯಕ್ರಮಗಳು ಹಾಗೂ ನವಸಾಕ್ಷರರಿಗಾಗಿ ರೂಪಿಸಿರುವ ಯೋಜನೆಗಳ ಕುರಿತು ವಸ್ತುಪ್ರದರ್ಶನವೂ ನಡೆಯಲಿದೆ.