ಪೂರ್ಣ ಪುಟ · Open full page

ಸಾಂಸ್ಕೃತಿಕ ಸ್ಪರ್ಧೆ, ಆಟ-ಕಲೆಯಲ್ಲಿ ತೊಡಗಿದ ಮಕ್ಕಳೇ ಓದಿನಲ್ಲೂ ಮುಂದೆ: ಪೋಷಕರಿಗೆ ಪ್ರಾಂಶುಪಾಲರ ಕಿವಿಮಾತು

Students of a PU college with medals and certificates for district-level cultural competitions, standing and seated with the principal and lecturers in the college office

Sidlaghatta : ಸಾಂಸ್ಕೃತಿಕ ಸ್ಪರ್ಧೆ, ಕ್ರೀಡೆಗಳಲ್ಲಿ ಭಾಗವಹಿಸುವ ಮಕ್ಕಳು ಓದಿನಲ್ಲೂ ಇತರರಿಗಿಂತ ಮುಂದಿರುತ್ತಾರೆ; ಅಂತಹ ಅವಕಾಶಕ್ಕೆ ಪೋಷಕರು ಅಡ್ಡಿಪಡಿಸಬಾರದು ಎಂದು ಅಕ್ಷರ ಪಿಯು ಕಾಲೇಜು ಪ್ರಾಂಶುಪಾಲ ಬಿ.ವಿ. ಪ್ರಕಾಶ್ ಹೇಳಿದರು.

ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿ ಅಭಿನಂದಿಸಿ ಅವರು ಮಾತನಾಡಿದರು.

ಪರೀಕ್ಷೆ, ರ್‍ಯಾಂಕ್, ಉದ್ಯೋಗಕ್ಕೆ ಮಾತ್ರ ಒತ್ತು ನೀಡುವ ಮನೋಭಾವ ಹೆಚ್ಚುತ್ತಿದೆ. ಆಸಕ್ತಿ ಇದ್ದರೂ ಅನೇಕ ಮಕ್ಕಳಿಗೆ ಪೋಷಕರೇ ಅವಕಾಶ ನೀಡುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪ್ರತಿ ಮಗುವಿಗೂ ಒಂದಲ್ಲ ಒಂದು ಹವ್ಯಾಸ ಇರುತ್ತದೆ. ಅದನ್ನು ಗಮನಿಸಿ ಅವಕಾಶ ಕಲ್ಪಿಸುವ ಕೆಲಸ ಪೋಷಕರಿಂದಲೂ, ಶಾಲೆ-ಕಾಲೇಜುಗಳಲ್ಲಿ ಪೂರಕ ವಾತಾವರಣ ನಿರ್ಮಿಸುವ ಮೂಲಕವೂ ಆಗಬೇಕು ಎಂದು ಹೇಳಿದರು.

ವಿಜೇತರು: ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿ ವಿಭಾಗದ ರಾಹುಲ್ ಮತ್ತು ಹರ್ಷನ್ (ಪ್ರಥಮ), ಪ್ರಥಮ ಪಿಯುಸಿ ವಿಭಾಗದ ಕಿಶೋರ್ ಮತ್ತು ಸುಜನ್ (ತೃತೀಯ); ಏಕಪಾತ್ರಾಭಿನಯದಲ್ಲಿ ಎಂ. ರೂಪಶ್ರೀ (ದ್ವಿತೀಯ); ಜನಪದ ನೃತ್ಯದಲ್ಲಿ ಜೆ. ಗಗನಶ್ರೀ (ದ್ವಿತೀಯ); ಚಿತ್ರಕಲೆಯಲ್ಲಿ ವರ್ಷ (ತೃತೀಯ); ಪ್ರಬಂಧ ಸ್ಪರ್ಧೆಯಲ್ಲಿ ರಾಧಲಕ್ಷ್ಮಿ (ತೃತೀಯ). ಕಾಲೇಜು ಆಡಳಿತ ಮಂಡಳಿ ಮತ್ತು ಉಪನ್ಯಾಸಕರು ವಿಜೇತರನ್ನು ಅಭಿನಂದಿಸಿದರು.

ಸಂಬಂಧಿತ ಸುದ್ದಿ: ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳ ಸನ್ಮಾನ | ಶಿಕ್ಷಣ, ಜ್ಞಾನ, ಸಂಸ್ಕಾರ ಬದುಕನ್ನು ಸಮಾಜಮುಖಿಯಾಗಿಸುತ್ತದೆ

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

Nearby

ಇದನ್ನೂ ಓದಿ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Exit mobile version