
Sidlaghatta : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕ್ರೆಸೆಂಟ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಿರಮಿಡ್ ಪ್ರದರ್ಶನ ನೀಡುತ್ತಿದ್ದ ಎಂಟನೇ ತರಗತಿ ವಿದ್ಯಾರ್ಥಿ ದಾನಿಷ್ ಕೆಳಗೆ ಬಿದ್ದು ಕೈಗೆ ಗಾಯಗೊಂಡ ಘಟನೆ ನಡೆದಿದೆ. ವಿದ್ಯಾರ್ಥಿಯನ್ನು ತಕ್ಷಣವೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಸ್ತುತ ಆತನ ಸ್ಥಿತಿ ಸ್ಥಿರವಾಗಿದೆ.
ಸಾಂಸ್ಕೃತಿಕ ನೃತ್ಯ ಪ್ರದರ್ಶನದ ವೇಳೆ ಮುಖಕ್ಕೆ ಬಾವುಟ ಅಡ್ಡ ಬಂದ ಹಿನ್ನೆಲೆಯಲ್ಲಿ ಪಿರಮಿಡ್ ಆಕಾರದಲ್ಲಿ ಪ್ರದರ್ಶನ ನೀಡುತ್ತಿದ್ದ ಬಾಲಕನ ಸಮತೋಲನ ತಪ್ಪಿ ಕೆಳಗೆ ಬಿದ್ದ ಎನ್ನಲಾಗಿದೆ. ಪರಿಣಾಮ ಕೈಗೆ ಗಾಯವಾಗಿ ಊತ ಕಾಣಿಸಿಕೊಂಡಿತು.
ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ತಮೀಮಾ ನ್ಸಾರಿ ಅವರು ಬಾಲಕನನ್ನು ತಮ್ಮ ಕಾರಿನಲ್ಲಿ ಚಿಕ್ಕಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಎಕ್ಸ್‌ರೇ ಸೇರಿದಂತೆ ಅಗತ್ಯ ತಪಾಸಣೆಗಳನ್ನು ಮಾಡಿಸಿ, ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ.
In English: An 8th-grade student, Danish, was injured on his hand after losing balance and falling during a pyramid-formation dance performance at Crescent School’s Independence Day cultural program on Saturday, reportedly after a flag briefly obstructed his view. The school secretary personally took him to the government hospital in Chikkaballapur for an X-ray and treatment; his condition is reported stable.
ನಗರದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಇತರ ವರದಿಗಳನ್ನೂ ನೋಡಿ.