ಟೊಮೆಟೊ ತುಂಬಿದ್ದ ಕ್ಯಾಂಟರ್ ಪಲ್ಟಿ: ಹೆದ್ದಾರಿಯಲ್ಲಿ 300ಕ್ಕೂ ಹೆಚ್ಚು ಬಾಕ್ಸ್ ಚೆಲ್ಲಾಪಿಲ್ಲಿ

Sidlaghatta : ಟೊಮೆಟೊ ತುಂಬಿದ್ದ ಕ್ಯಾಂಟರ್ ಪಲ್ಟಿಯಾದ ಘಟನೆ ಶಿಡ್ಲಘಟ್ಟ ತಾಲ್ಲೂಕಿನ ಲಕ್ಕಹಳ್ಳಿ ಗೇಟ್ ಸಮೀಪದ ರಾಷ್ಟ್ರೀಯ ಹೆದ್ದಾರಿ 234 ರಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದೇ ಹೆದ್ದಾರಿಯಲ್ಲಿ ಜುಲೈನಲ್ಲಿ ಟೊಮೆಟೊ ಲಾರಿ ಪಲ್ಟಿಯಾಗಿ ಚಾಲಕ, ಕ್ಲೀನರ್‌ಗೆ ಗಾಯವಾಗಿದ್ದ ಘಟನೆಯೂ ವರದಿಯಾಗಿತ್ತು.
ಅನಂತಪುರದಿಂದ ಚಿಂತಾಮಣಿ ಕಡೆಗೆ ಟೊಮೆಟೊ ಬಾಕ್ಸ್‌ಗಳನ್ನು ತುಂಬಿಕೊಂಡು ತೆರಳುತ್ತಿದ್ದ ಕ್ಯಾಂಟರ್, ಎದುರಿನಿಂದ ಬರುತ್ತಿದ್ದ ಕಾರಿಗೆ ದಾರಿ (ಸೈಡ್) ನೀಡಲು ಯತ್ನಿಸಿದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿ ಬಿದ್ದಿದೆ. ಪರಿಣಾಮ ವಾಹನದಲ್ಲಿದ್ದ 300ಕ್ಕೂ ಹೆಚ್ಚು ಟೊಮೆಟೊ ಬಾಕ್ಸ್‌ಗಳು ಹಾಗೂ ಟೊಮೆಟೊಗಳು ರಸ್ತೆಯಾದ್ಯಂತ ಚೆಲ್ಲಾಪಿಲ್ಲಿಯಾಗಿ ಬಿದ್ದವು.
ಸಂಚಾರಕ್ಕೆ ಅಡಚಣೆಯಾಯಿತೇ?
ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು. ಸಮಾಚಾರ ತಿಳಿಯುತ್ತಿದ್ದಂತೆ 112 ತುರ್ತು ಸ್ಪಂದನ ವಾಹನದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರಸ್ತೆ ಸಂಚಾರವನ್ನು ಸುಗಮಗೊಳಿಸಿದರು.
For Daily Updates WhatsApp ‘HI’ to 7406303366
Summary in English
A canter (small truck) carrying tomato crates from Anantapur towards Chintamani overturned on National Highway 234 near Lakkahalli Gate in Sidlaghatta taluk, when the driver lost control while giving way to an oncoming car. More than 300 crates of tomatoes spilled across the road and traffic was disrupted for some time. No lives were lost; 112 emergency response police reached the spot and cleared the road.
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news