ಪೂರ್ಣ ಪುಟ · Open full page

ಕಲ್ಲುಗಳ ನಡುವೆ ಹಸಿರು ಕೀಲ್ ಬ್ಯಾಕ್ ಹಾವು ಪತ್ತೆ: ರಕ್ಷಿಸಿ ಕಾಡಿಗೆ ಬಿಟ್ಟ ಸ್ನೇಕ್ ನಾಗರಾಜ್

Sidlaghatta green keelback snake found and rescued

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದ ಚನ್ನಬಸವಯ್ಯ ಅವರ ಹೋಟೆಲ್‌ ಆವರಣದ ಕಾಂಪೌಂಡ್‌ ಕಲ್ಲುಗಳ ನಡುವೆ ಹಸಿರು ಕೀಲ್‌ ಬ್ಯಾಕ್‌ ಹಾವು ಪತ್ತೆಯಾಗಿದೆ. ಸ್ಥಳೀಯ ಸ್ನೇಕ್‌ ನಾಗರಾಜ್‌ ಅವರು ಹಾವನ್ನು ಸುರಕ್ಷಿತವಾಗಿ ಹಿಡಿದು, ರಕ್ಷಿಸಿ, ಕಾಡಿನ ಪ್ರದೇಶದಲ್ಲಿ ಬಿಟ್ಟಿದ್ದಾರೆ.

ಹಸಿರು ಅಥವಾ ಹಸಿರು-ಹಳದಿ ಬಣ್ಣ ಹೊಂದಿರುವ ಈ ಹಾವಿನ ಕುತ್ತಿಗೆಯ ಭಾಗದಲ್ಲಿ ಕಪ್ಪು ಬಣ್ಣದ “ವಿ” ಆಕಾರದ ಗುರುತುಗಳಿರುತ್ತವೆ. ಸಾಮಾನ್ಯವಾಗಿ ಮಧ್ಯಮ ಗಾತ್ರದಲ್ಲಿ ಕಂಡುಬರುವ ಈ ಹಾವು ಸುಮಾರು 60ರಿಂದ 94 ಸೆಂಟಿಮೀಟರ್‌ ಉದ್ದ ಬೆಳೆಯುತ್ತದೆ.

“ನಮ್ಮ ಭಾಗದಲ್ಲಿ ಇದೇ ಮೊದಲ ಬಾರಿಗೆ ಈ ಹಾವನ್ನು ನೋಡುತ್ತಿದ್ದೇನೆ. ಚನ್ನಕೇಶವಸ್ವಾಮಿ ದೇವಾಲಯದ ನಿರ್ಮಾಣ ಕಾರ್ಯಕ್ಕೆ ಬೇರೆಡೆಯಿಂದ ಕಲ್ಲುಗಳನ್ನು ತರಲಾಗುತ್ತಿದೆ. ಆ ಕಲ್ಲುಗಳೊಂದಿಗೆ ಈ ಹಾವು ಬಂದಿರಬಹುದು ಎಂಬುದು ನನ್ನ ಅನಿಸಿಕೆ” ಎಂದು ಸ್ನೇಕ್‌ ನಾಗರಾಜ್‌ ತಿಳಿಸಿದರು.

ಈ ಹಾವು ಮುಖ್ಯವಾಗಿ ಕಪ್ಪೆಗಳನ್ನು ಆಹಾರವಾಗಿ ಸೇವಿಸುತ್ತದೆ. ಅಪಾಯದ ಮುನ್ಸೂಚನೆ ಸಿಕ್ಕಾಗ ಕುತ್ತಿಗೆಯನ್ನು ಉಬ್ಬಿಸಿ, ನಾಗರಹಾವಿನಂತೆ ಹೆಡೆ ಎತ್ತಿದ ಭಂಗಿಯನ್ನು ಪ್ರದರ್ಶಿಸುವ ಮೂಲಕ ಶತ್ರುಗಳನ್ನು ಬೆದರಿಸಲು ಪ್ರಯತ್ನಿಸುತ್ತದೆ.

ಹಾವುಗಳು ಕಂಡುಬಂದಾಗ ಅವುಗಳನ್ನು ಕೊಲ್ಲದೆ, ಅವುಗಳ ಬಳಿ ಹೋಗದೆ, ಪರಿಣತ ಉರಗ ರಕ್ಷಕರಿಗೆ ಮಾಹಿತಿ ನೀಡಬೇಕು ಎಂದು ನಾಗರಾಜ್‌ ಸಲಹೆ ನೀಡಿದರು.

ಇದನ್ನೂ ಓದಿ: ಬಲೆಗೆ ಸಿಲುಕಿದ್ದ ನಾಗರ ಹಾವಿನ ರಕ್ಷಣೆ.

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ

error: Content is protected !!
Exit mobile version