Home News ಬಲೆಗೆ ಸಿಲುಕಿದ್ದ ನಾಗರ ಹಾವಿನ ರಕ್ಷಣೆ

ಬಲೆಗೆ ಸಿಲುಕಿದ್ದ ನಾಗರ ಹಾವಿನ ರಕ್ಷಣೆ

0
snake nagaraj cobra rescue

Devaramallur : ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯಿತಿ ತಲದುಮ್ಮನಹಳ್ಳಿ ಗ್ರಾಮದಲ್ಲಿ ಬಲೆಗೆ ಸಿಲುಕಿ ಪ್ರಾಣಾಪಾಯದಲ್ಲಿದ್ದ ನಾಗರ ಹಾವನ್ನು ಸೋಮವಾರ ಕೊತ್ತನೂರು ಸ್ನೇಕ್ ನಾಗರಾಜ್ ರಕ್ಷಿಸಿದರು.

ತಲದುಮ್ಮನ ಹಳ್ಳಿ ಗ್ರಾಮದಲ್ಲಿ ಬೆಳಗ್ಗೆ ಬೈರಣ್ಣನವರ ಕುಮಾರ್ ಮನೆ ಬಳಿ ಕೈತೋಟದ ಸುತ್ತ ದನಕರುಗಳು ಕೋಳಿಗಳು ಬರದಂತೆ ಹಾಕಲಾಗಿದ್ದ ಬಲೆಗೆ ನಾಗರಹಾವು ಸಿಕ್ಕಿಹಾಕಿಕೊಂಡಿತ್ತು. ಅದನ್ನು ಕಂಡು ಮನೆಯವರು ಭಯಗೊಂಡಿದ್ದರು. ನಾಗರಹಾವು ಅಲ್ಲಿಂದ ತಪ್ಪಿಸಿಕೊಳ್ಳಲಾಗದಂತೆ ಬಲೆಯಲ್ಲಿ ಸಿಲುಕಿದ್ದರಿಂದ ಸುತ್ತುಮುತ್ತಲ ಜನ ಸೇರಿ ಅದನ್ನು ರಕ್ಷಿಸಲೆಂದು ಕೊತ್ತನೂರು ಸ್ನೇಕ್ ನಾಗರಾಜ್ ರವರಿಗೆ ದೂರವಾಣಿ ಮುಖಾಂತರ ತಿಳಿಸಿ ಕರೆಸಿದರು. ಅವರು ಬಲೆಯಲ್ಲಿ ಬಿದ್ದಿದ್ದ ಹಾವನ್ನು ನಿಧಾನವಾಗಿ ಬಿಡಿಸಿ ಬಲೆಯನ್ನೆಲ್ಲಾ ಕತ್ತರಿಯಲ್ಲಿ ಕತ್ತರಿಸಿ, ನಾಗರ ಹಾವಿನ ರಕ್ಷಣೆ ಮಾಡಿ ಸುರಕ್ಷಿತವಾದ ಸ್ಥಳದಲ್ಲಿ ಬಿಟ್ಟು ಬಂದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version