ಫಣಿಯಮ್ಮ ನಿರ್ದೇಶಿಸಿದ ಕನ್ನಡದ ಮೊದಲ ಮಹಿಳಾ ನಿರ್ದೇಶಕಿ ಪ್ರೇಮಾ ಕಾರಂತ

- Advertisement -
- Advertisement -

Sidlaghatta : ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಅಪರೂಪದ ಕನ್ನಡ ಚಲನಚಿತ್ರ ‘ಫಣಿಯಮ್ಮ’ವನ್ನು ನಿರ್ದೇಶಿಸುವ ಮೂಲಕ ಕನ್ನಡದ ಮೊಟ್ಟಮೊದಲ ಮಹಿಳಾ ನಿರ್ದೇಶಕಿಯಾದ ಪ್ರೇಮಾ ಕಾರಂತ (1936–2007) ಅವರು ಶಿಡ್ಲಘಟ್ಟದವರು.

ಸಂಕ್ಷಿಪ್ತ ಪರಿಚಯ

  • ಪೂರ್ಣ ಹೆಸರು: ಪ್ರೇಮಾ ಕಾರಂತ (Prema Karanth)
  • ಜನನ – ನಿಧನ: 1936 – 2007
  • ಹುಟ್ಟೂರು / ಬಾಲ್ಯ: ಶಿಡ್ಲಘಟ್ಟ (ವಿರೂಪಾಕ್ಷಪ್ಪ ಹೈಸ್ಕೂಲಿನಲ್ಲಿ ವ್ಯಾಸಂಗ)
  • ಪತಿ: ರಂಗಭೂಮಿ ದಿಗ್ಗಜ ಬಿ.ವಿ. ಕಾರಂತ್
  • ಪ್ರಸಿದ್ಧಿ: ಕನ್ನಡದ ಮೊದಲ ಮಹಿಳಾ ಚಲನಚಿತ್ರ ನಿರ್ದೇಶಕಿ, ‘ಫಣಿಯಮ್ಮ’ ಚಿತ್ರದ ನಿರ್ದೇಶಕಿ
  • ಆತ್ಮಕತೆ: ‘ಸೋಲಿಸಬೇಡ ಗೆಲಿಸಯ್ಯ’

ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದ ಕೊಡುಗೆ

ಎಂ.ಕೆ. ಇಂದಿರಾ ಅವರ ಕಾದಂಬರಿ ಆಧಾರಿತ ‘ಫಣಿಯಮ್ಮ’ ಚಿತ್ರವನ್ನು ನಿರ್ದೇಶಿಸಿ ಪ್ರೇಮಾ ಕಾರಂತ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿದರು. ‘ತಬ್ಬಲಿಯು ನೀನಾದೆ ಮಗನೆ’, ‘ಗೋಧೂಳಿ’, ‘ಹಂಸಗೀತೆ’ ಸಿನಿಮಾಗಳಿಗೆ ವಸ್ತ್ರವಿನ್ಯಾಸ ಮಾಡಿದ್ದಲ್ಲದೆ, ‘ಹಂಸಗೀತೆ’ಯಲ್ಲಿ ನಟಿಸಿಯೂ ಇದ್ದರು. ಥಿಯೇಟರ್ ಜೀನಿಯಸ್ ಎನಿಸಿಕೊಂಡಿದ್ದ ಪತಿ ಬಿ.ವಿ. ಕಾರಂತ್ ಅವರೊಂದಿಗೆ ಸೇರಿ ಕನ್ನಡ ರಂಗಭೂಮಿಗೆ ಅವರು ನೀಡಿರುವ ಕೊಡುಗೆ ಅಪಾರ.

ಶಿಡ್ಲಘಟ್ಟದ ಬಾಲ್ಯದ ದಿನಗಳು

ಪ್ರೇಮಾ ಕಾರಂತರ ಆತ್ಮಕತೆ ‘ಸೋಲಿಸಬೇಡ ಗೆಲಿಸಯ್ಯ’ ಪುಸ್ತಕದಲ್ಲಿ ಅವರು ಶಿಡ್ಲಘಟ್ಟದಲ್ಲಿ ಕಳೆದ ತಮ್ಮ ಬಾಲ್ಯದ ದಿನಗಳ ಬಗ್ಗೆ ಬರೆದುಕೊಂಡಿದ್ದಾರೆ. “ಎಲ್.ಎಸ್ ಮುಗಿಸಿದ ಮೇಲೆ ನಾನು ಶಿಡ್ಲಘಟ್ಟದಲ್ಲಿದ್ದ ವಿರೂಪಾಕ್ಷಪ್ಪ ಹೈಸ್ಕೂಲಿಗೆ ಸೇರಿಕೊಂಡೆ. ನಾನು ಎಸ್.ಎಸ್.ಎಲ್.ಸಿ ಮೊದಲನೆಯ ದರ್ಜೆಯಲ್ಲಿ ಪಾಸಾಗಿದ್ದನ್ನು ಕಂಡು ಶಾಲೆಯ ಮಾಲಿಕರಾದ ವಿರೂಪಾಕ್ಷಪ್ಪನವರು, ‘ನೀನು ಬೆಂಗಳೂರಿಗೆ ಹೋಗಿ, ನಿನ್ನ ಓದು ಮುಂದುವರಿಸು. ನಿನ್ನ ಓದಿನ ಖರ್ಚನ್ನು ನಾನು ವಹಿಸಿಕೊಳ್ಳುತ್ತೇನೆ’ ಅಂದರು. ನನಗೆ ತುಂಬಾ ಸಂತೋಷವಾದರೂ ಅರೆಬರೆ ಮನಸ್ಸಿನಿಂದ ಯೋಚಿಸುತ್ತೇನೆಂದು ಹೇಳಿದೆ ಮಾತ್ರ,” ಎಂದು ಅವರು ತಮ್ಮ ಶಿಡ್ಲಘಟ್ಟದ ದಿನಗಳ ಬಗ್ಗೆ ಬರೆದಿದ್ದಾರೆ.

ನಿರ್ದೇಶಿಸಿದ ಚಲನಚಿತ್ರಗಳು

  • ಫಣಿಯಮ್ಮ
  • ನಕ್ಕಳಾ ರಾಜಕುಮಾರಿ
  • ಬಂದ್ ಝರೋಂಖೆ (ಹಿಂದಿ)
  • ಲಕ್ಷ್ಮೀ ಕಟಾಕ್ಷ
  • ಅಬ್ದುಲ್ಲಾ ಗೋಪಾಲ

ಪ್ರಶಸ್ತಿಗಳು

  • ಅಂತಾರಾಷ್ಟ್ರೀಯ ಮ್ಯಾನ್‌ಹೀಮ್ ಚಲನಚಿತ್ರೋತ್ಸವ – ‘ಫಣಿಯಮ್ಮ’ ಚಿತ್ರಕ್ಕೆ ಮೂರು ಪ್ರಶಸ್ತಿಗಳು
  • ಪ್ಯಾರಿಸ್ ಚಿತ್ರೋತ್ಸವ – ಪ್ರೇಕ್ಷಕರ ಪ್ರಶಸ್ತಿ
  • ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ – ಅತ್ಯುತ್ತಮ ಕನ್ನಡ ಚಿತ್ರ
  • ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ – ದ್ವಿತೀಯ ಉತ್ತಮ ಚಿತ್ರ, ಅತ್ಯುತ್ತಮ ಕಥೆ, ಅತ್ಯುತ್ತಮ ಪೋಷಕ ನಟಿ
  • ಫಿಲಂಫೇರ್ ಪ್ರಶಸ್ತಿ – ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕಿ
  • ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ

In English: Prema Karanth (1936-2007), who grew up and studied at Virupakshappa High School in Sidlaghatta, became Kannada cinema’s first woman film director with ‘Phaniyamma’ (based on M.K. Indira’s novel), which won the National Film Award for Best Kannada Film, a Karnataka State Film Award, a Filmfare Award for Best Director, three awards at the Mannheim International Film Festival, and the Audience Award at the Paris Film Festival. She also directed ‘Nakkala Rajakumari’, the Hindi film ‘Bund Jharokhe’, ‘Lakshmi Kataksha’, and ‘Abdulla Gopala’, and designed costumes for and acted in films including ‘Tabbaliyu Neenade Magane’, ‘Godhuli’ and ‘Hamsageethe’. Alongside her husband, theatre legend B.V. Karanth, she made a lasting contribution to Kannada theatre, and wrote about her Sidlaghatta school days in her autobiography ‘Solisabeda Gelisayya’.

ಶಿಡ್ಲಘಟ್ಟದ ಸಾಂಸ್ಕೃತಿಕ ಕ್ಷೇತ್ರದ ಮತ್ತೊಬ್ಬ ಸಾಧಕರ ಪರಿಚಯಕ್ಕೆ ಪಿಟೀಲು ವಿದ್ವಾನ್ ಹೊಸಪೇಟೆ ಎಚ್.ಬಿ.ನಾರಾಯಣಾಚಾರ್ ಅವರ ಬಗ್ಗೆಯೂ ಓದಿ. ಶಿಡ್ಲಘಟ್ಟ ಮತ್ತು ಕನ್ನಡ ಚಿತ್ರರಂಗದ ನಂಟಿನ ಬಗ್ಗೆ ಸಿನಿಮಾ ನಿರ್ಮಾಣದಲ್ಲಿ ಜೊತೆಗೂಡಿದ ಶಿಡ್ಲಘಟ್ಟದ ಕುಚ್ಚಣ್ಣ ಎಂಬ ವರದಿಯನ್ನೂ ಓದಿ.

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

- Advertisement -