Home Agriculture ಜಮೀನಿನಲ್ಲಿ ಹೆಚ್ಚುವರಿ ನೀರು ಶೇಖರಣೆಯನ್ನು ಸರಿಪಡಿಸಲು ಶಾಶ್ವತ ಮಾರ್ಗ

ಜಮೀನಿನಲ್ಲಿ ಹೆಚ್ಚುವರಿ ನೀರು ಶೇಖರಣೆಯನ್ನು ಸರಿಪಡಿಸಲು ಶಾಶ್ವತ ಮಾರ್ಗ

0
French Drain Method Agriculture

ಜಮೀನು ಅಥವಾ ತೋಟದಲ್ಲಿ ಅತಿಯಾಗಿ ತಗ್ಗು ಇದ್ದು ಎತೇಚ್ಛವಾಗಿ ನೀರು ನಿಂತು ಜೌಗು/ ಸೀತವಾದಲ್ಲಿ, ಆ ಜಾಗದಲ್ಲಿ ಬೆಳೆ ,ಗಿಡ-ಮರಗಳ ಬೆಳವಣಿಗೆ ಅತಿ ಕಡಿಮೆ.ಅದನ್ನು ಸರಿಪಡಿಸಲಿರುವ ಒಂದು ಶಾಶ್ವತ ದಾರಿಯೆ French Drain . ಸದ್ಯದ ಮಟ್ಟಿಗೆ PVC ಪೈಪ್ ಗಳ ದರ ದುಬಾರಿಯಾಗಿದ್ದರೂ, ಈ ಪದ್ಧತಿ ತುಂಬಾ ಉಪಯುಕ್ತವಾಗಿದೆ.

 

ಫ್ರೆಂಚ್ ಡ್ರೈನ್ ಅಳವಡಿಸುವ ವಿಧಾನ

 

  1. ಮೊದಲಿಗೆ ಸಣ್ಣ ಕಾಲುವೆ ತೆಗೆಯಬೇಕು
  2. ನಂತರ ಕಾಲುವೆಯೊಳಗೆ 4 ಅಂಗುಲ ಅಗಲ 2 ಅಂಗುಲ ಆಳವಾಗಿ ಮಣ್ಣು ತೆಗುದು ಡ್ರೆಸ್ ಮಾಡಿ ಅದರೊಳಗೆ 20mm ಜೆಲ್ಲಿ ಕಲ್ಲನ್ನು ತುಂಬಬೇಕು (ಮರಳು ಮಿಶ್ರಿತ ಮಣ್ಣು ಇದ್ದಲ್ಲಿ ಜೆಲ್ಲಿ ಕಲ್ಲು ಅತ್ಯವಶಕ)
  3. ನಂತರ 2 ಅಂಗುಲದ ಪೈಪ್ನಲ್ಲಿ ಹನಿ ನೀರಾವರಿ ಪೈಪನ್ನು ಕೊರೆಯುವ ವಿಧಾನದಿಂದ  1.5 ಅಂಗುಲ ಅಂತರವಿಟ್ಟು ರಂಧ್ರಗಳನ್ನು ಅನ್ನು ಕೊರೆಯಬೇಕು.
  4. ತದನಂತರ ಪೈಪನ್ನು ಜೆಲ್ಲಿ ಕಲ್ಲನ್ನು ಹಾಸಿರುವ ಕಾಲುವೆಯಲ್ಲಿ ರಂಧ್ರಗಳು ಕಾಣುವಂತೆ ಇರಿಸಬೇಕು.
  5. ಪೈಪಿನ ಮಟ್ಟವನ್ನು ನೀರು ಹರಿಯುವ ದಿಕ್ಕಿನಲ್ಲಿ ಇರಿಸಬೇಕು.
  6. ತದನಂತರ ಪೈಪಿನ ಮೇಲೆ 2 ಅಂಗುಲ ಜೆಲ್ಲಿ ಕಲ್ಲನ್ನು ಹಾಕಿ ನಂತರ ಮಣ್ಣಿನಿಂದ  ಮುಚ್ಚಬೇಕು.
  7. ಜಮೀನಿನ ಎತ್ತರ ಭಾಗದಲ್ಲಿ ಪೈಪ್ ಅನ್ನು 2 ಅಡಿ ಮೇಲೆ ಎತ್ತಿ ಮುಚ್ಚಳ ಹಾಕಬೇಕು.(ಏನಾದರೂ ಕಸ ಸೇರಿಕೊಂಡು ಪೈಪ್ ಮುಚ್ಚಿದಾಗ ಸ್ವಚ್ಛ ಮಾಡುವ ಉದ್ದೇಶ) ಇದರಿಂದ ಮಣ್ಣಿನ ಅತಿ ಜೌಗು/ಸೀತದ ಅಂಶ ತಡೆಗಟ್ಟಬಹುದು ಹಾಗೂ ಮಣ್ಣಿನ ಸವಕಳಿಯನ್ನು ತಡೆಯಬಹುದು.

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version