Home News ಸಫಾಯಿ ಕರ್ಮಚಾರಿಗಳಿಗೆ ತಾಲ್ಲೂಕು ಮಟ್ಟದ ಅರಿವು ಕಾರ್ಯಗಾರ

ಸಫಾಯಿ ಕರ್ಮಚಾರಿಗಳಿಗೆ ತಾಲ್ಲೂಕು ಮಟ್ಟದ ಅರಿವು ಕಾರ್ಯಗಾರ

0
Scavengers Taluk Awareness Program

ಶಿಡ್ಲಘಟ್ಟ ನಗರದ ಕೋಟೆ ವೃತ್ತದಲ್ಲಿರುವ ನಗರಸಭೆಯ ಸಭಾಂಗಣದಲ್ಲಿ ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಗುರುವಾರ ಸಫಾಯಿ ಕರ್ಮಚಾರಿ ಅಥವಾ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಗಳಿಗೆ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಅರಿವು ಮೂಡಿಸುವ ಕಾರ್ಯಗಾರದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್ ಮಾತನಾಡಿದರು.

ಸಫಾಯಿ ಕರ್ಮಚಾರಿಗಳು ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾರೆ. ಅದಕ್ಕಾಗಿ ಅವರಿಗೆ ನಗರಸಭೆ ವತಿಯಿಂದ ಸುರಕ್ಷಾ ಪರಿಕರಗಳನ್ನು ನೀಡಿ ಅವುಗಳನ್ನು ತಪ್ಪದೇ ಬಳಸಲು ತಿಳಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಸಫಾಯಿ ಕರ್ಮಚಾರಿಗಳಿಗೆ ಗುರುತಿನ ಚೀಟಿ ನೀಡಬೇಕು. ಇದರಿಂದ ಅವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತಲುಪಿಸಲು ಅನುಕೂಲವಾಗುತ್ತದೆ. ಸಫಾಯಿ ಕರ್ಮಚಾರಿಗಳಿರುವ ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯಗಳಾದ  ಕುಡಿಯುವ ನೀರು, ಚರಂಡಿ, ಕಾಂಕ್ರೀಟ್ ರಸ್ತೆ, ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.

 ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ಪದ್ಮ ಮಾತನಾಡಿ, ಕರ್ಮಚಾರಿಗಳ ಸುರಕ್ಷತೆ ಸಂಬಂಧ 2013ರಲ್ಲಿ ಕಾನೂನು ಬಂದ ನಂತರ ಆಗಿರುವ ಬದಲಾವಣೆ ಗಮನಾರ್ಹ. ಕರ್ಮಚಾರಿ ಸೇವೆ ಸಂಬಂಧ ಮಾಡಿರುವ ಕಾನೂನುಗಳ ಬಗ್ಗೆ ಜನರಲ್ಲಿ ಅರಿವು ಮೂಡಬೇಕು. ಅಧಿಕಾರಿಗಳು ಸಫಾಯಿ ಕರ್ಮಚಾರಿಗಳಿಗೆ ಸರಿಯಾದ ಉಪಕರಣಗಳನ್ನು ಒದಗಿಸಬೇಕು. ಒದಗಿಸಿದ ಉಪಕರಣಗಳನ್ನು ಬಳಸುವ ವಿಧಾನದ ಬಗೆಗಿನ ಮಾಹಿತಿಯನ್ನು ಕರ್ಮಚಾರಿಗಳಿಗೆ ನೀಡಬೇಕು. ಕೆಲಸ ಮಾಡಬೇಕಾದ ಸ್ಥಳಕ್ಕೆ ಸದರಿ ಉಪಕರಣಗಳ ಕೊಂಡೊಯ್ಯಬೇಕು. ಯಾರಾದರೂ ಹಾಗೆಯೇ ಉಪಕರಣಗಳಿಲ್ಲದೇ ಕೆಲಸ ಮಾಡಲು ತಿಳಿಸಿದರೆ. ಬರಿಗೈಯಲ್ಲಿ ಕೆಲಸ ಮಾಡಬಾರದು ಎಂದು ತಿಳಿ ಹೇಳಿದರು.

 ತಹಶೀಲ್ದಾರ್ ರಾಜೀವ್ ಮಾತನಾಡಿ, ಕೊರೊನಾ ತಡೆಗಟ್ಟುವಲ್ಲಿ ನಗರಸಭೆಯ ಪೌರಕಾರ್ಮಿಕರ ಸೇವೆ ಅನನ್ಯವಾದದ್ದು. ಸಫಾಯಿ ಕರ್ಮಚಾರಿಗಳು ಎಂದು ಕರೆಯುವುದರ ಬದಲು ಸ್ವಚ್ಛತಾ ವಾರಿಯರ್ಸ್ ಎಂದು ಕರೆಯುವುದು ಸೂಕ್ತ. ತ್ಯಾಜ್ಯವನ್ನು ಸ್ವಚ್ಛಗೊಳಿಸುವವರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಗಮ್ ಬೂಟ್ಸ್, ಗ್ಲೌಸ್ ಮುಂತಾದವುಗಳನ್ನು ಹಾಕಿಕೊಂಡು ಕೆಲಸ ಮಾಡಬೇಕು ಎಂದರು.

 ನಗರಸಭೆ ಪೌರಾಯುಕ್ತ ಉಮಾಶಂಕರ್, ಉಪಾಧ್ಯಕ್ಷ ಅಫ್ಸರ್ ಪಾಷ, ಆರೋಗ್ಯ ನಿರೀಕ್ಷಕಿ ಶೋಭಾ, ಸಫಾಯಿ ಕರ್ಮಚಾರಿ ಜಿಲ್ಲಾ ಸಂಸ್ಥೆಯ ನಾರಾಯಣಸ್ವಾಮಿ, ಜೀವಿಕ ಜಿಲ್ಲಾ ಸಂಚಾಲಕ ಹನುಮಂತು, ತಾಲ್ಲೂಕು ಮಹಿಳಾ ಸಂಚಾಲಕಿ ಅಮರಾವತಿ, ಸರಸ್ವತಮ್ಮ, ರವಿಕುಮಾರ್, ಪೌರಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಮುರಳೀಧರ್, ನಗರಸಭೆ ಸದಸ್ಯ ಸಮೀವುಲ್ಲಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುಶೀಲಮ್ಮ, ಶಿವಶಂಕರ್ ಹಾಜರಿದ್ದರು.

 

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version