Home News ಗೊರಮಡಗು ಸರ್ಕಾರಿ ಶಾಲೆಯಲ್ಲಿ ವಾರ್ಷಿಕೋತ್ಸವ ಸಂಭ್ರಮ

ಗೊರಮಡಗು ಸರ್ಕಾರಿ ಶಾಲೆಯಲ್ಲಿ ವಾರ್ಷಿಕೋತ್ಸವ ಸಂಭ್ರಮ

0
Sidlaghatta Goramadugu Government School Annual Day

Goramadagu, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಗೊರಮಡಗು ಸರ್ಕಾರಿ ಶಾಲೆಯಲ್ಲಿ ಮೂರನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಎಂ.ಪಿ.ಸಿ.ಎಸ್ ಸದಸ್ಯ ಗೋಪಾಲ ಗೌಡ ಮಾತನಾಡಿ, ಈ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ಜೀವನದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿರುವರು. ಈ ಸಾಧನೆಗೆ ಕಾರಣರಾದ ಶಿಕ್ಷಕರನ್ನು ಸದಾ ನೆನೆಯಬೇಕು. ಸರ್ಕಾರಿ ಶಾಲೆಗಳು ಈ ಮಟ್ಟಕ್ಕೆ ಬೆಳೆಯುವುದು ತುಂಬಾ ಸಂತೋಷ ತಂದಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಪಡೆದರು. ಅಂಗನವಾಡಿ ಪುಟಾಣಿ ಮಕ್ಕಳ ನೃತ್ಯ, ಪೋಷಕರು ಹಾಗೂ ಗ್ರಾಮಸ್ಥರ ಮನಸೆಳೆಯಿತು. ಹಳೆಯ ವಿದ್ಯಾರ್ಥಿಗಳು ಪ್ರೋತ್ಸಾಹ ನೀಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದರು.

ಈ ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕಿಯರಾದ ಸುಜಾತಾ ಮತ್ತು ಶ್ವೇತಾ ಅವರಿಗೆ ಕನ್ನಡ ಪರ ಹೋರಾಟಗಾರ ಗೀತಾ ಡಿಶ್ ಮಂಜುನಾಥ್ ಗ್ರಾಮಸ್ಥರ ಪರವಾಗಿ ಕಿರು ಸನ್ಮಾನ ಮಾಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ರಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಮ್ಮ ಶ್ರೀನಿವಾಸ್, ಎಂಪಿಸಿಎಸ್ ಅಧ್ಯಕ್ಷ ಮುನಿವೀರಪ್ಪ, ಮುನಿ ನಾರಾಯಣಸ್ವಾಮಿ, ದೇವರಾಜ್, ನಾಗರಾಜಪ್ಪ, ಗೋಪಾಲಗೌಡ, ಮೈತ್ರಿ ಲೋಕೇಶ್, ಜಿ.ಕೆ. ಮಂಜುನಾಥ್, ಡಿಶ್ ಮಂಜುನಾಥ್, ಮುನಿರೆಡ್ಡಿ, ಕೇಶವರೆಡ್ಡಿ, ಪಿಳ್ಳಾಂಜಿನಪ್ಪ, ಮುನಿಕೃಷ್ಣ, ಮುನಿವೆಂಕಟ, ಶಿಕ್ಷಕರಾದ ಸುಜಾತಮ್ಮ, ಶ್ವೇತಾ, ರವಿಕಿರಣ್, ಕೆಂಪಮ್ಮ, ಮಾಲ, ಗ್ರಾಮಸ್ಥರು ಮತ್ತು ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version