Home News SIR: 12,076 ಲೋಪದೋಷ ಪತ್ತೆ, 10,098 ಪ್ರಕರಣ ವಿಚಾರಣೆ ಪೂರ್ಣ; ಅ.27ಕ್ಕೆ ಅಂತಿಮ ಮತದಾರರ ಪಟ್ಟಿ

SIR: 12,076 ಲೋಪದೋಷ ಪತ್ತೆ, 10,098 ಪ್ರಕರಣ ವಿಚಾರಣೆ ಪೂರ್ಣ; ಅ.27ಕ್ಕೆ ಅಂತಿಮ ಮತದಾರರ ಪಟ್ಟಿ

0
Sidlaghatta SIR voter list discrepancies press meet

Sidlaghatta : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯದಲ್ಲಿ 142ನೇ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ 12,076 ಲೋಪದೋಷಗಳು ಪತ್ತೆಯಾಗಿದ್ದು, ಈ ಪೈಕಿ 10,098 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ ಎಂದು ಮತದಾರರ ನೋಂದಣಾಧಿಕಾರಿ ಎಸ್.ಎಸ್. ಅಬೀದ್ ತಿಳಿಸಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಮ್ಯಾಪಿಂಗ್ ಕಾರ್ಯದ ಬಳಿಕ 1,84,975 ಮತದಾರರಿದ್ದಾರೆ. ಹೆಸರು, ತಂದೆ-ತಾಯಿಯ ಹೆಸರು ಹಾಗೂ ವಯಸ್ಸಿನ ವ್ಯತ್ಯಾಸ ಸೇರಿದಂತೆ 9,234 ಅನಾಮಲಿ ಪ್ರಕರಣಗಳು ಹಾಗೂ 2002ರ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ 2,842 ಪ್ರಕರಣಗಳು ಪತ್ತೆಯಾಗಿವೆ. ಈ ಎಲ್ಲ ಪ್ರಕರಣಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, 1,978 ಪ್ರಕರಣಗಳ ವಿಚಾರಣೆ ಬಾಕಿ ಇದೆ ಎಂದರು.

ಮತದಾರರ ಪಟ್ಟಿಯ ಪರಿಷ್ಕರಣೆಗಾಗಿ ನಮೂನೆ 6, 7 ಮತ್ತು 8ರ ಅಡಿಯಲ್ಲಿ ಒಟ್ಟು 5,386 ಅರ್ಜಿಗಳು ಸ್ವೀಕೃತವಾಗಿದ್ದು, 4,992 ಅರ್ಜಿಗಳ ವಿಲೇವಾರಿ ಮಾಡಲಾಗಿದೆ. ಅಕ್ಟೋಬರ್ 22ರೊಳಗೆ ನೋಟಿಸ್‌ ಗಳ ವಿಲೇವಾರಿ ಪೂರ್ಣಗೊಳಿಸಿ, ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಹೇಳಿದರು.

ಅಂತಿಮ ಮತದಾರರ ಪಟ್ಟಿ ಯಾವಾಗ ಪ್ರಕಟ?

ಚುನಾವಣಾ ಅಕ್ರಮಗಳ ತಡೆಗೆ ಕ್ಷೇತ್ರದಲ್ಲಿ ಮೂರು ಫ್ಲೈಯಿಂಗ್ ಸ್ಕ್ವಾಡ್‌ ಗಳು, ಒಂದು ವಿಡಿಯೊ ಸರ್ವೆಲೆನ್ಸ್ ತಂಡ ಹಾಗೂ ಒಂದು ಚೆಕ್‌ ಪೋಸ್ಟ್ ಸ್ಥಾಪಿಸಲಾಗಿದೆ. ಒಬ್ಬ ಸೆಕ್ಟರ್ ಅಧಿಕಾರಿಯನ್ನೂ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಚುನಾವಣೆ

ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ಸೆಪ್ಟೆಂಬರ್ 29ರಂದು ಅಧಿಸೂಚನೆ ಪ್ರಕಟವಾಗಿದ್ದು, ಅಕ್ಟೋಬರ್ 6 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅಕ್ಟೋಬರ್ 7ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅಕ್ಟೋಬರ್ 9 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಅಕ್ಟೋಬರ್ 23ರಂದು ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಅಕ್ಟೋಬರ್ 27ರಂದು ಮತ ಎಣಿಕೆ ನಡೆಯಲಿದೆ. ಅಕ್ಟೋಬರ್ 31ರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಶಿಡ್ಲಘಟ್ಟ ಕ್ಷೇತ್ರದಲ್ಲಿ ಒಟ್ಟು 4,285 ಮತದಾರರಿದ್ದು, 2,507 ಪುರುಷರು ಹಾಗೂ 1,778 ಮಹಿಳೆಯರಿದ್ದಾರೆ. ಕ್ಷೇತ್ರದಲ್ಲಿ ಐದು ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಶಿಡ್ಲಘಟ್ಟದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಲ್ಕು ಹಾಗೂ ದಿಬ್ಬೂರಹಳ್ಳಿಯಲ್ಲಿ ಒಂದು ಮತಗಟ್ಟೆ ಇರಲಿದೆ. ಜಂಗಮಕೋಟೆ ಮತ್ತು ಬಶೆಟ್ಟಿಹಳ್ಳಿಯಲ್ಲಿ ಪೂರಕ ಮತಗಟ್ಟೆಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಈವರೆಗೆ 43 ಅರ್ಜಿಗಳು ಸ್ವೀಕೃತವಾಗಿವೆ ಎಂದು ತಿಳಿಸಿದರು.

ತಹಶೀಲ್ದಾರ್ ಗಗನಸಿಂಧು ಉಪಸ್ಥಿತರಿದ್ದರು.

In English: In the Special Intensive Revision (SIR) of the electoral roll for the 142 Sidlaghatta Assembly constituency, 12,076 discrepancies have been found and 10,098 cases have been heard, Electoral Registration Officer S.S. Abeed said at a press meet on Thursday. The constituency has 1,84,975 voters after mapping; notices will be disposed of by October 22 and the final voter list published on October 27. Separately, polling for the South-East Graduates’ Constituency of the Karnataka Legislative Council is on October 23, with counting on October 27.

FAQ

When will the final voter list be published for Sidlaghatta?
The final voter list for the 142 Sidlaghatta constituency will be published on October 27, after notices are disposed of by October 22.

How many discrepancies were found in the SIR of the Sidlaghatta voter list?
A total of 12,076 discrepancies were found, including 9,234 anomaly cases and 2,842 cases where the name was missing from the 2002 roll; 10,098 cases have been heard so far.

For Daily Updates WhatsApp ‘HI’ to 7406303366

error: Content is protected !!
Exit mobile version