ರಾಜ್ಯಮಟ್ಟದ ವಾಲಿಬಾಲ್ ವಿಜೇತರಿಗೆ ಬಹುಮಾನ: ಶಿಕ್ಷಣದ ಜತೆ ಸಂಸ್ಕಾರ ಏಕೆ ಅಗತ್ಯ ಎಂದರು ವೇದಪಂಡಿತರು

Sidlaghatta : ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ ಹಾಗೂ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಣಾ ಸಮಾರಂಭ ನಡೆಯಿತು. ಶಿಕ್ಷಣದ ಜತೆಗೆ ಮಕ್ಕಳಿಗೆ ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರ ಹಾಗೂ ಆಚಾರ-ವಿಚಾರಗಳನ್ನು ಕಲಿಸುವುದು ಅತ್ಯಗತ್ಯ ಎಂದು ವೇದಪಂಡಿತ ವಿದ್ವಾನ್ ದಾಶರಥಿ ಭಟ್ಟಾಚಾರ್ಯ ಅಲ್ಲಿ ತಿಳಿಸಿದರು.
ಮಕ್ಕಳಿಗೆ ಸಂಸ್ಕಾರ ಏಕೆ ಮುಖ್ಯ?
ಪಠ್ಯ ಮತ್ತು ಪದವಿಗೆ ಹೆಚ್ಚಿನ ಆದ್ಯತೆ ನೀಡುವ ಭರದಲ್ಲಿ ಮಕ್ಕಳು ನಮ್ಮ ನಾಡಿನ ಸಂಸ್ಕೃತಿ ಹಾಗೂ ಸಂಸ್ಕಾರಗಳಿಂದ ದೂರವಾಗುತ್ತಿರುವುದು ಆತಂಕಕಾರಿ ಎಂದ ಅವರು, ಇಂತಹ ಸಂದರ್ಭದಲ್ಲಿ ಸಂಸ್ಕಾರವಂತ ವಿದ್ಯಾರ್ಥಿಗಳನ್ನು ರೂಪಿಸುತ್ತಿರುವ ವಾಸವಿ ವಿದ್ಯಾಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು. ಶೇ 100ರಷ್ಟು ಫಲಿತಾಂಶದ ಜತೆಗೆ ಕ್ರೀಡೆಯಲ್ಲಿಯೂ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಿರುವುದು ಸಂಸ್ಥೆಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವಾತಾವರಣಕ್ಕೆ ಸಾಕ್ಷಿ ಎಂದು ಹೇಳಿದರು.
ಕಸಾಪ ಅಧ್ಯಕ್ಷರು ಹೇಳಿದ್ದೇನು?
ತಾಲ್ಲೂಕು ಕಸಾಪ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಸಂಸ್ಥೆಯು ಕನ್ನಡಪರ ಕಾರ್ಯಕ್ರಮಗಳಿಗೆ ವೇದಿಕೆ ಕಲ್ಪಿಸುವುದರ ಜತೆಗೆ ಕನ್ನಡ ಭಾಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಲು ಪ್ರೋತ್ಸಾಹಿಸುತ್ತಿದೆ. ಶಿಸ್ತು, ಸಂಸ್ಕಾರ ಮತ್ತು ದಕ್ಷತೆಯನ್ನು ಬೆಳೆಸುವ ಮೂಲಕ ಮಕ್ಕಳು ಪಠ್ಯ ಹಾಗೂ ಕ್ರೀಡೆಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ, ಬಹುಮಾನ ವಿತರಣೆ
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಯಾರೆಲ್ಲಾ ಇದ್ದರು?
ಸಂಸ್ಥೆಯ ಅಧ್ಯಕ್ಷ ಮಹೇಶ್ ಬಾಬು, ಆಡಳಿತಾಧಿಕಾರಿ ರೂಪಸಿ ರಮೇಶ್, ಮುನಿ ನಾರಾಯಣಪ್ಪ, ನಿರ್ದೇಶಕರಾದ ರಾಜೇಶ್, ವೇಣುಗೋಪಾಲ್, ಉಪಾಧ್ಯಕ್ಷ ಟಿ.ಎಸ್.ಕೆ.ಎಲ್. ಬಾಬು, ಮುಖ್ಯಶಿಕ್ಷಕ ಶಿವಕುಮಾರ್, ಸಿ.ಕೆ. ರವಿ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂಬಂಧಿತ ಸುದ್ದಿ: ರಾಜ್ಯಮಟ್ಟಕ್ಕೆ ಆಯ್ಕೆಯಾದ ವಾಸವಿ ಬಾಲಕಿಯರ ವಾಲಿಬಾಲ್ ತಂಡ | ಆಟೋಟ ಸ್ಪರ್ಧೆಗಳೊಂದಿಗೆ ಮಕ್ಕಳ ದಿನಾಚರಣೆ
For Daily Updates WhatsApp ‘HI’ to 7406303366
Summary in English
Vedic scholar Vidwan Dasharathi Bhattacharya said that along with education, teaching children the culture, values and traditions of our land is essential. He was speaking at a function at the Vasavi Vidya Samsthe on Monday that combined Kannada Rajyotsava, Children’s Day and a prize distribution for winners of a state-level volleyball tournament. He said it is worrying that children are drifting from their culture in the race for textbooks and degrees, praised the institution for shaping value-minded students, and said 100 per cent results along with state-level selection in sports show its academic and cultural atmosphere. Taluk Kannada Sahitya Parishat president Narayanaswamy said the institution gives a platform to Kannada programmes and encourages good marks in Kannada. Students presented cultural programmes and prizes were given to the state-level volleyball winners. Institution president Mahesh Babu, directors, headmaster Shivakumar and teachers were present.
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news