ಪೂರ್ಣ ಪುಟ · Open full page

ಚಿಣ್ಣರ ಚಿತ್ರಕಲಾ ಉತ್ಸವ–2026: ಪ್ರಥಮ ₹1,500 ಬಹುಮಾನ; ತಾಲ್ಲೂಕು ಮಟ್ಟಕ್ಕೆ ಇಬ್ಬರು ಆಯ್ಕೆ

Children and officials holding certificates, cash prize cheques and books at the prize distribution of the rural children drawing festival in front of the gram panchayat banner

Sidlaghatta : ಮಕ್ಕಳ ದಿನಾಚರಣೆ ಹಾಗೂ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನದ ಅಂಗವಾಗಿ ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ‘ಗ್ರಾಮೀಣ ಮಕ್ಕಳ ಚಿಣ್ಣರ ಚಿತ್ರಕಲಾ ಉತ್ಸವ–2026’ ಆಯೋಜಿಸಲಾಗಿತ್ತು. ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಮಟ್ಟದಲ್ಲಿ ಮೂರು ಹಂತಗಳಲ್ಲಿ ನಡೆಯುವ ಸ್ಪರ್ಧೆಯ ಮೊದಲ ಹಂತ ಇದಾಗಿದ್ದು, ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಯಾವ ವಿಷಯಗಳಿಗೆ ಚಿತ್ರ ಬಿಡಿಸಿದರು?

ಪ್ರಾಥಮಿಕ ಶಾಲಾ ವಿಭಾಗಕ್ಕೆ “ಪ್ರಕೃತಿ ಮತ್ತು ಪರಿಸರ”, ಪ್ರೌಢಶಾಲಾ ವಿಭಾಗಕ್ಕೆ “ಹಳ್ಳಿ ಜೀವನ ಶೈಲಿ ಮತ್ತು ಬದುಕು” ಎಂಬ ವಿಷಯಗಳನ್ನು ನೀಡಲಾಗಿತ್ತು.

ವಿಜೇತರು ಯಾರು? ಬಹುಮಾನ ಎಷ್ಟು?

ಅಬ್ಲೂಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಭವಿಷ್ಯ ಸತೀಶ್ ಪ್ರಥಮ ಸ್ಥಾನ, ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಾಧುರ್ಯ ಟಿ.ಕೆ. ದ್ವಿತೀಯ ಸ್ಥಾನ ಹಾಗೂ ಜಯಂತಿಗ್ರಾಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತರುಣ್ ಕುಮಾರ್ ಎಂ. ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಕ್ರಮವಾಗಿ ₹1,500, ₹1,000 ಹಾಗೂ ₹500 ನಗದು ಬಹುಮಾನದೊಂದಿಗೆ ಪ್ರಮಾಣಪತ್ರ ಮತ್ತು ಪುಸ್ತಕಗಳನ್ನು ನೀಡಲಾಯಿತು.

ಚಿತ್ರಕಲಾ ಸ್ಪರ್ಧೆ ಏಕೆ ಮುಖ್ಯ?

ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸ್ವಾಮಿ ಮಾತನಾಡಿ, ಮಕ್ಕಳಲ್ಲಿರುವ ಸೃಜನಶೀಲತೆ, ಕಲಾತ್ಮಕ ಪ್ರತಿಭೆ ಹಾಗೂ ಕಲ್ಪನಾಶಕ್ತಿಯನ್ನು ಹೊರತರುವಲ್ಲಿ ಇಂತಹ ಚಿತ್ರಕಲಾ ಸ್ಪರ್ಧೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು. ಮಕ್ಕಳು ಪಠ್ಯಪುಸ್ತಕದ ಕಲಿಕೆಯ ಜತೆಗೆ ತಮ್ಮ ಸುತ್ತಮುತ್ತಲಿನ ಪರಿಸರ, ಪ್ರಕೃತಿ, ಗ್ರಾಮೀಣ ಬದುಕು ಹಾಗೂ ಸಮಾಜದ ಮೌಲ್ಯಗಳನ್ನು ಕಲೆಯ ಮೂಲಕ ಅಭಿವ್ಯಕ್ತಪಡಿಸಲು ಇಂತಹ ವೇದಿಕೆಗಳು ಸಹಕಾರಿ; ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಶಿಕ್ಷಕರು, ಪೋಷಕರು ಹಾಗೂ ಅಧಿಕಾರಿಗಳ ಜವಾಬ್ದಾರಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಯಾರೆಲ್ಲಾ ಇದ್ದರು?

ಸಿ.ಆರ್.ಪಿ ಕೃಷ್ಣಪ್ಪ, ಅಬ್ಲೂಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್. ಮಮತಾ, ಗ್ರಾಮ ಪಂಚಾಯಿತಿ ಗ್ರಂಥಾಲಯದ ಗ್ರಂಥಪಾಲಕ ಎಂ.ಜಿ. ಮುನಿನರಸಿಂಹ, ಬಿಲ್ ಕಲೆಕ್ಟರ್ ಶಶಿಕುಮಾರ್, ಸಿ.ಎ. ದ್ಯಾವಪ್ಪ, ಶಿಕ್ಷಕರಾದ ರಮೇಶ್, ಮಂಜುನಾಥ್ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಸಂಬಂಧಿತ ಸುದ್ದಿ: ಪ್ರತಿಭಾ ಕಾರಂಜಿಯಲ್ಲಿ ಜಾನಪದ ನೃತ್ಯ, ಚಿತ್ರಕಲೆ, ನಾಟಕ ಸ್ಪರ್ಧೆ | ಆಟೋಟ ಸ್ಪರ್ಧೆಗಳೊಂದಿಗೆ ಮಕ್ಕಳ ದಿನಾಚರಣೆ

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

Nearby

ಇದನ್ನೂ ಓದಿ

Exit mobile version