Home News ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ದಲಿತರ ಕುಂದುಕೊರತೆ ಸಭೆ

ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ದಲಿತರ ಕುಂದುಕೊರತೆ ಸಭೆ

0
Dibburahalli Police Station SC ST Grievance Meeting

Dibburahalli, Sidlaghatta : ದಲಿತ ಸಮುದಾಯದವರು ಶಿಕ್ಷಣದಿಂದ ಯಾರೂ ವಂಚಿತರಾಗಬಾರದು. ಉತ್ತಮ ವಿದ್ಯಾಭ್ಯಾಸ ಪಡೆದು ಒಳ್ಳೆಯ ಕೆಲಸಗಳಿಗೆ ಪ್ರಯತ್ನಿಸಬೇಕು,” ಎಂದು ಸರ್ಕಲ್ ಇನ್ಸ್ಪೆಕ್ಟರ್ ಆನಂದ್ ಕುಮಾರ್ ಅವರು ಕಿವಿಮಾತು ತಿಳಿಸಿದರು.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ದಲಿತರ ಕುಂದುಕೊರತೆ ಸಭೆ ಮತ್ತು ಹೆಲ್ಮೆಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದ ಒಳಿತಿಗಾಗಿ ಅಧಿಕಾರಿಗಳ ಕಿವಿಮಾತು:

  • ದುಶ್ಚಟಗಳಿಂದ ದೂರವಿರಿ: ಯುವಕರು ದಾರಿ ತಪ್ಪದೆ ಶಿಕ್ಷಣದ ಕಡೆಗೆ ಗಮನ ಹರಿಸಬೇಕು. ಶಿಕ್ಷಣ ಪಡೆದವರು ಸಮಾಜದ ಇತರರಿಗೆ ಮಾದರಿಯಾಗಬೇಕು.
  • ಪೋಕ್ಸೋ (POCSO) ಪ್ರಕರಣಗಳಲ್ಲಿ ರಾಜಿ ಬೇಡ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಂತಹ ಗಂಭೀರ ಪ್ರಕರಣಗಳನ್ನು ರಾಜಿ ಮೂಲಕ ಮುಗಿಸಲು ಪ್ರಯತ್ನಿಸಬೇಡಿ. ನೊಂದವರಿಗೆ ಕಾನೂನುಬದ್ಧ ನ್ಯಾಯ ಕೊಡಿಸುವುದು ನಮ್ಮೆಲ್ಲರ ಹೊಣೆ ಎಂದು ಸಿಐ ಎಚ್ಚರಿಸಿದರು.

ಜೀವ ಉಳಿಸುವ ಹೆಲ್ಮೆಟ್:

ಪಿಎಸ್ಐ ಶ್ಯಾಮಲ ಮಾತನಾಡಿ, “ಬೈಕ್ ಖರೀದಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡುವ ನಾವು, ಸಾವಿರ ರೂಪಾಯಿ ಹೆಲ್ಮೆಟ್ ಖರೀದಿಸಲು ಹಿಂದೆ ಮುಂದೆ ನೋಡುತ್ತೇವೆ. ದಂಡ ಕಟ್ಟುವುದಕ್ಕೆ ಹೆದರಿ ಅಲ್ಲ, ನಿಮ್ಮ ಜೀವದ ರಕ್ಷಣೆಗಾಗಿ ಹೆಲ್ಮೆಟ್ ಧರಿಸಿ,” ಎಂದರು. ಹೆಲ್ಮೆಟ್ ಧರಿಸದಿದ್ದರೆ ಬೈಕ್ ಜಪ್ತಿ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು.

ದಲಿತ ಮುಖಂಡ ದಡಂಘಟ್ಟ ತಿರುಮಲೇಶ್ ಅವರು ಮಾತನಾಡಿ, ಈ ಭಾಗದಲ್ಲಿ ಹಿಂದೆ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಿದ್ದವು. ಆದರೆ ಈಗ ಅಧಿಕಾರಿಗಳ ಸಹಕಾರದಿಂದ ಪರಿಸ್ಥಿತಿ ಸುಧಾರಿಸಿದೆ. ಇಂತಹ ಸಭೆಗಳು ನಿಯಮಿತವಾಗಿ ನಡೆಯಬೇಕು ಎಂದು ಮನವಿ ಮಾಡಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version