ಗಾಂಜಾ ಸಾಗಾಣಿಕ ಆರೋಪದಡಿ ಯುವಕನ ಬಂಧನ, ಗ್ರಾಮಾಂತರ ಪೊಲೀಸರಿಂದ ತನಿಖೆ ಚುರುಕು

- Advertisement -
- Advertisement -

Sidlaghatta : ಗಾಂಜಾ ಸಾಗಾಣಿಕೆ ಆರೋಪದಡಿ ಚರಣ್ ಎಂಬ ಯುವಕನನ್ನು ಗ್ರಾಮಾಂತರ ಠಾಣೆ ಪೊಲೀಸರು ಶುಕ್ರವಾರ ತಾಲ್ಲೂಕಿನ ಮಳ್ಳೂರು ಬಳಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಮಳ್ಳೂರಿನ ಮಾರ್ಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದ ಕಡೆಗೆ ಗಾಂಜಾ ಸಾಗಾಣಿಕೆ ನಡೆಯುತ್ತಿದೆ ಎನ್ನುವ ಮಾಹಿತಿ ಕೇಳಿಬಂದ ಹಿನ್ನೆಲೆಯಲ್ಲಿ, ತಹಶೀಲ್ದಾರ್ ಗಗನಸಿಂಧು ಅವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದರು. ಮಳ್ಳೂರು ಸಮೀಪದ ಕಾಚಹಳ್ಳಿ ಗೇಟ್‌ನಲ್ಲಿ ಯುವಕನನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದೇನು?

ಗಾಂಜಾ ಯಾವ ಕಡೆಯಿಂದ ಪೂರೈಕೆಯಾಗುತ್ತದೆ, ಎಲ್ಲಿಗೆಲ್ಲಿ ಸಾಗಾಣಿಕೆಯಾಗುತ್ತಿದೆ ಹಾಗೂ ಇದರ ಹಿಂದೆ ಇತರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಈ ಹಿಂದೆಯೂ ಇದೇ ರೀತಿಯ ಗಾಂಜಾ ಸಾಗಾಣಿಕೆ ಪ್ರಕರಣ ಶಿಡ್ಲಘಟ್ಟ ವ್ಯಾಪ್ತಿಯಲ್ಲಿ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಹಿಂದೆ ನಡೆದಿದ್ದ ಮಾದಕ ವಸ್ತು ವ್ಯಸನ ಜಾಗೃತಿ ಕಾರ್ಯಕ್ರಮದಲ್ಲಿಯೂ ಈ ಕುರಿತು ಆತಂಕ ವ್ಯಕ್ತವಾಗಿತ್ತು.

In English: Rural police arrested a man identified as Charan near Mallur on Friday on charges of marijuana trafficking, following information that ganja was being routed via Mallur toward Vijayapura in Bengaluru Rural district. Acting under Tahsildar Gaganasindhu’s direction, police apprehended him near Kachahalli Gate and registered a case; investigation is underway into the supply source, distribution network and others potentially involved.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!