Home News ಟೊಮ್ಯಾಟೊ ಮೌಲ್ಯವರ್ಧನೆಗೆ MOU: “ಅರ್ಕಾ ಟೊಮ್ಯಾಟೊ ಕ್ರಷ್” ತಂತ್ರಜ್ಞಾನ ವರ್ಗಾವಣೆ

ಟೊಮ್ಯಾಟೊ ಮೌಲ್ಯವರ್ಧನೆಗೆ MOU: “ಅರ್ಕಾ ಟೊಮ್ಯಾಟೊ ಕ್ರಷ್” ತಂತ್ರಜ್ಞಾನ ವರ್ಗಾವಣೆ

0
3

Sidlaghatta : ರೈತರು ಬೆಳೆದ ಟೊಮ್ಯಾಟೊಗೆ ಮೌಲ್ಯವರ್ಧನೆ ಮಾಡಿ ಉತ್ತಮ ಮಾರುಕಟ್ಟೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ICAR-IIHR), ಹೆಸರಘಟ್ಟ ಹಾಗೂ ಶಿಡ್ಲಘಟ್ಟದ ಶ್ರೀ ಗಂಗಾಭವಾನಿ ಹಾರ್ಟಿಕಲ್ಚರ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ (FPO) ನಡುವೆ ಗುರುವಾರ “ಅರ್ಕಾ ಟೊಮ್ಯಾಟೊ ಕ್ರಷ್” ತಂತ್ರಜ್ಞಾನ ವರ್ಗಾವಣೆ ಕುರಿತ MOU ವಿನಿಮಯಗೊಂಡಿತು.

ಬೆಂಗಳೂರು ಸಮೀಪದ ಹೆಸರಘಟ್ಟದಲ್ಲಿ ನಡೆದ ICAR ನ 98ನೇ ಪ್ರತಿಷ್ಠಾನ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಒಪ್ಪಂದಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ICAR ನ ಮಾಜಿ ರಾಷ್ಟ್ರೀಯ ನಿರ್ದೇಶಕ ಹಾಗೂ ಸಹಾಯಕ ಕೃಷಿ ನಿರ್ದೇಶಕ ಡಾ. ಮೃತ್ತ್ಯುಂಜಯ ಅವರು, ಸಂಶೋಧನಾ ತಂತ್ರಜ್ಞಾನವನ್ನು ರೈತರ ಮಟ್ಟಕ್ಕೆ ತಲುಪಿಸಲು ಸಾರ್ವಜನಿಕ–ಖಾಸಗಿ ಸಹಭಾಗಿತ್ವ ಅಗತ್ಯ ಎಂದು ಹೇಳಿದರು. IIHR ನಿರ್ದೇಶಕ ಡಾ. ತುಷಾರ್ ಕಾಂತಿ ಬೆಹೆರಾ, ಗಂಗಾಭವಾನಿ FPO ಅಧ್ಯಕ್ಷ ವಿಜಯ ಭಾವರೆಡ್ಡಿ, ನಿರ್ದೇಶಕ ಜಿ.ಎನ್. ರವಿಕುಮಾರ್ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎನ್. ಮಧು ಅವರ ಸಮ್ಮುಖದಲ್ಲಿ ಒಪ್ಪಂದ ಪತ್ರ ವಿನಿಮಯಗೊಂಡಿತು.

ಒಪ್ಪಂದದಿಂದ ಏನು ಪ್ರಯೋಜನ?

ಈ ಒಪ್ಪಂದದಡಿ IIHR, ಟೊಮ್ಯಾಟೊ ಕ್ರಷ್ ಸಂಸ್ಕರಣಾ ಘಟಕ ಸ್ಥಾಪನೆಗೆ ಅಗತ್ಯ ತಂತ್ರಜ್ಞಾನ, ಪರವಾನಗಿ, ತಾಂತ್ರಿಕ ತರಬೇತಿ ಹಾಗೂ ನಿರಂತರ ತಾಂತ್ರಿಕ ಮಾರ್ಗದರ್ಶನವನ್ನು FPOಗೆ ಒದಗಿಸಲಿದೆ. ಇದರಿಂದ ಟೊಮ್ಯಾಟೊ ಮೌಲ್ಯವರ್ಧನೆ, ಗ್ರಾಮೀಣ ಉದ್ಯಮಶೀಲತೆ ಅಭಿವೃದ್ಧಿ ಹಾಗೂ ರೈತರ ಆದಾಯ ಹೆಚ್ಚಳಕ್ಕೆ ನೆರವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

“IIHR ನೊಂದಿಗೆ ಮಾಡಿಕೊಂಡಿರುವ ಈ ಒಪ್ಪಂದದಿಂದ ಶಿಡ್ಲಘಟ್ಟ ತಾಲ್ಲೂಕಿನ ಟೊಮ್ಯಾಟೊ ಬೆಳೆಗಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ಅವಕಾಶ ದೊರೆಯುವುದರಿಂದ ರೈತರಿಗೆ ಉತ್ತಮ ಬೆಲೆ, ವರ್ಷಪೂರ್ತಿ ಮಾರುಕಟ್ಟೆ ಅವಕಾಶ ಹಾಗೂ ಹೆಚ್ಚುವರಿ ಆದಾಯ ಸಿಗಲಿದೆ. ಗ್ರಾಮೀಣ ಮಟ್ಟದಲ್ಲಿ ಉದ್ಯೋಗ ಸೃಷ್ಟಿಗೂ ಇದು ನೆರವಾಗಲಿದೆ” ಎಂದು ಶ್ರೀ ಗಂಗಾಭವಾನಿ FPO ಅಧ್ಯಕ್ಷ ವಿಜಯ ಭಾವರೆಡ್ಡಿ ತಿಳಿಸಿದ್ದಾರೆ.

In English: ICAR-IIHR Hesaraghatta and Sidlaghatta’s Sri Gangabhavani Horticulture Farmers Producer Company (FPO) signed an MOU on Thursday for transferring “Arka Tomato Crush” technology, aimed at helping tomato farmers add value to their produce and access better markets. The agreement, exchanged at ICAR’s 98th Foundation Day event, will give the FPO the technology, licensing, training and technical guidance needed to set up a tomato crush processing unit — expected to boost farmer income and create rural employment.

Sidlaghatta WhatsApp Channel Group

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!