ನ.7ಕ್ಕೆ ಪ್ರಜಾ ಸೇವಾ ಆಂದೋಲನ, ಜನಸ್ಪಂದನ: ಕುಂದುಕೊರತೆ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಎಸ್.ದೇವಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನವೆಂಬರ್ 7ರಂದು ಬೆಳಿಗ್ಗೆ 10 ಗಂಟೆಗೆ ಪ್ರಜಾ ಸೇವಾ ಆಂದೋಲನ ಹಾಗೂ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದೆ.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಸಾದಲಿ, ತಲಕಾಯಲಬೆಟ್ಟ, ಈ.ತಿಮ್ಮಸಂದ್ರ, ಎಸ್.ದೇವಗಾನಹಳ್ಳಿ ಹಾಗೂ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ಕುಂದುಕೊರತೆಗಳನ್ನು ಸಲ್ಲಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೇಮಾವತಿ.ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಬಂಧಿತ ಸುದ್ದಿ: ಪ್ರಜಾಸೇವೆ ಆಂದೋಲನದ ಮೊದಲ ಜನಸ್ಪಂದನ ಸಭೆ ಸಾದಲಿ ಹೋಬಳಿಯಲ್ಲಿ ಸಂಪನ್ನ | ಸೆ.12ಕ್ಕೆ ಬಶೆಟ್ಟಿಹಳ್ಳಿ ಹೋಬಳಿಯಲ್ಲಿ ಪ್ರಜಾಸೇವೆ ಆಂದೋಲನ ಜನಸ್ಪಂದನ: ಸಾದಲಿಯಲ್ಲಿ 175 ಅರ್ಜಿ ಸ್ವೀಕಾರ

For Daily Updates WhatsApp ‘HI’ to 7406303366
Summary in English
A Prajaseva Andolana and Janaspandana (public grievance) programme will be held at 10 am on November 7 in the S. Devaganahalli Gram Panchayat limits of Sadali hobli, Sidlaghatta taluk, under the chairmanship of Sidlaghatta MLA B.N. Ravikumar. Taluk Panchayat Executive Officer Hemavathi R has appealed to residents of the Sadali, Talakayalabetta, E. Thimmasandra, S. Devaganahalli and Dibburahalli gram panchayats to attend in large numbers and submit their grievances for resolution.
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news



