
ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ ಆಗಿದ್ದ ಶಿಡ್ಲಘಟ್ಟ ನಗರ ನಲ್ಲಿಮರದಹಳ್ಳಿಯ ವಾಸಿ ನಾಗರಾಜ್(57) ಸೋಮವಾರ ಮೃತಪಟ್ಟಿದ್ದು ಮಂಗಳವಾರ ನಗರದ ಹೊರವಲಯದ ಸ್ಮಶಾನದಲ್ಲಿ ಅವರ ಅಂತಿಮ ಕಾರ್ಯ ನೆರವೇರಿತು.
ಪತ್ನಿ, ಮಗ ಮತ್ತು ಮಗಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇತ್ತೀಚೆಗೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದು ಚಿಕಿತ್ಸೆಗೆ ಸ್ಪಂಸದೆ ಮೃತಪಟ್ಟಿದ್ದಾರೆ. ನಲ್ಲಿಮರದಹಳ್ಳಿ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು ಎಸ್ಪಿ ಕುಶಲ್ ಚೌಕ್ಸೆ, ಡಿವೈಎಸ್ಪಿ ಮುರಳೀಧರ್, ಎಸ್.ಐ ರಾಜೇಶ್ವರಿ ಸೇರಿದಂತೆ ಹಲವಾರು ಹಿರಿಯ ಪೊಲೀಸ್ ಅಧಿಕಾರಿಗಳು ಅಂತಿಮ ದರ್ಶನ ಪಡೆದರು.