ಪೂರ್ಣ ಪುಟ · Open full page
News

ರೈತರಿಂದ ರೈತರಿಗೆ ಮಾಹಿತಿ ವಿನಿಮಯ

ರೈತರಿಂದ ರೈತರಿಗೆ ಮಾಹಿತಿ ವಿನಿಮಯವಾಗುವ ಉದ್ದೇಶದಿಂದ ಕ್ಷೇತ್ರ ದರ್ಶನವನ್ನು ನಡೆಸಿರುವುದಾಗಿ ತಲಗಟ್ಟಪುರದ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿ ಡಾ. ಪ್ರಭಾಕರರಾವ್ ತಿಳಿಸಿದರು.
ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಸುರೇಶ್ ಅವರ ರೇಷ್ಮೆ ಕೃಷಿಯ ಕುರಿತು ಮಾಹಿತಿ ವಿನಿಮಯಕ್ಕಾಗಿ ವಿವಿಧ ಜಿಲ್ಲೆಗಳ 40 ಮಂದಿ ರೈತರ ತಂಡದೊಡನೆ ಆಗಮಿಸಿದ್ದ ಅವರು ಮಾತನಾಡಿದರು.
ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ರೈತರಿಗೆ ರೇಷ್ಮೆ ಬೆಳೆ, ಹಿಪ್ಪುನೇರಳೆ ಬೇಸಾಯ, ಹುಳು ಸಾಕಾಣಿಕೆ ಕುರಿತಂತೆ ನಾಲ್ಕು ದಿನಗಳ ಕಾಲ ಶಿಬಿರವನ್ನು ನಡೆಸಿದ್ದು, ಎರಡು ದಿನಗಳ ಕಾಲ ಸಂಸ್ಥೆಯಲ್ಲಿ ವಿಷಯ ತಜ್ಞರಿಂದ ತರಬೇತಿ ಕೊಡಲಾಗುತ್ತದೆ. ಎರಡು ದಿನಗಳ ಕಾಲ ಪ್ರಗತಿಪರ ರೈತರ ತೋಟಗಳಿಗೆ ಭೇಟಿ ನೀಡುವ ಮೂಲಕ ಮಾಹಿತಿ ವಿನಿಮಯ, ಸಂದೇಹ ಪರಿಹಾರ ಮಾಡಿಕೊಡಲಾಗುತ್ತದೆ ಎಂದು ಹೇಳಿದರು.
ಹಿತ್ತಲಹಳ್ಳಿಯ ಪ್ರಗತಿಪರ ರೈತ ಸುರೇಶ್ ಮಾತನಾಡಿ, ಕಡಿಮೆ ನೀರಿನಲ್ಲಿ ಉತ್ತಮ ರೇಷ್ಮೆ ಬೆಳೆಯನ್ನು ಬೆಳೆಯುತ್ತಿರುವ ತಮ್ಮ ಅನುಭವ ಮತ್ತು ಬಳಸಿಕೊಂಡ ಪದ್ಧತಿಗಳನ್ನು ರೈತರೊಂದಿಗೆ ಹಂಚಿಕೊಂಡಿರುವುದಾಗಿ ನುಡಿದರು.
ಈ ಸಂದರ್ಭದಲ್ಲಿ ಆಗಮಿಸಿದ್ದ ರೈತರು ಚಾಕಿ ಕೇಂದ್ರ, ಹಿಪ್ಪುನೇರಳೆ ತೋಟ ಮತ್ತು ರೇಷ್ಮೆ ಹುಳು ಸಾಕಾಣಿಕಾ ಮನೆಗೆ ಭೇಟಿ ನೀಡಿದರು.

📰 ಇದನ್ನೂ ಓದಿ

News

ರೇಷ್ಮೆ ಬೆಳೆಗೆ ವಿಷವಿಕ್ಕಿದ ದುಷ್ಕರ್ಮಿಗಳು

Kannamangala, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲದ ಗಂಗರಾಜು ಅವರ ಹಿಪ್ಪುನೇರಳೆ ಸೊಪ್ಪಿಗೆ ದುಷ್ಕರ್ಮಿಗಳು ವಿಷವನ್ನು ಸಿಂಪಡಿಸಿದ್ದರಿಂದಾಗಿ ರೇಷ್ಮೆ ಹುಳುಗಳು ಸಾವಿಗೀಡಾಗಿವೆ. ಹಣ್ಣಾದ ಹಂತದಲ್ಲಿದ್ದ…

📸 ನಿಮ್ಮ ಊರಿನ ಸುದ್ದಿ ಇದೆಯೇ?

ಫೋಟೋ ಸಮೇತ ಕಳುಹಿಸಿ

💬 Send news📢 Daily updates: join our WhatsApp channel

Google ನಲ್ಲಿ ನಮ್ಮ ಸುದ್ದಿ ಹೆಚ್ಚು ನೋಡಲು

⭐ Add Sidlaghatta as a preferred source on Google
Exit mobile version