ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ ವಿದ್ಯಾಸಂಸ್ಥೆಯಲ್ಲಿ ಒಮಿಕ್ರಾನ್ ರೂಪಾಂತರ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲೆಯ ಎಲ್ಲಾ ವಿಧ್ಯಾರ್ಥಿಗಳಿಗೆ ಕೋವಿಡ್ 19 ಸುರಕ್ಷತಾ ಕಿಟ್ ಗಳನ್ನು ಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ ವಿತರಿಸಿದರು. ಪ್ರತಿಯೊಂದು ಕಿಟ್ ನಲ್ಲಿಯೂ ಎರಡು ಸೋಪ್ ಗಳು, 5 ಮಾಸ್ಕ್ ಗಳು ಮತ್ತು ಎರಡು ಸ್ಯಾನಿಟೈಸರ್ ಬಾಟಲ್ ಗಳು ಇದ್ದು ವಿದ್ಯಾರ್ಥಿಗಳು ಅವುಗಳನ್ನು ಸದುಪಯೋಗಪಡಿಸಿಕೊಳ್ಳಲು ಸೂಚಿಸಲಾಯಿತು.