Home News ಪ್ರಾಣಾಪಾಯದ ಭೀತಿಯಲ್ಲಿ ತೊಟ್ಲಗಾನಹಳ್ಳಿ ಸರ್ಕಾರಿ ಶಾಲೆ ಮಕ್ಕಳು

ಪ್ರಾಣಾಪಾಯದ ಭೀತಿಯಲ್ಲಿ ತೊಟ್ಲಗಾನಹಳ್ಳಿ ಸರ್ಕಾರಿ ಶಾಲೆ ಮಕ್ಕಳು

ಶಾಲೆ ಕೊಠಡಿ ಮುಂದೆ ವಿದ್ಯುತ್ ಪ್ಯಾನಲ್, ಶಿಕ್ಷಕರ ಗೈರು, ಬಿಸಿಯೂಟಕ್ಕೆ ಸ್ವಯಂ ಘೋಷಿತ ರಜೆ

0

ತಾಲ್ಲೂಕಿನ ತೊಟ್ಲಗಾನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಶಾಲೆಯಲ್ಲಿ ಇರದೆ ಗೈರು ಹಾಜರಾಗಿ ಮಕ್ಕಳು ತರಗತಿಗಳಲ್ಲಿ ಕಲಿಕೆಯನ್ನು ಬಿಟ್ಟು ಅಭದ್ರತೆಯಲ್ಲಿ ಆಟವಾಡುತ್ತಿರುವುದು ಕಂಡು ಬಂದಿದೆ.

ಕೊಠಡಿ ಮುಂದೆ ವಿದ್ಯುತ್ ಪ್ಯಾನಲ್ ಬೋರ್ಡ್

ಶಾಲೆಯ ಕೊಠಡಿ ಮುಂದೆ ವಿದ್ಯುತ್ ಪ್ಯಾನಲ್ ಬೋರ್ಡ್

ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ತೊಟ್ಲಗಾನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡುವ ಸಲುವಾಗಿ ಶಾಲಾ ಆವರಣದಲ್ಲಿ ಕೊಳವೆ ಬಾವಿಯನ್ನು ಕೊರೆಸಲಾಗಿದೆ. ಅದಕ್ಕೆ ಮೋಟಾರು ಪಂಪು ಅಳವಡಿಸುವ ಸಲುವಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಶಾಲೆಯ ಬಿಸಿಯೂಟ ತಯಾರು ಮಾಡುವ ಕೊಠಡಿಯ ಮುಂಬಾಗದಲ್ಲಿ ಬೇಕಾಬಿಟ್ಟಿಯಾಗಿ ಪ್ಯಾನಲ್ ಬೋರ್ಡ್ (ಸ್ಟಾರ್ಟರ್) ಇರಿಸಿದ್ದಾರೆ. ವಿದ್ಯುತ್ ಅಳವಡಿಸಲು ವಿದ್ಯುತ್ ಕಂಬದಿಂದ ತ್ರೀಫೇಸ್ ತಂತಿಗಳನ್ನು ನೇರವಾಗಿ ತಂದು ಕಟೌಟ್ ಬಾಕ್ಸ್ ಮೂಲಕ ವಿದ್ಯುತ್ ತಂತಿಗಳು ಬಿಟ್ಟಿರುವುದರಿಂದ ವಿದ್ಯಾರ್ಥಿಗಳು ಅಪಾಯಕರ ಸ್ಥಿತಿಯಲ್ಲಿ ವಿದ್ಯುತ್ ತಂತಿಗಳನ್ನು ನೋಡಿಕೊಂಡು ಮಧ್ಯಾಹ್ನದ ಬಿಸಿಯೂಟ ಸೇವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ದಿವ್ಯನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ವಿದ್ಯಾರ್ಥಿಗಳ ಭದ್ರತಾ ದೃಷ್ಟಿಯಿಂದ ಪ್ರಾಣಾಪಾಯವನ್ನು ತಪ್ಪಿಸಲು ಕೂಡಲೇ ವಿದ್ಯುತ್ ಅಳವಡಿಸಿರುವ ಪರಿಕರಗಳನ್ನು ತೆರವುಗೊಳಿಸಿ  ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಅಂಗನವಾಡಿ ಕೇಂದ್ರಕ್ಕೆ ಸ್ವಯಂ ಘೋಷಿತ ರಜೆ

ತೊಟ್ಲಗಾನಹಳ್ಳಿ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಗಳು ಅಭದ್ರತೆಯಲ್ಲಿ ಪಾಠ ಪ್ರವಚನಗಳನ್ನು ಕೇಳುವ ಶೋಚನೀಯ ಪರಿಸ್ಥಿತಿ ನಿರ್ಮಾಣಗೊಂಡಿರುವುದು ಒಂದೆಡಯಾದರೆ ಮತ್ತೊಂದೆಡೆ ಶಾಲೆಗೆ ಹೊಂದಿಕೊಂಡಿರುವ ಅಂಗನವಾಡಿ ಕೇಂದ್ರಕ್ಕೆ ಸ್ವಯಂ ಘೋಷಿತ ರಜೆ ನೀಡಲಾಗಿದೆ. ತೊಟ್ಲಗಾನಹಳ್ಳಿ ಗ್ರಾಮದವರೇ ಅಂಗನವಾಡಿ ಕಾರ್ಯಕರ್ತರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಆದರೆ ಕೋವಿಡ್ ಸೋಂಕಿನ ಪ್ರಭಾವ ಹೆಚ್ಚಾಗುವ ಭೀತಿಯಿಂದ ಮಕ್ಕಳಿಗೆ ಕಳೆದ ಮೂರು ದಿನಗಳಿಂದ ಸ್ವಯಂ ಘೋಷಿತ ರಜೆಯನ್ನು ನೀಡಿದ್ದಾರೆ.

ಸರ್ಕಾರಿ ಶಾಲೆಯ ಶಿಕ್ಷಕ ಶಾಲಾ ವೇಳೆಯಲ್ಲಿ ಮಕ್ಕಳನ್ನು ಶಾಲೆಯಲ್ಲೇ ಬಿಟ್ಟು ಹೊರ ಹೋಗಿದ್ದರೆ, ಅಂಗನವಾಡಿ ಕಾರ್ಯಕರ್ತೆ ಮಾತ್ರ ಮಕ್ಕಳಿಗೆ ಮೂರು ದಿನ ರಜೆ ನೀಡಿ ಅವರು ಸಹ ಗೈರು ಹಾಜರಾಗಿರುವುದು ವಿಶೇಷವಾಗಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version