Home News ಕೋವಿಡ್ ಲಸಿಕೆ ಆಂದೋಲನ

ಕೋವಿಡ್ ಲಸಿಕೆ ಆಂದೋಲನ

0
Covid Vaccination Drive Sidlaghatta

ಶಿಡ್ಲಘಟ್ಟ ನಗರದಲ್ಲಿ ಲಸಿಕೆ ನೀಡುತ್ತಿರುವ ನಾಲ್ಕು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ತಹಶೀಲ್ದಾರ್ ಬಿ.ಎಸ್.ರಾಜೀವ್ ಮಾತನಾಡಿದರು.

ಕೋವಿಶೀಲ್ಡ್‌ ಲಸಿಕೆ ಸಂಬಂಧ ಎರಡನೇ ಡೋಸ್‌ ಬಾಕಿ ಇರುವಂಥ ಫಲಾನುಭವಿಗಳಿಗೆ ಲಸಿಕೆ ಹಾಕುವ ಆಂದೋಲನ (Vaccine Drive) ಆಗಸ್ಟ್ 2 ರಿಂದ ತಾಲ್ಲೂಕಿನಲ್ಲಿ ಮತ್ತಷ್ಟು ಚುರುಕು ಪಡೆಯಲಿದೆ ಎಂದು ಅವರು ತಿಳಿಸಿದರು.

ಎರಡನೇ ಡೋಸ್ ಕೋವಿಶೀಲ್ಡ್ ಪಡೆಯಲು ನಗರದ ಸ್ತ್ರೀಶಕ್ತಿ ಭವನ, ನಗರ ಆರೋಗ್ಯ ಕೇಂದ್ರ, ಉಲ್ಲೂರುಪೇಟೆ ಶಾಲೆ ಮತ್ತು ನಗರಸಭೆ ಆವರಣದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಆಯಾ ಭಾಗದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹೆಚ್ಚು ಆಸಕ್ತಿ ವಹಿಸಿ, ತಮ್ಮ ಭಾಗದ ಜನರಲ್ಲಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ, ಕರೆತಂದು ಲಸಿಕೆ ಹಾಕಿಸಬೇಕೆಂದು ಕೋರಲಾಗಿದೆ. ಎರಡನೇ ಡೋಸ್ ಬಾಕಿ ಇರುವವರ ಪಟ್ಟಿಯನ್ನು ಇಟ್ಟುಕೊಂಡು ಅವರಿಗೆ ಪ್ರಥಮ ಆದ್ಯತೆ ನೀಡಿ ಲಸಿಕೆ ಹಾಕಿಸಲಾಗುತ್ತಿದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ, .ತಾಲ್ಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ದೇವರಾಜ್ ಹಾಜರಿದ್ದರು.

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version