ಪೂರ್ಣ ಪುಟ · Open full page

ದೀಪಾವಳಿ ರಾತ್ರಿ 8ರಿಂದ ಮಧ್ಯರಾತ್ರಿವರೆಗೆ ಕೋಲಾಟ: ದುಶ್ಚಟದ ಬದಲು ಜಾನಪದ ಕಲೆಯ ಸಂದೇಶ

A troupe performing kolata with sticks on a red carpet as villagers watch and a drummer plays, during a Deepavali folk art night in a village

Sidlaghatta : ದೀಪಾವಳಿ ಹಬ್ಬದ ಪ್ರಯುಕ್ತ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಮಡುಗು ಗ್ರಾಮದಲ್ಲಿ ಅದ್ದೂರಿ ಕೋಲಾಟ ಕಾರ್ಯಕ್ರಮ ನಡೆಯಿತು.

ಗ್ರಾಮದ ಮುಖಂಡರು ಮತ್ತು ಸಾರ್ವಜನಿಕರ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿಕ್ಕತೇಕಹಳ್ಳಿ ಶ್ರೀ ಆಂಜನೇಯ ಸ್ವಾಮಿ ಕೋಲಾಟ ಕಲಾ ತಂಡದ ಕಲಾವಿದರು ರಾತ್ರಿ 8ರಿಂದ ಮಧ್ಯರಾತ್ರಿ 12ರವರೆಗೆ ವಿವಿಧ ಬಗೆಯ ಕೋಲಾಟ ಪ್ರದರ್ಶಿಸಿದರು.

ಕೋಲುಗಳ ಝೇಂಕಾರ, ಜಾನಪದ ಹಾಡು ಮತ್ತು ತಾಳಬದ್ಧ ಹೆಜ್ಜೆಗಳ ನಡುವೆ ಮಕ್ಕಳು, ಯುವಕರು, ಮಹಿಳೆಯರು ಮತ್ತು ಹಿರಿಯರು ಮಧ್ಯರಾತ್ರಿಯವರೆಗೂ ಪ್ರದರ್ಶನ ವೀಕ್ಷಿಸಿ, ಚಪ್ಪಾಳೆ ತಟ್ಟಿ ಕಲಾವಿದರನ್ನು ಹುರಿದುಂಬಿಸಿದರು.

ಹಬ್ಬದ ಹೆಸರಿನಲ್ಲಿ ದುಶ್ಚಟಗಳಿಗೆ ಬಲಿಯಾಗುವ ಬದಲು ಇಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಯುವಕರು ತೊಡಗಿಕೊಳ್ಳಬೇಕು ಎಂಬ ಸಂದೇಶ ಕಾರ್ಯಕ್ರಮದಲ್ಲಿ ಮೂಡಿತು. ಇದರಿಂದ ಶಿಸ್ತು, ಒಗ್ಗಟ್ಟು ಮತ್ತು ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಯುತ್ತದೆ; ಗ್ರಾಮೀಣ ಭಾಗದಲ್ಲಿ ಮರೆಯಾಗುತ್ತಿರುವ ಜಾನಪದ ಕಲೆಗಳ ಉಳಿವಿಗೂ ಇಂತಹ ಕಾರ್ಯಕ್ರಮಗಳು ಪೂರಕ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಲಕ್ಷ್ಮಮ್ಮ ಬೈರಾರೆಡ್ಡಿ, ಮಾಜಿ ಸದಸ್ಯರಾದ ಮುರಳಿ, ಕೆ. ಬೈರಾರೆಡ್ಡಿ, ಚಲಪತಿ, ಗ್ರಾಮದ ಮುಖಂಡರಾದ ಆರ್. ಶಿವಣ್ಣ, ಎಂ. ವೆಂಕಟರೆಡ್ಡಿ, ನವೀನ್ ಕುಮಾರ್, ಚಿಕ್ಕದೇವರಾಜು, ನಂಜುಂಡಪ್ಪ, ವೆಂಕಟನರಸಪ್ಪ, ಎನ್. ಆನಂದ್, ಚಂದ್ರಶೇಖರ್, ರಣಜಿತ್ ಕುಮಾರ್, ಶಿವಶಂಕರ್ ರೆಡ್ಡಿ ಸೇರಿದಂತೆ ಮಹಿಳೆಯರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

ಸಂಬಂಧಿತ ಸುದ್ದಿ: ಚಿಕ್ಕತೇಕಹಳ್ಳಿಯಲ್ಲಿ ಜನಪದ ಕಲೆಗಳ ಸಂಭ್ರಮ: ಯುವಕರಿಂದ ಮನಸೆಳೆದ ಕೋಲಾಟ ಪ್ರದರ್ಶನ | ಗ್ರಾಮಸ್ಥರ ಪ್ರಶಂಸೆಗೆ ಪಾತ್ರವಾದ ಜಡೆ ಕೋಲಾಟ

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Exit mobile version