Home News ಚಾಕೊಲೇಟ್ ಮತ್ತು ಹೂ ನೀಡಿ ವಿನೂತನವಾಗಿ ದಾಖಲಾತಿ ಆಂದೋಲನ

ಚಾಕೊಲೇಟ್ ಮತ್ತು ಹೂ ನೀಡಿ ವಿನೂತನವಾಗಿ ದಾಖಲಾತಿ ಆಂದೋಲನ

0
Govt School Admission Karnataka Government Gudihalli Sidlaghatta

ಶಿಡ್ಲಘಟ್ಟ ತಾಲ್ಲೂಕಿನ ಗೌಡನಹಳ್ಳಿಯಲ್ಲಿ ಶಾಲೆಯ ಶಿಕ್ಷಕರೆಲ್ಲ ಮನೆಮನೆ ಭೇಟಿ ನೀಡಿ ಪಾಲಕರು ಮತ್ತು ಮಕ್ಕಳಿಗೆ ಚಾಕೊಲೇಟ್ ಮತ್ತು ಹೂ ನೀಡಿ ಸರ್ಕಾರಿ ಶಾಲೆಗೆ ಸೇರಿಸುವಂತೆ ಮನವೊಲಿಸುವ ದಾಖಲಾತಿ ಆಂದೋಲನವನ್ನು ನಡೆಸಿ ಮುಖ್ಯ ಶಿಕ್ಷಕ ಎಂ.ದೇವರಾಜ್ ಮಾತನಾಡಿದರು.

ಕೊರೊನಾದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಮಕ್ಕಳು ಮತ್ತು ಪಾಲಕರು ಸರ್ಕಾರಿ ಶಾಲೆಯ ಬಳಿ ಬಂದು ದಾಖಲಾತಿ ಮಾಡಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಶಿಕ್ಷಕರು ಮನೆ ಮನೆ ಭೇಟಿ ಮಾಡಿ ಒಂದನೇ ತರಗತಿ ಸೇರಿದಂತೆ ಯಾವುದೇ ತರಗತಿಗೆ ಅರ್ಹ ಮಕ್ಕಳನ್ನು ದಾಖಲಾತಿ ಮಾಡಿಸಲು ಪಾಲಕರೊಂದಿಗೆ ಮಾತನಾಡುತ್ತಿರುವುದಾಗಿ ಅವರು ತಿಳಿಸಿದರು.

 ಸರ್ಕಾರದಿಂದ ಮಕ್ಕಳಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿದ್ದೇವೆ. ಸರ್ಕಾರದ ಆದೇಶ ಬರುವವರೆಗೆ ಮಕ್ಕಳು ಮನೆಯಲ್ಲಿಯೇ ಇರಬೇಕಾಗುತ್ತದೆ. ಅಲ್ಲಿಯತನಕ ನಾವು ದಾಖಲೆಗಳನ್ನು ನಿರ್ವಹಿಸಿ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳನ್ನು ಶಾಲೆಯ ಮೂಲಕ ತಲುಪಿಸುತ್ತಿರುತ್ತೇವೆ. ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿ ಮಕ್ಕಳನ್ನು ಅಲ್ಲಿ ಸೇರಿಸಬೇಕೆಂದಿರುವ ಪಾಲಕರಿಗೂ ನಾವು ಸರ್ಕಾರಿ ಶಾಲೆಯ ಅನುಕೂಲತೆಗಳು ಮತ್ತು ಮಕ್ಕಳ ಕಲಿಕೆಗೆ ನಾವು ಕೈಗೊಂಡಿರುವ ಕ್ರಮಗಳನ್ನು ವಿವರಿಸುತ್ತಿದ್ದೇವೆ. ಈ ಕಷ್ಟ ಕಾಲದಲ್ಲಿ ಹಣ ಉಳಿಸುವುದು ಸಂಪಾದಿಸಿದಂತೆ. ಖಾಸಗಿ ಶಾಲೆಗಳಿಗೆ ಅನಗತ್ಯವಾಗಿ ಹಣ ಸುರಿಯಬೇಡಿ. ಇದರಿಂದ ಮಕ್ಕಳ ಕಲಿಕೆ ಉತ್ತಮಗೊಳ್ಳುವುದಿಲ್ಲ ಎಂದು ವಿವರಿಸುತ್ತಿದ್ದೇವೆ. ಪಾಲಕರಿಂದ ನಮಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ಹೇಳಿದರು.

 ನಮ್ಮ ಗೌಡನಹಳ್ಳಿ ಸರ್ಕಾರಿ ಶಾಲೆಯ ವ್ಯಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದೇವೆ. ಪ್ರತಿ ಪಾಲಕರದ್ದೂ ಫೋನ್ ನಂಬರನ್ನು ಸೇರಿಸಿಕೊಂಡಿದ್ದೇವೆ. ಒಂದಷ್ಟು ಸರಳವಾಗಿ ಮಕ್ಕಳು ಕಲಿಯಲು ಸಾಧ್ಯವಾಗುವ ಪೋಸ್ಟರ್, ಮಾಹಿತಿ, ವೀಡಿಯೋಗಳನ್ನು ಪಾಲಕರಿಗೆ ಕಳುಹಿಸುತ್ತಿದ್ದೇವೆ. ಆನಂತರ ಮನೆ ಮನೆ ಭೇಟಿ ನೀಡುತ್ತಾ ಮಕ್ಕಳು ಅದರಿಂದ ಕಲಿತಿರುವುದರ ಬಗ್ಗೆ ಪರಿಶಿಲನೆ ಕೂಡ ಮಾಡುತ್ತಿದ್ದೇವೆ ಎಂದರು.

 ಶಿಕ್ಷಕರಾದ ವಿ.ಎಂ.ಮಂಜುನಾಥ್, ಎಚ್.ಬಿ.ಕೃಪಾ, ಪಿ.ಸುದರ್ಶನ್, ಎಸ್.ಎ.ನಳಿನಾಕ್ಷಿ, ಅಂಗನವಾಡಿ ಶಿಕ್ಷಕರಾದ ಬಿ.ಎಸ್.ಮಂಜುಳಾ, ಬಿ.ರಾಧಾ ಹಾಜರಿದ್ದರು.

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version