Home News ಆಲೀಕಲ್ಲು ಮಳೆಯಿಂದಾಗಿ 6 ಕೋಟಿ ನಷ್ಟ

ಆಲೀಕಲ್ಲು ಮಳೆಯಿಂದಾಗಿ 6 ಕೋಟಿ ನಷ್ಟ

0
Hailstorm Sidlaghatta Rain Administration Tehsildar

ತಾಲ್ಲೂಕಿನ ಕೆಲವೆಡೆ ಗುರುವಾರ ಸಂಜೆ ಬಿದ್ದ ಭಾರೀಗಾತ್ರದ ಆಲೀಕಲ್ಲು ಮಳೆಯಿಂದಾಗಿ ಸುಮಾರು ಆರು ಕೋಟಿ ರೂ ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ.

 ತಾಲ್ಲೂಕಿನ ಮುದ್ದನದಿಣ್ಣೆ, ಗೌಡನಹಳ್ಳಿ, ಧನಮಿಟ್ಟೇನಹಳ್ಳಿ, ಬಶೆಟ್ಟಹಳ್ಳಿ ಮತ್ತು ವಲಸೇನಹಳ್ಳಿ ಗ್ರಾಮಗಳ ರೈತರಿಗೆ ಆಲೀಕಲ್ಲಿನ ಮಳೆಯಿಂದ ಸಾಕಷ್ಟು ತೊಂದರೆಯಾಗಿದೆ. ಟೊಮೇಟೋ 90 ಎಕರೆ, ದ್ರಾಕ್ಷಿ 25 ಎಕರೆ, 7 ಎಕರೆ ಪಾಲಿಹೌಸ್, ಕೋಸು 2 ಎಕರೆ, ಹಾಗಲಕಾಯಿ 2 ಎಕರೆ, ಬೀನ್ಸ್ 3 ಎಕರೆ, ಚೆಂಡು ಹೂವು 2 ಎಕರೆ, ಬೀಟ್ ರೂಟ್ 3 ಎಕರೆ, ಒಟ್ಟಾರೆ 127 ಎಕರೆಯಷ್ಟು ಪ್ರದೇಶದಲ್ಲಿ ಬೆಳೆಗಳು ಹಾಳಾಗಿದ್ದು, 6 ಕೋಟಿ ರೂಗಳಷ್ಟು ರೈತರಿಗೆ ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ.

 ತಹಶೀಲ್ದಾರ್ ರಾಜೀವ್, ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ವಿಶ್ವನಾಥ್, ಸಹಾಯಕ ನಿರ್ದೇಶಕ ರಮೇಶ್ ಸಹಾಯಕ ಅಧಿಕಾರಿ ಪ್ರಿಯಾಂಕ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ತಿಮ್ಮರಾಜು, ಕೃಷಿ ಇಲಾಖೆಯ ಅಧಿಕಾರಿ ಮೋಹನ್, ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version