Home News ಬೃಹತ್ ಗಾತ್ರದ ಆಲೀಕಲ್ಲು ಮಳೆ

ಬೃಹತ್ ಗಾತ್ರದ ಆಲೀಕಲ್ಲು ಮಳೆ

0
massive hailstorm sidlaghatta

ಗುರುವಾರ ಸಂಜೆ ದಿಡೀರನೆ ಸುರಿದ ಬೃಹದಾಕಾರದ ಆಲೀಕಲ್ಲು ಮಳೆಯಿಂದ ತಾಲ್ಲೂಕಿನ ಕೆಲವೆಡೆ ರೈತರಿಗೆ ಅಪಾರ ನಷ್ಟ ಉಂಟಾಗಿದೆ.

ತಾಲ್ಲೂಕಿನ ಬಶೆಟ್ಟಹಳ್ಳಿ ವ್ಯಾಪ್ತಿಯ ಅಮ್ಮಗಾರಹಳ್ಳಿ, ಗೌಡನಹಳ್ಳಿ ಸುತ್ತಮುತ್ತಲಿನ ರೈತರ ಪಾಲಿಹೌಸ್‌ಗಳು ಹಾಳಾಗಿದ್ದು, ಬಹುತೇಕ ದ್ರಾಕ್ಷಿ, ಟಮೋಟ ತೋಟಗಳು ಬೃಹತ್ ಆಲಿಕಲ್ಲು ಮಳೆಯಿಂದಾಗಿ ನೆಲಕಚ್ಚಿವೆ.

ಹಿಂದೆಂದೂ ಕಂಡರಿಯದಂತಹ ಸುಮಾರು 2 ಅಡಿ ಸುತ್ತಳತೆಯ ಬೃಹತ್ ಆಲಿಕಲ್ಲು ‘ಬಂಡೆ’ಗಳು ದಿಢೀರನೆ ಆಕಾಶದಿಂದ ಬೀಳತೊಡಗಿದವು. ನೋಡನೋಡುತ್ತಿದ್ದಂತೆ ಬೆಳೆಗೆ ಕಟ್ಟಿದ್ದ ಪಾಲಿಹೌಸ್‌ಗಳು ನೆಲಕಚ್ಚ್ಚಿದವು. ಪಾಲಿಹೌಸ್ ಹಾಳಾಗುವ ಜೊತೆಗೆ ದ್ರಾಕ್ಷಿ ಸೇರಿದಂತೆ ರೈತರು ಬೆಳೆದ ವಿವಿಧ ಬೆಳೆಗಳು ಹಾಳಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಗೌಡನಹಳ್ಳಿ ಸಮೀಪದ ಎನ್.ಬಚ್ಚೇಗೌಡ ಅವರಿಗೆ ಸೇರಿರುವ 6 ಎಕರೆ ದ್ರಾಕ್ಷಿ ತೋಟ, ಒಂದು ಎಕರೆ ಟೊಮೇಟೋ ಮತ್ತು ಒಂದು ಎಕರೆ ಕೋಸು ಬೆಳೆಗಳು ಕೊನೆಯ ಹಂತದಲ್ಲಿದ್ದವು. ಮಾರಾಟದ ಹಂತದಲ್ಲಿದ್ದ ಈ ಬೆಳೆಗಳು ಭಾರೀಗಾತ್ರದ ಆಲೀಕಲ್ಲು ಮಳೆಯಿಂದಾಗಿ ನಾಶವಾಗಿದ್ದು, ಸುಮಾರು 27 ಲಕ್ಷ ರೂಗಳಷ್ಟು ನಷ್ಟ ಉಂಟಾಗಿರುವುದಾಗಿ ಅವರು ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version