Home News ಶ್ರೀ ಕರಗದಮ್ಮದೇವಿ ಹೂವಿನ ಕರಗ ಮಹೋತ್ಸವ

ಶ್ರೀ ಕರಗದಮ್ಮದೇವಿ ಹೂವಿನ ಕರಗ ಮಹೋತ್ಸವ

A Night of Music, Dance, and Devotion in Honor of Karagadamma Devi

0
The Huvina Karaga Mahotsava of Sri Karagadammadevi in Sidlaghatta City was celebrated with great enthusiasm, featuring music, dance, and devotion in honor of Karagadamma Devi.

Sidlaghatta : ಶಿಡ್ಲಘಟ್ಟ ನಗರದ ಮುತ್ತೂರು ಬೀದಿಯಲ್ಲಿರುವ ಶ್ರೀ ಕರಗದಮ್ಮದೇವಿಯ ಐತಿಹಾಸಿಕ ಹೂವಿನ ಕರಗ ಮಹೋತ್ಸವವು ಗುರುವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.

ಕರಗದ ಪ್ರಯುಕ್ತ ನಗರದ ಅಶೋಕರಸ್ತೆಯ ಹೂವಿನ ವೃತ್ತ ಸೇರಿದಂತೆ ಮುತ್ತೂರು ಬೀದಿಯ ಅಶ್ವತ್ಥಕಟ್ಟೆ ಬಳಿ ಕರಗದ ಪ್ರಯುಕ್ತ ವಾದ್ಯಗೋಷ್ಠಿ ಆಯೋಜಿಸಲಾಗಿತ್ತು.

ಮುಳಬಾಗಿಲು ವೆಂಕಟೇಶ್ ರಾತ್ರಿಯಿಡೀ ಕರಗವನ್ನು ಹೊತ್ತು ತಮಟೆಯ ವಾದನ ತಂಡದೊಂದಿಗೆ ಊರೆಲ್ಲಾ ಸುತ್ತಿದಾಗ ದಾರಿಯುದ್ದಕ್ಕೂ ಮಲ್ಲಿಗೆ ಹೂಗಳನ್ನು ಅರ್ಪಿಸಿ, ಆರತಿ ಬೆಳಗುತ್ತಿದ್ದರು. ಕೆಲವೆಡೆ ಕರಗದ ಆಗಮನಕ್ಕಾಗಿ ರಸ್ತೆಯ ಮೇಲೆಲ್ಲಾ ರಂಗೋಲಿಯನ್ನು ಬಿಡಿಸಲಾಗಿತ್ತು. ರಸ್ತೆಯನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ವೀರಕುಮಾರರು ಅಲಗು ಸೇವೆ ಮಾಡಿದರು. ಹಲಗೆ, ತಮಟೆ ವಾದ್ಯಗಳೊಂದಿಗೆ ಕರಗ ದೇವಾಲಯದ ಪ್ರದಕ್ಷಿಣೆ ಮಾಡಿ ನರ್ತಿಸಿತು. ಮುಂದೆ ಕತ್ತಿ ಹಿಡಿದ ವೀರಕುಮಾರರು, ಹಿಂದೆ ಕುಣಿಯುತ್ತಾ ಕರಗ ರಾತ್ರಿಯಿಡೀ ಊರೆಲ್ಲಾ ಸಂಚರಿಸಿತು. ಪ್ರತಿಯೊಬ್ಬರೂ ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ ಅಲ್ಲಿಗೆ ಕರಗ ಬರುತ್ತಿದ್ದಂತೆ ಭಕ್ತಿಯಿಂದ ಆರತಿ ಬೆಳಗಿ ಮಲ್ಲಿಗೆ ಹೂಗಳನ್ನು ಸಮರ್ಪಿಸಿದರು. ಊರಿನ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಶುಕ್ರವಾರ ಒನಕೆ ಕರಗ ಮತ್ತು ಅಗ್ನಿಕುಂಡವನ್ನು ದೇವಸ್ಥಾನದ ಬಳಿ ನಡೆಸಲಾಯಿತು.


Huvina Karaga Mahotsav of Sri Karagadammadevi Celebrated with Grandeur in Sidlaghatta Town

Sidlaghatta : The historical Huvina Karaga Mahotsava of Sri Karagadammadevi, held annually in Muttur Street, Sidlaghatta city, was celebrated on Thursday night with grandeur and splendor.

As a tribute to Karagadamma Devi, an instrumental concert was organized near Ashwatthakatte on Muttur Street, accompanied by the flower circle of Asoka Road in the city.

The event commenced with Venkatesh carrying Karaga throughout the night, leading a troupe of tamate players, offering jasmine flowers en route and lighting aarti. Rangolis were drawn all over the road to welcome the arrival of Karaga at certain locations. The road was decorated with vibrant electric lights.

Veerakumars provided separate service, dancing around the Karaga temple with a board and tamate instruments. Warriors holding swords danced behind him as Karaka paraded around the town all night. The devotees decorated the entrance of their houses with rangoli and lit aarti with devotion, offering jasmine flowers to the procession. Special pujas and food offerings were arranged in the significant temples of the town.

On Friday, Onake Karaga and Agnikunda were conducted near the temple.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version