Home News ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಶ್ರೀರಾಮನವಮಿ ಹಬ್ಬ ಆಚರಣೆ

ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಶ್ರೀರಾಮನವಮಿ ಹಬ್ಬ ಆಚರಣೆ

Special Pujas, Offerings, and Programs Mark the Occasion

0

Sidlaghatta : ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಶ್ರದ್ದಾ, ಭಕ್ತಿಯಿಂದ ಶ್ರೀರಾಮನವಮಿ ಹಬ್ಬವನ್ನು ಆಚರಿಸಲಾಯಿತು.

ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೆಟ್ ಬಳಿಯಿರುವ ಬಯಲಾಂಜನೇಯಸ್ವಾಮಿ ದೇವಾಲಯದಲ್ಲಿ ಗುರುವಾರ ಶ್ರೀರಾಮನವಮಿ ಹಬ್ಬವನ್ನು ವಿಶೇಷ ಹೋಮ, ಪೂಜೆಸಲ್ಲಿಸಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಬಯಲಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀರಾಮನವಮಿಯ ಪ್ರಯುಕ್ತ ದೇವರಿಗೆ ವಿಶೇಷವಾಗಿ ಅಲಂಕರಿಸಲಾಗಿತ್ತು. ಶ್ರೀರಾಮನವಮಿಯ ಪ್ರಯುಕ್ತ ದೇವಾಲಯದ ಆವರಣದಲ್ಲಿ ಜಾತ್ರೆಯ ವಾತಾವರಣ ಸೃಷ್ಟಿಯಾಗಿತ್ತು. ವಿವಿಧ ರೀತಿಯ ಅಂಗಡಿ ಮುಂಗಟ್ಟುಗಳು, ತಿನಿಸುಗಳ ಮಾರಾಟ, ಆಟಿಕೆಗಳು, ಅಚ್ಚೆ ಹಾಕುವವರು ಕಂಡುಬಂದರು. ಭಕ್ತರಿಗೆಲ್ಲಾ ಮಜ್ಜಿಗೆ, ಹೆಸರುಬೇಳೆ ವಿತರಿಸಲಾಯಿತು.

Image of devotees worshipping Lord Rama and Goddess Sita during Sri Rama Navami celebration

ನಗರದ ಚಿಂತಾಮಣಿ ರಸ್ತೆಯ ಶ್ರೀ ವೀರಾಂಜನೇಯಸ್ವಾಮಿ ದೇವಾಲಯ, ನಗರದ ಕೋಟೆ ವೃತ್ತದ ಶ್ರೀರಾಮ ದೇವಾಲಯ, ಇದ್ಲೂಡು ರಸ್ತೆಯ ಶ್ರೀ ಶನೇಶ್ವರಸ್ವಾಮಿ ದೇವಾಲಯ ಸೇರಿದಂತೆ ಜಂಗಮಕೋಟೆ, ನಾಗಮಂಗಲ, ಮೇಲೂರು, ಹುಣಸೇನಹಳ್ಳಿ ಸ್ಟೇಷನ್, ಎಚ್.ಕ್ರಾಸ್, ಮಳಮಾಚನಹಳ್ಳಿ ಮುಂತಾದೆಡೆ ಶ್ರೀರಾಮನವಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಶ್ರೀರಾಮ, ಆಂಜನೇಯ ದೇವಾಲಯಗಳು ಸೇರಿದಂತೆ ಎಲ್ಲಾ ದೇಗುಲಗಳಲ್ಲೂ ವಿಶೇಷ ಪೂಜೆಗಳನ್ನು ನಡೆಸಿ ಭಕ್ತರಿಗೆ ಸೌತೆಕಾಯಿ ಹೆಸರುಬೇಳೆ ಮತ್ತು ಪಾನಕವನ್ನು ವಿತರಿಸಿದರು.

ಚಿಂತಾಮಣಿ ರಸ್ತೆಯಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಉಟ್ಲು ಕಂಬದ ಪೂಜೆ, ಕ್ಷೀರ ಉಟ್ಲು ಮಹೋತ್ಸವ ಹಾಗೂ ಮನರಂಜನಾ ಉಟ್ಲೋತ್ಸವವನ್ನು ನಡೆಸಿದರು.

ನಗರದ ಕಾಂಗ್ರೆಸ್ ಭವನದ ಮುಂಭಾಗದಲ್ಲಿ ಗುರುವಾರ ವಾಹನ ಚಾಲಕ ಹಾಗೂ ಮಾಲೀಕರ ಸಂಘಟನೆಯ ಹಿಂದೂ, ಮುಸ್ಲೀಂ ಸದಸ್ಯರು ಒಗ್ಗೂಡಿ ಶ್ರೀರಾಮನವಮಿ ಹಬ್ಬವನ್ನು ಆಚರಿಸಿದ್ದು ವಿಶೇಷವಾಗಿತ್ತು. ಪೆಂಡಾಲ್ ಹಾಕಿ ಶ್ರೀರಾಮನ ಭಾವಚಿತ್ರಕ್ಕೆ ಎಲ್ಲರೂ ಪೂಜೆ ಸಲ್ಲಿಸಿ, ಕೋಮು ಸೌಹಾರ್ದಕ್ಕೆ ನಾಂದಿ ಹಾಡುವ ಮೂಲಕ ನಾಗರೀಕರ ಮೆಚ್ಚುಗೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಅವರೆಲ್ಲರೂ ಸಾರ್ವಜನಿಕರಿಗೆ ಪಾನಕ ಹೆಸರುಬೆಳೆ ಕೋಸಂಬರಿಯನ್ನು ವಿತರಿಸಿ ಸಂಭ್ರಮಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿ ಗ್ರಾಮದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ನಾಲ್ಕನೇ ವರ್ಷದ ಒಂದು ದಿನ ರಾಮಕೋಟಿ ಕಾರ್ಯಕ್ರಮ ಹಾಗೂ ಶ್ರೀ ಗುಟ್ಟಾಂಜನೇಯ ಸ್ವಾಮಿ ದೇವಾಲಯದ ಬಳಿ ಶ್ರೀರಾಮನವಮಿ ಪ್ರಯುಕ್ತ ಬ್ರಹ್ಮರಥೋತ್ಸವ, ಕ್ಷೀರ ಉಟ್ಲು ಹಾಗೂ ಕಾಯಿ ಉಟ್ಲು ಕಾರ್ಯಕ್ರಮವನ್ನು ಬಾರಿ ಶ್ರಧಾಭಕ್ತಿಯಿಂದ ಆಚರಿಸಲಾಯಿತು.

ಶ್ರೀ ಗುಟ್ಟಾಂಜನೇಯಸ್ವಾಮಿ ದೇವಾಲಯದ ಬಳಿ ಬ್ರಹ್ಮರಥೋತ್ಸವ, ಕ್ಷೀರ ಉಟ್ಲು ಹಾಗೂ ಕಾಯಿ ಉಟ್ಲು ಕಾರ್ಯಕ್ರಮವನ್ನು ವೀಕ್ಷಿಸಲು ಬೆಳ್ಳೂಟಿ, ಹಿತ್ತಲಹಳ್ಳಿ, ಆನೂರು, ಜಪ್ತಿಹೊಸಹಳ್ಳಿ ಹಾಗೂ ಬೋದಗೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಜನ ವೀಕ್ಷಿಸಲು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ಶ್ರೀರಾಮ ನವಮಿ ಪ್ರಯುಕ್ತ ಶ್ರೀ ಗುಟ್ಟಾಂಜನೇಯ ಸ್ವಾಮಿಯವರಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ಶ್ರೀ ಆಂಜನೇಯಸ್ವಾಮಿ ದೇವರಿಗೆ ಅಭಿಮುಖವಾಗಿ ಹಾಲು ಉಟ್ಲು ಕಾರ್ಯಕ್ರಮವನ್ನು ನಡೆಸಲಾಯಿತು.


Sri Rama Navami Celebrated with Devotion at Various Temples

Sidlaghatta : Sri Rama Navami was celebrated with great devotion at several temples including Sri Veeranjaneyaswamy Temple on Chintamani Road, Sri Rama Temple on Fort Circle, Sri Shaneswaraswamy Temple on Idludu Road, Jangamkote, Nagamangala, Melur, Hunasenahalli Station, H. Cross, Malamachanahalli, etc. Special pujas were conducted at all the temples, including Sri Rama and Anjaneya temples, and cucumber hesarubele and panaka were distributed to the devotees.

At the Veeranjaneyaswamy Temple on Chintamani Road, Utlu Kamba Puja, Ksheera Utlu Mahotsava, and entertainment Utlotsava were conducted.

In the city, Hindu and Muslim members of the Motor Vehicle Drivers and Owners Association celebrated Sri Ram Navami together in front of the Congress Bhavan. They worshipped the portrait of Lord Rama with a pendal and won the appreciation of the citizens by promoting communal harmony. Kosambari was distributed to the public on this occasion.

The fourth annual day of the Ramakoti program was celebrated at Sri Ranganathaswamy temple in Belluti village of Shidlaghatta taluk, and Brahmarathotsav, Ksheera Utlu, and Kai Utlu program were celebrated near Sri Guttanjaneya Swamy temple with great devotion.

Hundreds of people from surrounding villages, including Belluti, Hittalahalli, Anur, Japtihosahalli, and Bodaguru, participated in witnessing the Brahmarathotsava, Ksheera Utlu, and Coconut Utlu program near Sri Guttanjaneyaswamy Temple and were blessed by God.

On the occasion of Sri Rama Navami, special flower decoration was done to Sri Guttanjaneya Swami, and after worshipping the deity, a milk utlu program was held in front of Sri Anjaneyaswamy.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version