Home News ಶಿಡ್ಲಘಟ್ಟದ ಶಿಕ್ಷಕಿಯರ ‘ಸಕ್ಸಸ್’ ತಂಡ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ

ಶಿಡ್ಲಘಟ್ಟದ ಶಿಕ್ಷಕಿಯರ ‘ಸಕ್ಸಸ್’ ತಂಡ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ

0
Sidlaghatta Teachers group dance team National Selection

Sidlaghatta : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಶಿಡ್ಲಘಟ್ಟದ ಸರ್ಕಾರಿ ಶಾಲಾ ಶಿಕ್ಷಕಿಯರ ಸಕ್ಸಸ್ ತಂಡವು ಸಾಂಸ್ಕೃತಿಕ ಸ್ಪರ್ಧೆಯ ಸಾಮೂಹಿಕ ಜಾನಪದ ನೃತ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಶಿಕ್ಷಕಿಯರಾದ ಶೈಲಜ, ಸರಿತ, ಚೈತ್ರ, ಉಷಾ, ಚೂಡಾಮಣಿ, ಸೌಮ್ಯ, ಶಿವಲೀಲಾ ಜಾನಪದ ನೃತ್ಯ ಪ್ರದರ್ಶಿಸಿದ್ದು ಕೃಷ್ಣಪ್ಪ, ನಾರಾಯಣಸ್ವಾಮಿ ಮತ್ತು ಮಂಜುನಾಥ್ ಅವರು ಹಿನ್ನಲೆ ಗಾಯಕರಾಗಿ, ಸಂಗೀತ ವಾಧ್ಯ ನುಡಿಸಿದ್ದಾರೆ.

ಪಾಂಡಿಚೆರಿಯಲ್ಲಿ ರಾಷ್ಟ್ರ ಮಟ್ಟದ ಕ್ರೀಡಾ ಕೂಟ ನಡೆಯಲಿದ್ದು ಅಲ್ಲಿ ಶಿಡ್ಲಘಟ್ಟದ ಸಕ್ಸಸ್ ತಂಡದ ಶಿಕ್ಷಕಿಯರ ತಂಡವು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದು ತಾಲ್ಲೂಕು, ಜಿಲ್ಲೆಯ ಹೆಸರು ಅಲ್ಲಿಯೂ ಬೆಳಗಲಿದೆ ಎಂದು ಕರ್ನಾಟಕ ಯುವ ಸಂಘ ಸಂಸ್ಥೆಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಣೀಂದ್ರ ಪ್ರಸಾದ್ ತಿಳಿಸಿದ್ದಾರೆ. ರಾಷ್ಟ್ರೀಯ ಕ್ರೀಡಾ ಕೂಟಕ್ಕೆ ಆಯ್ಕೆಯಾದ ತಂಡಕ್ಕೆ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version