Home News KPCC ಅಧ್ಯಕ್ಷರಿಗೆ INTUC ಮುಖಂಡರ ಮನವಿ: ಕಾಂಗ್ರೆಸ್ ಕಾರ್ಯಕರ್ತರನ್ನು ಉಳಿಸಲು ಮಧ್ಯಪ್ರವೇಶಕ್ಕೆ ಒತ್ತಾಯ

KPCC ಅಧ್ಯಕ್ಷರಿಗೆ INTUC ಮುಖಂಡರ ಮನವಿ: ಕಾಂಗ್ರೆಸ್ ಕಾರ್ಯಕರ್ತರನ್ನು ಉಳಿಸಲು ಮಧ್ಯಪ್ರವೇಶಕ್ಕೆ ಒತ್ತಾಯ

0

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕಾಂಗ್ರೆಸ್ನಲ್ಲಿ ಉಂಟಾಗಿರುವ ಒಡಕನ್ನು ಬಗೆಹರಿಸಿ ಕಾರ್ಯಕರ್ತರನ್ನು ಉಳಿಸಬೇಕು ಎಂದು INTUC ರಾಜ್ಯ ಸಂಘಟನಾ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರ ಅವರು KPCC ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.

ಬೆಂಗಳೂರಿನ KPCC ಕಚೇರಿಯಲ್ಲಿ ಹರಿಪ್ರಸಾದ್ ಅವರನ್ನು ಭೇಟಿ ಮಾಡಿ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದ ಮುನೀಂದ್ರ ಅವರು, ‘ಶಿಡ್ಲಘಟ್ಟ ಕಾಂಗ್ರೆಸ್ ರಕ್ಷಿಸಿ, ಕಾರ್ಯಕರ್ತರನ್ನು ಉಳಿಸಿ’ ಎಂದು ಒತ್ತಾಯಿಸಿದರು.

INTUC state organising secretary Kundalagurki Munindra memorandum letter to KPCC president Hariprasad

ಮನವಿಯಲ್ಲಿ ಏನೆಲ್ಲ ಹೇಳಲಾಗಿದೆ?

ರಾಜ್ಯದಾದ್ಯಂತ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಈಗಾಗಲೇ ಮೀಸಲಾತಿ ನಿಗದಿಯಾಗಿದ್ದು, ಕಾರ್ಯಕರ್ತರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಪೈಪೋಟಿ ನಡೆಸುತ್ತಿದ್ದಾರೆ. ಆದರೆ ತಾಲ್ಲೂಕಿನ ಕಾಂಗ್ರೆಸ್‌ನಲ್ಲಿ ‘ಒಂದು ಮನೆಗೆ ಮೂರು ಬಾಗಿಲು’ ಎಂಬಂತೆ ಒಡಕು ಉಂಟಾಗಿದೆ ಎಂದು ಮುನೀಂದ್ರ ಹೇಳಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಹಾಗೂ KPCC ತಕ್ಷಣ ಮಧ್ಯಪ್ರವೇಶಿಸಿ ಕಾರ್ಯಕರ್ತರನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಸಮೀಪಿಸುತ್ತಿದ್ದರೂ ಯಾವ ಕಾರ್ಯಕರ್ತರಿಗೂ ನಿಗಮ–ಮಂಡಳಿಗಳಲ್ಲಿ ಸ್ಥಾನ ಘೋಷಣೆಯಾಗಿಲ್ಲ; ಇದರಿಂದ ಕಾರ್ಯಕರ್ತರು ಉತ್ಸಾಹ ಕಳೆದುಕೊಂಡು ಕೆಲಸ ಮಾಡುವಂತಾಗಿದೆ ಎಂದು ಅವರು ಹೇಳಿದರು. ಬಣ ರಾಜಕೀಯ ಆರಂಭವಾಗಿರುವುದರಿಂದ ಯಾವ ಬಣದೊಂದಿಗೆ ಗುರುತಿಸಿಕೊಳ್ಳಬೇಕು ಎಂಬುದು ಕಾರ್ಯಕರ್ತರಿಗೆ ನೋವಿನ ವಿಷಯವಾಗಿದೆ ಎಂದು ತಿಳಿಸಿದರು.

ಹೈಕಮಾಂಡ್‌ಗೆ ಏನು ಮನವಿ?

ಹೈಕಮಾಂಡ್ ತಕ್ಷಣ ಸೂಕ್ತ ನಿರ್ಧಾರ ಕೈಗೊಂಡು ಎಲ್ಲರನ್ನೂ ಒಗ್ಗೂಡಿಸಿ ಶಿಡ್ಲಘಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಮುಂದಾಗಬೇಕು ಎಂದು ಮುನೀಂದ್ರ ಮನವಿ ಮಾಡಿದರು. ತಾಲ್ಲೂಕಿನ ಪಕ್ಷದ ಕಾರ್ಯಕರ್ತರು ನಿಷ್ಠಾವಂತರಾಗಿದ್ದು, ಪಕ್ಷದ ಮತಗಳು ಹಾಗೆಯೇ ಇವೆ; ಎಲ್ಲರೂ ಒಂದಾದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ ಎಂಬುದು ಸಾರ್ವಜನಿಕರ ಮಾತಾಗಿದೆ ಎಂದು ಅವರು ಹೇಳಿದರು.

ಮನವಿಗೆ ಸ್ಪಂದಿಸಿದ KPCC ಅಧ್ಯಕ್ಷರು, ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುವುದಾಗಿ ಭರವಸೆ ನೀಡಿದರು ಎಂದು ತಿಳಿಸಲಾಗಿದೆ.

In English: INTUC state organising secretary Kundalagurki Munindra submitted a memorandum to KPCC (Karnataka Pradesh Congress Committee) president B.K. Hariprasad at the KPCC office in Bengaluru, urging the party to resolve what he described as a split in the Sidlaghatta taluk Congress and ‘save the workers’, as reservations for taluk and zilla panchayat elections have already been fixed. He said no worker has been given a board or corporation post although the government is nearing three years in office, and that factional politics has left workers unsure whom to align with. He urged the high command to unite everyone, and Mr. Hariprasad reportedly assured that the issue would be resolved soon. These are Munindra’s own statements.

For Daily Updates WhatsApp ‘HI’ to 7406303366

error: Content is protected !!
Exit mobile version