Home News 150 ವಿಶಿಷ್ಟ ಕನ್ನಡ ಕಾರ್ಯಕ್ರಮಗಳನ್ನು ಪೂರೈಸಿದ ಶಿಡ್ಲಘಟ್ಟ ಕಸಾಪ

150 ವಿಶಿಷ್ಟ ಕನ್ನಡ ಕಾರ್ಯಕ್ರಮಗಳನ್ನು ಪೂರೈಸಿದ ಶಿಡ್ಲಘಟ್ಟ ಕಸಾಪ

0
Kannada Sahitya Parishat sidlaghatta

ಹಂಡಿಗನಾಳ‌ದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಗ್ರಾಮ ಪಂಚಾಯಿತಿ, ತಾಲ್ಲೂಕು ಕಸಾಪ ಹಾಗೂ ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ ಮತ್ತು ಶ್ರೀ ಸಾಯಿಬಾಬಾ ಸಂಜೀವಿನಿ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ 151 ನೇ ಕಸಾಪ ಕಾರ್ಯಕ್ರಮ, ಮಹಿಳಾ ದಿನಾಚರಣೆ ಮತ್ತು  ಹಂಡಿಗನಾಳ ಗ್ರಾಮ ಪಂಚಾಯಿತಿಯ ಗ್ರಾಮಸಭೆ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಸುಗಟೂರು ಅಮರನಾರಾಯಣ ಮಾತನಾಡಿದರು.

ಹೆಣ್ಣುಮಕ್ಕಳೇ ಮನೆ, ಗ್ರಾಮವನ್ನು ಅಭಿವೃದ್ಧಿಪಡಿಸಲು ಮೂಲ ಕಾರಣರು. ಮಳೆ ಬರಬೇಕಾದರೆ ಹಸಿರು ವನ ಮುಖ್ಯ. ಗಿಡನೆಟ್ಟು ಹಸಿರು ವಾತಾವರಣ ಸೃಷ್ತಿಸಿ, ಕನ್ನಡ ಉಳಿಸಿ ಬೆಳೆಸಿ, ಸ್ವಚ್ಛತೆಗೆ ಆದ್ಯತೆ ನೀಡಿ, ಆರೋಗ್ಯ ಕಾಪಾಡಿಕೊಳ್ಳಿ, ಮಕ್ಕಳಿಗೆ ಉತ್ತಮ ವಿದ್ಯಾಬ್ಯಾಸ ಕೊಡಿಸಿ, ಮಹಿಳೆಯರನ್ನು ಗೌರವಿಸದಿರುವ ಯಾವ ಗ್ರಾಮವಾಗಲಿ, ನಗರವಾಗಲಿ, ಪಟ್ಟಣವಾಗಲಿ, ದೇಶವಾಗಲಿ  ಉದ್ದಾರವಾಗಿರುವ ನಿದರ್ಶನವಿಲ್ಲ. ತಾಯಿ ಸಮಾನರಾದ ಮಹಿಳೆಯರನ್ನು ಎಲ್ಲರೂ ಗೌರವಿಸಬೇಕೆಂದು ಅವರು ತಿಳಿಸಿದರು.

 ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನಗಳನ್ನು ವಿತರಿಸಲಾಯಿತು. ತಾಲ್ಲೂಕು ಕಸಾಪ ಇದುವರೆಗೂ ಕನ್ನಡ ಬೆಳೆಸಲು 150 ವೈವಿಧ್ಯಮಯ ಕಾರ್ಯಕ್ರಮವನ್ನು ಆಯೋಜಿಸಿರುವುದಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಸುಗಟೂರು ಅಮರನಾರಾಯಣ ಅವರು ಅಭಿನಂದನಾ ಪತ್ರವನ್ನು ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಅವರಿಗೆ ನೀಡಿದರು.

ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ಸದಸ್ಯ ಸಿ.ಪಿ.ಇ.ಕರಗಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿರೆಡ್ಡಿ ಮಾತನಾಡಿದರು. ಗ್ರಾಮ ಪಂಚಾಯಿತಿ ಉಪಾದ್ಯಕ್ಷೆ ವೆಂಕಟಲಕ್ಷ್ಮಮ್ಮ, ಸದಸ್ಯರಾದ ಜಯರಾಮ್, ಸುದೀಪ್, ದ್ಯಾವಪ್ಪ, ಮುನಿಯಪ್ಪ, ಗೀತಾ, ಮಂಜುಳಮ್ಮ, ರಸಿಕ, ನಾರಾಯಣಪ್ಪ, ನಾಗರಾಜ್, ವೆಂಕಟರತ್ನ, ಗಂಗರತ್ನ, ಮಂಜುಳಮ್ಮ, ಪಿಡಿಒ ಅಂಜನ್ ಕುಮಾರ್, ಕಾರ್ಯದರ್ಶಿ ಶ್ರೀನಿವಾಸ್, ಎಪ್.ಇ.ಎಸ್.ಸಂಸ್ಥೆಯ ಕಾರ್ಯದರ್ಶಿ ನಿಕತ್, ತ್ರಿಭುವನೇಶ್ವರಿ, ಮುಖ್ಯಶಿಕ್ಷಕಿ ಶೋಭಾರಾಣಿ, ಸುಜಾತ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version