Home News ಕನ್ನಡ ಸಾಹಿತ್ಯ ಪರಿಷತ್‌ನಿಂದ ಡಾ.ರಾಜ್‌ ಕುಮಾರ್ ಜನ್ಮ ದಿನಾಚರಣೆ

ಕನ್ನಡ ಸಾಹಿತ್ಯ ಪರಿಷತ್‌ನಿಂದ ಡಾ.ರಾಜ್‌ ಕುಮಾರ್ ಜನ್ಮ ದಿನಾಚರಣೆ

0
Sidlghatta KASAPA Dr Rajkumar Birth Anniversary

Sidlaghatta : “ಡಾ.ರಾಜ್‌ಕುಮಾರ್ ಅವರು ಪಾತ್ರವನ್ನೇ ಅನುಭವಿಸುತ್ತಿದ್ದರು, ನಟನೆ ಮಾಡುತ್ತಿರಲಿಲ್ಲ. ತಮ್ಮ ಕಲೆಯಿಂದ ಸಮಾಜದ ಹೃದಯವನ್ನು ಮುಟ್ಟಿದ ಅವರು, ಕನ್ನಡ ಚಲನಚಿತ್ರರಂಗದ ಮಾತ್ರವಲ್ಲದೆ ವಿಶ್ವ ಸಿನಿರಂಗದ ಮಾದರಿ ನಟರಾಗಿದ್ದಾರೆ,” ಎಂದು ವಾಸವಿ ಶಾಲೆಯ ಕಾರ್ಯದರ್ಶಿ ರೂಪಸಿ ರಮೇಶ್ ತಿಳಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗುರುವಾರ ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ ಆವರಣದಲ್ಲಿ ಆಯೋಜಿಸಲಾಗಿದ್ದ ವರನಟ ಡಾ.ರಾಜ್‌ಕುಮಾರ್ ಜನ್ಮದಿನಾಚರಣೆ ಹಾಗೂ ಕನ್ನಡ ಗೀತಗಾಯನ ಕಾರ್ಯಕ್ರಮದಲ್ಲಿ ಅವರು ಈ ಮಾತು ಹೇಳಿದರು.

“ಡಾ.ರಾಜ್‌ಕುಮಾರ್ ಅವರು ತಮ್ಮ ಸಿನಿಮಾದ ಮೂಲಕ ಸಮಾಜಕ್ಕೆ ದಿಕ್ಕು ತೋರಿದವರು. ಅವರ ಹಲವು ಪಾತ್ರಗಳು ಜನರಲ್ಲಿ ಚಿಂತನೆಯನ್ನು ಮೂಡಿಸಿದವು. ಅವರ ಕೆಲವು ಚಿತ್ರಗಳ ಪರಿಣಾಮವಾಗಿ ಹಲವರು ಸರ್ಕಾರಿ ಕೆಲಸ ಬಿಟ್ಟು ಗ್ರಾಮೀಣ ಬದುಕು ಹಾಗೂ ಕೃಷಿಯನ್ನು ಆರಿಸಿಕೊಂಡರು ಎಂಬ ನಿಜಘಟನೆಗಳು ಇವೆ,” ಎಂದು ನೆನಪಿಸಿದರು.

ಕಾರ್ಯಕ್ರಮದಲ್ಲಿ ಡಾ.ರಾಜ್‌ಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ನಮನ ಅರ್ಪಿಸಲಾಯಿತು. ಕಲಾವಿದರು ಮುನಿರಾಜು, ನಾಗಭೂಷಣ್, ನಾರಾಯಣಸ್ವಾಮಿ ಡಾ.ರಾಜ್‌ಕುಮಾರ್ ಅಭಿನಯದ ಹಿತಗೀತೆಗಳನ್ನು ಹಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾರಾಯಣಸ್ವಾಮಿ, ಮಂಜುನಾಥ್, ಶ್ಯಾಮಸುಂದರ್, ದೇವರಾಜ್, ಮುನಿರಾಜು, ಶ್ರೀನಿವಾಸ್ ಆಚಾರಿ, ಮುನಿನಾರಾಯಣಪ್ಪ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version