
Sidlaghatta : ಭಾರತೀಯ ಸಾಂಸ್ಕೃತಿಕ ಕಲೆಯಾದ ಕರಗ ಮಹೋತ್ಸವವು ಅತ್ಯಂತ ಹಳೆಯದಾದ ಜಾನಪದ ಹಬ್ಬವಾಗಿದೆ. ಕರಗ ಮಹೋತ್ಸವವನ್ನು ಶ್ರದ್ಧಾ ಭಕ್ತಿ ಭಾವದಿಂದ ಮತ್ತು ಸೌಹಾರ್ಧಯುತವಾಗಿ ಆಚರಿಸಬೇಕೆಂದು ಚಿಂತಾಮಣಿ ಉಪ ವಿಭಾಗದ ಡಿವೈಎಸ್ಪಿ ಪಿ.ಮುರಳಿಧರ್ ತಿಳಿಸಿದರು
ನಗರದ ಬೈಪಾಸ್ ರಸ್ತೆಯಲ್ಲಿರುವ ಶ್ರೀ ಪೂಜಮ್ಮ ದೇವಿ ದೇವಾಲಯದ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಾಗೂ ಪೋಲಿಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಶಾಂತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕರಗ ಮಹೋತ್ಸವದ ನಾನಾ ಧಾರ್ಮಿಕ ಕಾರ್ಯಗಳು, ಹಸಿ ಕರಗ ಮತ್ತು ಹೂವಿನ ಕರಗ ಮಹೋತ್ಸವ, ಸಾರ್ವಜನಿಕವಾಗಿ ನಡೆಯುವ ರಸ ಸಂಜೆ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಕರಗ ಮಹೋತ್ಸವವು ಭಾವೈಕ್ಯತೆಯ ಸಂಕೇತವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲಾ ಧರ್ಮದವರು ಮತ್ತು ಸಮುದಾಯದವರು ಒಂದಾಗಿ ಹಬ್ಬವನ್ನು ಆಚರಿಸಬೇಕು. ಹಬ್ಬದ ಸುಗಮ ನಿರ್ವಹಣೆಗೆ ಸಾರ್ವಜನಿಕರು ಮತ್ತು ಉತ್ಸವ ಸಮಿತಿಯವರು ಪೊಲೀಸರೊಂದಿಗೆ ಪೂರ್ಣವಾಗಿ ಸಹಕರಿಸಬೇಕು ಎಂದರು.
ತಹಶೀಲ್ದಾರ್ ಎನ್.ಗಗನ ಸಿಂಧು ಮಾತನಾಡಿ, ಕರಗ ಮಹೋತ್ಸವವನ್ನು ಶ್ರದ್ಧಾ, ಭಕ್ತಿ, ಭಾವೈಕ್ಯತೆಯಿಂದ ಆಚರಿಸುವಂತೆ ಹೇಳಿದರು
ಸರ್ಕಲ್ ಇನ್ಸ್ ಪೆಕ್ಟರ್ ಜೆ.ಎನ್.ಆನಂದ್ ಕುಮಾರ್ ಮಾತನಾಡಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪೂಜೆ ಪುನಸ್ಕಾರಗಳು ಹಾಗೂ ಕರಗ ಮಹೋತ್ಸವದ ಅಂಗವಾಗಿ ಆಯೋಜಿಸುವ ವಾದ್ಯಗೋಷ್ಠಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಯೋಜಕರು ಸಂಬಂಧಪಟ್ಟ ಬೆಸ್ಕಾಂ , ನಗರಸಭೆ ಮತ್ತು ಪೋಲಿಸ್ ಇಲಾಖೆಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ವಾದ್ಯಗೋಷ್ಠಿಗಳ ವೇದಿಕೆಗಳಿಂದ ಸಾರ್ವಜನಿಕರಿಗೆ ವಾಹನ ಸವಾರರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಆಯೋಜಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಠಾಣೆ ಪಿ.ಎಸ್.ಐ ಎಂ.ವೇಣುಗೋಪಾಲ್, ನಗರಸಭೆ ಪೌರಾಯುಕ್ತೆ ಜಿ.ಅಮೃತಾ, ಬೆಸ್ಕಾಂ ಇಲಾಖೆ ಎ.ಇ ಅನಂತ್ , ಶ್ರೀಪೂಜಮ್ಮ ದೇವಿ ದೇವಾಲಯ ಸೇವಾಭಿವೃದ್ದಿ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಚಿಕ್ಕಮುನಿಯಪ್ಪ, ಉಪಾಧ್ಯಕ್ಷ ಆರ್. ಗಣೇಶ್, ಎಂ.ನರಸಿಂಹ, ಕೆ.ಮಂಜುನಾಥ್, ಖಜಾಂಚಿ ಎಂ.ಚಿಕ್ಕಮುನಿಯಪ್ಪ, ಕಾರ್ಯದರ್ಶಿ ಯಾ.ಮಾ. ನಾರಾಯಣಸ್ವಾಮಿ, ಮುಖಂಡರಾದ ನಾಗನರಸಿಂಹ, ಕೆ.ನರಸಿಂಹಮೂರ್ತಿ, ಎಸ್.ಎಂ.ರಮೇಶ್, ಎಂ.ನಾಗರಾಜು, ಕೆ.ರವಿಶಂಕರ್, ಕೆ.ನಾರಾಯಣಸ್ವಾಮಿ, ಮುನಿಕೃಷ್ಣ, ಎನ್.ದ್ಯಾವಪ್ಪ, ಎ.ನರಸಿಂಹಮೂರ್ತಿ, ಎಂ.ಗುರುಮೂರ್ತಿ ಹಾಜರಿದ್ದರು